ಸುದ್ದಿಲೈವ್/ಭದ್ರಾವತಿ
ಭದ್ರಾವತಿಯಲ್ಲಿ ಮರಳು ದಂಧೆಯ ಮೇಲೆ ದಾಳಿ ಮಾಡಿದ ಮಹಿಳಾ ಅಧಿಕಾರಿಗಳಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋವೊಂದನ್ನ ಕೆಆರ್ ಎಸ್ ನ ರವಿಕೃಷ್ಣಾರೆಡ್ಡಿ, ದಿ. ಅಪ್ಪಾಜಿ ಗೌಡರ ಪುತ್ರ ಅಜಿತ್ ಗೌಡರು ಫೆಸ್ ಬುಕ್ ನಲ್ಲಿ ಹರಿ ಬಿಟ್ಟ ಬಳಿಕ ಭದ್ರಾವತಿಯಲ್ಲಿ ಫೇಸ್ ಬುಕ್ ನ ಪೋಸ್ಟ್ ವಾರ್ ಗಳು ಮುಂದು ವರೆದಿದೆ.
ಅಜಿತ್ ಗೌಡರು ನೇರವಾಗಿ ಶಾಸಕ ಬಿಕೆ ಸಂಗಮೇಶ್ ಅವರ ಪುತ್ರ ಬಸವೇಶ್ ಅವರಿಂದಲೇ ಈ ಕೃತ್ಯ ನಡೆದಿದೆ ಎಂದು ಪೋಸ್ಟ್ ಮಾಡಿದ ಬಳಿಕ ಬಸವೇಶ್ ಬಸವ ಎಂಬ ಪೇಜ್ ನಲ್ಲಿ ಪೋಸ್ಟ್ ವೊಂದು ಹರಿಬಿಡಲಾಗಿದ್ದು, ಶಾಸಕ ಸಂಗಮೇಶ್, ಬಸವೇಶ್ ಮತ್ತೋರ್ವ ಪುತ್ರರ ಫೊಟೊದಲ್ಲಿ ಈ ಕೆಳಕಂಡ ಪೋಸ್ಟ್ ವೊಂದು ಹರಿಬಿಡಲಾಗಿದೆ.
ಭದ್ರಾವತಿಯ ಜನತೆಗೆ ನನ್ನ ನಮಾಸ್ಕರಗಳು. ಎಲ್ಲರಿಗೂ ತಿಳಿದಿರುವ ಹಾಗೆ ನನ್ನ ಮೇಲೆ ನನ್ನ ಕುಟುಂಬದ ಮೇಲೆ ಮೇಲೆ ಹಲವು ವರ್ಷಗಳಿಂದ ಬಿಜೆಪಿ-ಜೆಡಿಎಸ್ ನಾಯಕರ ಆರೋಪ ತಪ್ಪಿದ್ದಲ್ಲ. ಜೆಡಿಎಸ್ ನಾಯಕರಾದ ಅಜಿತ್ ಗೌಡರ ಹಾಗೆ ನಾವೆಲ್ಲೂ ಎತ್ತುವಳಿ ಮಾಡಿಲ್ಲ. ದೋ ನಂ ದಂದೆ ಮಾಡ್ತಾ ಇಲ್ಲ. ಮಾವನ ಓಸಿ ದಂದೆ ಗೆ ಗಾಡ್ ಫಾದರ್ ಆಗಿರುವ ಅಜಿತ್ ಗೌಡ್ರೆ ಯಾವ್ದೋ ಅಡಿಯೋ, ಯಾವ್ದೊ ವಿಡಿಯೋವನ್ನ ಎಡಿಟ್ ಮಾಡಿ ಹಾಕೊದಲ್ಲ. ಇಂತಹ ನೀಚ ರಾಜಕಾರಣವನ್ನೆ ಮಾಡ್ಕೊಂಡ್ ಬಂದಿರೋದು ನೀವು.
ಇಂತಹ ನೀಚ ಕೆಲಸಗಳನ್ನು ಮಾಡೋದು ಬಿಟ್ಟು ಸಾಧ್ಯವಾದ್ರೆ ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ... ಇಲ್ಲಸಲ್ಲದ ಆರೋಪಗಳನ್ನು ಮಾಡಿ ನಾವೇ ನಿಜವಾದ ನಾಯಕರುಗಳೆಂದು ಬಿಂಬಿಸಿಕೊಳ್ಳಬೇಡಿ... ಭದ್ರಾವತಿಯಲ್ಲಿ ಅತಿ ಹೆಚ್ಚು ದಂದೇ ಮಾಡುವುದರಲ್ಲಿ ಅತಿ ಹೆಚ್ಚು ಜೆಡಿಎಸ್ ನವರೇ
GIRLS COLLEGE ಲೀ ಇಸ್ಪೀಟ್ ಟೂರ್ನಮೆಂಟ್ ಮಾಡಿದ್ದನ್ನ ಭದ್ರಾವತಿ ಜನತೆ ಇನ್ನೂ ಮರೇತಿಲ್ಲ ದಾಖಲೆ ಇಲ್ಲದ ಆರೋಪಗಳನ್ನು ಮಾಡಿ ಹೀರೋಗಳಾಗಬೇಡಿ..... ಜನರಗಳಿಗೆ ಕೆಲಸ ಮಾಡಿಕೊಟ್ಟಿ ಹೀರೋಗಳಾಗಿ ಎಂದು ಪೋಸ್ಟ್ ಹಾಕಲಾಗಿದೆ. ಇದರಿಂದ ಅಧಿಕಾರಿಯನ್ನ ನಿಂದಿಸಿದ ಪೋಸ್ಟ್ ಗೆ ಬಸವರಿಂದ ಇದು ಸ್ಪಷ್ಟೀಕರಣವೆಂದೆ ಎಂದು ಬಿಂಬಿಸಲಾದರೂ
ನಾನು ಅಧಿಕಾರಿಗಳಿಗೆ ಇಂತಹ ಮಾತನಾಡಿಲ್ಲ ಎಂದು ಬಸವೇಶ್ ಅವರ ಪೋಸ್ಟ್ ನಲ್ಲಿ ಎಲ್ಲೂ ಗಟ್ಟಿಯಾದ ಸ್ಪಷ್ಟನೆ ಇಲ್ಲದಿರುವುದು ಗೊಂದಲಗಳನ್ನ ಉದ್ಭವಿಸಿದೆ.