ಅಪ್ಪು 50 ನೇ ಹುಟ್ಟುಹಬ್ಬ ಆಚರಣೆ-50th birthday of actor late Puneeth Rajkumar

 Suddilive || Shivamogga

Appu fans in Shivamogga celebrated the 50th birthday of actor late Puneeth Rajkumar. 


Appu, birthday celebration

ನಟ ದಿವಂಗತ ಪುನೀತ್ ರಾಜ್ ಕುಮಾರ್ ಅವರ 50 ನೇ ಹುಟ್ಟುಹಬ್ಬವನ್ನ ಶಿವಮೊಗ್ಗದ ಅಪ್ಪು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ದಾರೆ.  

ಮಲ್ಲಿಕಾರ್ಜುನ ಚಲನಚಿತ್ರ ಮಂದಿರದ ಎದುರುಭಾಗದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ರಾಷ್ಟ್ರಭಕ್ತರ ಬಳಗದ ಕೆ.ಈ.ಕಾಂತೇಶ್ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬದ  ಆಚರಣೆಯಲ್ಲಿ ಭಾಗಿಯಾಗಿದ್ದಾರೆ. 

ಅಭಿಮಾನಿಗಳಿಗೆ ಸಸ್ಯಹಾರಿ ಮತ್ತು ಮಾಂಸಹಾರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಎರಡು ಸಾವಿರ ಜನರಿಗೆ ಒಟ್ಟು ಎರಡು ಕ್ವಿಂಟಾಲ್ ಅನ್ನವನ್ನ ಮಾಡಿ ಬಡಿಸಲಾಗಿದೆ. ಇದರ ಜೊತೆಗೆ ಮಜ್ಜಿಗೆ, ಬೀಡಾ, ಐಸ್ ಕ್ರೀಂ ಸಹ ಹಂಚಲಾಗಿದೆ. ಇದು ಮಧ್ಯಾಹ್ನದ ಆಚರಣೆ ಇದಾದರೆ, ಇಂದು ಸಂಜೆ ಸಹ ಹುಟ್ಟು ಹಬ್ಬವನ್ನ ಅಭಿಮಾನಿಗಞಲು ಹಮ್ಮಿಕೊಂಡಿದ್ದಾರೆ.  

ಹಳೇ ವಾಸವಿ ಹೋಟೆಲ್ ಎದುರಿನ ರಸ್ತೆಯಲ್ಲಿ ಅಪ್ಪುವಿನ ಫ್ಲೆಕ್ಸ್ ಹಾಕಿ ಅನ್ನಸಂತರ್ಪಣೆ ಮಾಡಲಾಗಿದೆ. ಇಂದು ಹೀಗೆ ಬೆಳಗ್ಗಿಂದ ಸಂಜೆಯ ವರೆಗೆ ಅಪ್ಪು ಹುಟ್ಟು ಹಬ್ಬ ಆಚರಿಸುವಲ್ಲಿ ಬಿಸಿಯಾಗಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close