A man hit by NDRF-ಅಪಘಾತ ಪಡಿಸಿದ್ದನ್ನ‌ ಪ್ರಶ್ನಿಸಿದ್ದ NDRF ನಿಂದ ಹಲ್ಲೆ

Suddilive || Shivamogga

A man hit by NDRF-ಅಪಘಾತ ಪಡಿಸಿದ್ದನ್ನ‌ಪ್ರಶ್ನಿಸಿದ್ದ NDRF ನಿಂದ ಹಲ್ಲೆ

Man-Hit-by-NDRF


ಡಿಸೇಲ್ ಹಾಕಿಸುತ್ತಿದ್ದ ಪಿಕಪ್ ವಾಹನಕ್ಕೆ NDRF ವಾಹನ ಡಿಕ್ಕಿಯ ಆರೋಪ ಮಾಡಲಾಗಿದ್ದು, ಅಪಘಾತದ ಬಗ್ಗೆ ಪ್ರಶ್ನೆ ಮಾಡಿದಕ್ಕೆ NDRF ಸಿಬ್ಬಂದಿಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ.

ಮೂಗಿನಲ್ಲಿ ರಕ್ತ ಬರುವ ಹಾಗೇ  NDRF ಸಿಬ್ಬಂದಿಗಳು ಹಲ್ಲೆ ಮಾಡಿದ್ದಾರೆ ಎಂದು ವ್ಯಕ್ತಿ ಆರೋಪಿಸಿದ್ದಾರೆ. ಹೊಸನಗರ ಪೆಟ್ರೋಲ್ ಬಂಕ್ ನಲ್ಲಿ  ಘಟನೆ ನಡೆದಿದೆ. 

NDRF ಸಿಬ್ಬಂದಿಗಳಿಂದ ಕುಮಾರ್ ಎನ್ನುವ ವ್ಯಕ್ತಿ ಮೇಲೆ ಹಲ್ಲೆ ನಡೆದಿದೆ. ಮೂಗಿನಲ್ಲಿ ರಕ್ತ ಬರುವ ಹಾಗೇ ಹಲ್ಲೆ  ಸಿಬ್ಬಂದಿಗಳು ಹಲ್ಲೆ ನಡೆಸಿರುವುದಾಗಿ ಕುಮಾರ್ ಆರೋಪಿಸಿದ್ದಾರೆ. ಮಹಾರಾಷ್ಟ್ರದಿಂದ ಹೊಸನಗರ ಅಗ್ನಿಶಾಮಕ ಸಿಬ್ಬಂದಿಗಳಿಗೆ ತರಬೇತಿ ನೀಡಲು  NDRF ಟೀಂ ಬಂದಿತ್ತು. 

ಡಿಸೇಲ್ ಹಾಕಿಸಲು ನಿಂತಿದ್ದ ಪಿಕಪ್ ವಾಹನಕ್ಕೆ  NDRF ವಾಹನ ಡಿಕ್ಕಿ ಹೊಡೆಸಿರುವುದಾಗಿ ಕುಮಾರ್ ದೂರಿದ್ದಾರೆ. ಅಪಘಾತ ಪ್ರಶ್ನೆ ಮಾಡಿದಕ್ಕೆ ಪಿಕಪ್ ವಾಹನದವನಿಗೆ ಅವಾಚ್ಚ ಶಬ್ದಗಳಿಂದ  NDRF ಸಿಬ್ಬಂದಿಗಳು ಹಲ್ಲೆ ಮಾಡಿದ್ದಾರೆ. ಪಿಕಪ್ ಡ್ರೈವರ್ ಗೆ ಯಾಕೇ ನಿದಂನೆ ಮಾಡುತ್ತಿದ್ದೀರಾ ಎಂದು ಕುಮಾರ್  ಪ್ರಶ್ನಿಸಿದ್ದಾರೆ. 

ಪ್ರಶ್ನೆ ಮಾಡಿದಕ್ಕೆ ನೀನ್ ಯಾರು  ಪ್ರಶ್ನೆ ಮಾಡಲು ಎಂದು ಅವಾಚ್ಚ ಶಬ್ದಗಳಿಂದ ನಿಂದಿಸಿ ಸಿಬ್ಬಂದಿಗಳು  ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಕುಮಾರ್ ರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close