Meggan hospital be superated-ಮೆಗ್ಗಾನ್ ನ್ನ ಸಿಮ್ಸ್ ನಿಂದ ಬೇರ್ಪಡಿಸಲಾಗುತ್ತದಾ?

 Suddilive || Shivamogga

Will Meggan hospital be superated from sims? ಮೆಗ್ಗಾನ್ ಆಸ್ಪತ್ರೆಯನ್ನ ಸಿಮ್ಸ್ ನಿಂದ ಬೇರ್ಪಡಿಸಲಾಗುತ್ತದಾ?

Meggan hosital



ಮೆಗ್ಗಾನ್ ಆಸ್ಪತ್ರೆಯನ್ನ ಸಿಮ್ಸ್ ನಿಂದ ಬೇರ್ಪಡಿಸುವ ಚಿಂತನೆ ನಡೆಯುತ್ತಿದೆಯಾ ಅಥವಾ ಹೊಸ ಜಿಲ್ಲಾ ಆಸ್ಪತ್ರೆ ನಿರ್ಮಾಣ ಮಾಡುವ ಚಿಂತನೆ ಸರ್ಕಾರದ ಮಟ್ಟದಲ್ಲಿದೆಯಾ? ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?

ಮೆಗ್ಗಾನ್ ಆಸ್ಪತ್ರೆ ಸಂಪೂರ್ಣ ಹಾಳಾಗಿದೆ. ಮೆಗ್ಗಾನ್ ನ್ನೇ ಆಡಳಿತಾತ್ಮಕವಾಗಿ ಸಿಮ್ಸ್ ನ್ನ ಬೇರ್ಪಡಿಸಿ ನಡೆಸಲಾಗುತ್ತದಾ ಎಂದು ಚಿಂತಿಸಲಾಗುತ್ತಿದೆ. ಸಿಮ್ಸ್ ಗೆ 500 ಬೆಡ್ ಸಾಕಾಗಿದೆ. ಅದನ್ನ ಪೂರೈಸಿ ಮೆಗ್ಗಾನ್ ನ್ನ ಬೇರ್ಪಡಿಸುವ ಬಗ್ಗೆ ತಜ್ಞರ ಸಲಹೆ ಪಡೆದು ಮುಂದುವರೆಯಲಾಗುವುದು ಎಂದರು. 

ಆಸ್ಪತ್ರೆಯಲ್ಲಿ ಮೆಡಿಸಿನ್, ರೋಗಿಗಳನ್ನ ವೆನ್ ಲಾಕ್ ಗೆ ಕಳುಹಿಸುವ ಬಗ್ಗೆ ಸೂಕ್ತಕ್ರಮ ಕೈಗೊಳ್ಳಲಾಗುವುದು. ಕಳೆದ 25 ವರ್ಷದಿಂದ ವೈದ್ಯರು ಮೆಗ್ಗಾನ್ ನಲ್ಲಿ ಝಂಡ ಊರಿದ್ದಾರೆ ಎಂಬ ಆರೋಪವಿದೆ. ಆ ಬಗ್ಗೆ ಬೇರೆ ವೈದ್ಯರು ಮುಂದೆ ಬಂದರೆ ಬದಲಾಯಿಸುವುದಾಗಿ ತಿಳಿಸಿದರು. 

ವಿಮಾನ ನಿಲ್ದಾಣದ ಅಭಿವೃದ್ಧಿ ಮೊದಲು ನೈಲ್ಯಾಂಡಿಂಗ್ ಮತ್ತು ಶಾರ್ಟ್ ಲ್ಯಾಂಡಿಂಗ್ ಸಮಸ್ಯೆ ಬಗೆಹರಿಸಬೇಕಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂದರು. 

ಗ್ರೇಸ್ ಮಾರ್ಕ್ಸ್ ಗೆ ಸಿಎಂ ಸಿಟ್ಟಾಗಿದ್ದಾರೆ. ಅದನ್ನ ಸಮ್ಜಾಯಿಸಲಾಗಿದೆ. ಗ್ರೇಸ್ ಮಾರ್ಕ್ಸ್ ನೀಡಿದ್ದು ತಪ್ಪಾಗಿದೆ ಎಂದು ಹೇಳಿರುವೆ. ಮೂರು ಎಕ್ಸಾಮ್ ಇರುವುದರಿಂದ ಗ್ರೇಸ್ ಮಾರ್ಕ್ ಕೊಡುವುದನ್ನ ತಿರಸ್ಕರಿಸಲಾಗುವುದು ಎಂದರು. 

ಮೆಗ್ಗಾನ್ ನ್ನ ಬೇರೆಡೆ ಬದಲಾಯಿಸಿದರೆ ಮೂಲಭೂಲ ಸೌಕರ್ಯ ಒದಗಿಸುವುದು ಕಷ್ಟವಾಗಲಿದೆ. ಹಾಗಾಗಿ ಸಮಗ್ರವಾಗಿ ಚಿಂತಿಸಿ ಮುಂದಿನ‌ಕ್ರಮ ಕೈಗೊಳ್ಳಲಾಗುವುದು ಎಂದರು. 

ಸಿದ್ದರಾಮಯ್ಯನವರು 16 ನೇ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಹಲವು ಪ್ರಶ್ನೆಗಳಿದ್ದವು ಎಂದು ತಿಳಿಸಿದ ಅವರು, ಅಭಿವೃದ್ಧಿ ಕುಂಠಿತವಾಗಿದೆ ಎಂಬ ಭಾವನೆ ಹುಟ್ಟಿತ್ತು. ಕುಟುಂಬ,  4 ಲಕ್ಷ ಕೋಟಿ ಬಜೆಟ್ ಇದಾಗಿದೆ. ಸಮಾನತೆ ನೀಡಲಾಗಿದೆ. ಶಿಕ್ಷಣ ಇಲಾಖೆಗೆ ಈ ಬಾರಿ ಕಲಿಕೆಗೆ ಒತ್ತು ನೀಡಲಾಗಿದೆ. ಕಳೆದ ಬಾರಿ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿತ್ತು ಎಂದರು. 

ಟೀಚರ್ ಲೆಸ್ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ಸ್ಕಿಲ್ ಎಟ್ ಸ್ಕೂಲ್ ನ್ನ ಆರಂಭಿಸಲಾಗುತ್ತಿದೆ. ಮಕ್ಕಳು 90% ಅಂಕ ಪಡೆದರೂ ಓದು ಕರ್ನಾಟಕವನ್ನ ಆರಂಭಿಸಲಾಗಿದೆ. ಕಲ್ಯಾಣ ಕಲ್ಯಾಣ ಕರ್ನಾಟಕ ಭಾಗ ಬಿಟ್ಟು 10 ಸಾವಿರ ನೇಮಕಾತಿಗೆ ಅವಕಾಶವಿತ್ತು. ಐದು ಆರ್ ಸಾವಿರ ಅನುದಾನಿತ ಶಾಲೆ, 5 ಸಾವಿರ ಶಿಕ್ಷಕರನ್ನ ಸೇರಿ 18 ಸಾವಿರ ಶಿಕ್ಷಕರ ನೇಮಕಕ್ಕೆ ಅವಕಾಶ ನೀಡಿದ್ದಾರೆ. 

16000 ಶಾಲೆಯ ಅಡಿಗೆ ಸಾಮಾಗ್ರಿ ಬದಲಾವಣೆ ಮಾಡಲಾಗುತ್ತಿದೆ. 80 ಸಾವಿರ ಕೋಟಿ ಹಣವನ್ನ ಶಿಕ್ಷಣಕ್ಕೆ ಮೀಸಲಿಡಲಾಗಿದೆ. ಕಳೆದ ಬಾರಿ 44 ಸಾವಿರ ಕೋಟಿ ಇತ್ತು. ಜಿಲ್ಲಾಡಳಿತ ಮತ್ತು ಆರೋಗ್ಯಕ್ಕೆ ಜಿಲ್ಲೆಯಲ್ಲಿ ಒತ್ತು ನೀಡಲಾಗಿದೆ. 

ನೂತನ ಜಿಲ್ಲಾಡಳಿತ ಕಟ್ಟಡ ನಿರ್ಮಿಸಲಾಗುತ್ತಿದ್ದು 50 ಕೋಟಿ ಹಣ ಕೊಡಲಾಗಿದೆ ಹೆಚ್ಚುವರಿ ಹಣವನ್ನ ಸರ್ಕಾರದಿಂದ ನಿರೀಕ್ಷಿಸಲಾಗುತ್ತಿದೆ. 22 ಸಾವಿರ ಕೋಟಿ ನೀಡಲಾಗಿದೆ. ಸೊರಬಕ್ಕೆ ಹೊಸಬನೀರಾವರಿಯನ್ನ ಶರಾವತಿಯಿಂದ ತರಲಾಗುತ್ತಿದೆ. 11 ತಾರೀಖು ಕೇಂದ್ರದಲ್ಲಿ ಅರಣ್ಯ ಕುರಿತು ಸಭೆಯಿದೆ. ಇದಾದ ಮೇಲೆ ಕ್ಲಿಯರೆನ್ಸ್ ಸಿಗಲಿದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಕಲಗೋಡು ರತ್ನಾಕರ್ ಜಿಡಿ ಮಂಜುನಾಥ್, ವಿಜಯಕುಮಾರ್ ದನಿ, ಶಿಜು ಪಾಶ, ವಿನಯ್ ಕುಮಾರ್ ತಾಂದಲೆ ಮೊದಲಾದವರು ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close