Suddilive || Shivamogga
A protest was held in front of the District Collector's office today under the leadership of the CITU District Committee, demanding that several demands of women workers be met and a petition was submitted.
ಮಹಿಳೆ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಮಹಿಳೆಯರಿಗೆ ಸಾಕಷ್ಟು ಗುಣಮಟ್ಟದ ಉದ್ಯೋಗಗಳನ್ನು ನಿರ್ವಹಿಸಲು ಮಾನದಂಡಗಳೊAದಿಗೆ ಮಹಿಳಾ ಕಾರ್ಯಪಡೆಗಳ ರಚನೆಯಾಗಬೇಕು. ಮಹಿಳೆಯರನ್ನು ರೈತರು- ಕಾರ್ಮಿಕರು ಎಂದು ಪರಿಗಣಿಸಬೇಕು. ವೇತನವಿಲ್ಲದ ಮಹಿಳೆಯರನ್ನು ಗುರುತಿಸಿ ಅವರಿಗೂ ಕೊಡುಗೆಗಳನ್ನು ನೀಡಬೇಕು. ಗೌರವ ಧನ ನೀಡಬೇಕು. ಮುಟ್ಟಿನ ರಜೆ, ಹೆರಿಗೆ ರಜೆ, ಹೆರಿಗೆ ಸೌಲಭ್ಯಗಳನ್ನು ವ್ಯವಸ್ಥೆ ಮಾಡಬೇಕು. ಎಲ್ಲಾ ವಲಯಗಳಲ್ಲಿ ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಕ್ಷರ ದಾಸೋಹದ ಸಂಘದ ಮಹಿಳೆಯರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹನುಮಮ್ಮ, ಸುನೀತಾ, ನಾರಾಯಣ್, ಭಾಗ್ಯಮ್ಮ, ಗೀತಮ್ಮ, ಸುರೇಖಾ ಮೊದಲಾದವರು ಇದ್ದರು.
A-protest-was-held