ಎರಡು ಪ್ರತ್ಯೇಕ ಮನೆಗಳವು ಪ್ರಕರಣ ಮೂವರ ಬಂಧನ-ಲಕ್ಷಾಂತರ ರೂ. ವಶ- Theft case was detected by Maluru ps

 suddilive || Thirthahalli

Theft case was detected by Maluru ps-ಎರಡು ಪ್ರತ್ಯೇಕ ಮನೆಗಳವು ಪ್ರಕರಣ ಮೂವರ ಬಂಧನ-ಲಕ್ಷಾಂತರ ರೂ. ವಶ

House, theft


ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಯ ಎರಡು ಪ್ರತ್ಯೇಕ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಜ.25 ರಂದು  ಕಳಸಗುಂಡಿಯ ಗಂಗಪ್ಪ ಎಂಬುವರ ಮನೆ ಕಳ್ಳತನ ಪ್ರಕರಣ ಮತ್ತು ಮಾ.3 ರಂದು ನಡೆದ ನಿಡಗಳಲೆಯ ಮಹಿಳೆಯ ಮಬೆಯಲ್ಲಿ ನಡೆದಿದ್ದ ಎರಡು ಪ್ರಕರಣದಲ್ಲಿ  ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. 

ಗಂಗಪ್ಪನವರ ಮನೆಯ ಹೆಂಚು ತೆಗೆದು ಕಳ್ಳತನ ನಡೆದಿದ್ದರೆ, ನಿಡಗಳಲೆಯ ಮಮತಾರವರ ಮನೆಯಲ್ಲಿ  ಬೀಗ ಮುರಿದು ಕಳವು ನಡೆದಿತ್ತು. ಗಂಗಪ್ಪನವರ ಮನೆಯಲ್ಲಿ 4.93 ಲಕ್ಷ ರೂ. ನಗದು, ಚಿನ್ನ, ಬೆಳ್ಳಿ ಕಳ್ಳತನವಾಗಿತ್ತು. ಮಮತಾರವರ ಮನೆಯಲ್ಲಿ 2,54,000 ರೂ. ಚಿನ್ನಾಭರಣ, ಬೆಳ್ಳಿ, ನಗದು ಕಳುವಾಗಿತ್ತು. 

ಎಸ್ಪಿ ಮಿಥುನ್ ಕುಮಾರ್, ಅಡಿಷನಲ್ಎಸ್ಪಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ, ಡಿವೈಎಸ್ಪಿ ಅರವಿಂದ ಕಲಗುಚ್ಚಿ, ಸಿಪಿಐ ಶ್ರೀಧರ್, ಮಾಳೂರು ಪಿಎಸ್ಐಗಳಾದ ಕುಮಾರ್ ಕುರಗುಂದ, ಶಿವಾನಂದ ಧನೇವರ್, ಸಿಬ್ಬಂದಿಗಳಾದ ಸುರಕ್ಷಿತ್, ಸಂತೋಷ ಕುಮಾರ್, ವಿನಯ್ ಕುಮಾರ್, ಅಭಿಲಾಷ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. 

ಶಿವಮೊಗ್ಗದ ಶ್ರೀರಾಮ ನಗರದ ತರಕಾರಿ ವ್ಯಾಪಾರಿ ಅಬ್ದುಲ್ ಶಫೀಕ್ (21), ಸೂಳೆಬೈಲಿನ ಅಲ್ಯುಮಿನಿಯಂ ಫ್ಯಾಬ್ರಿಕೇಷನ್ ಕೆಲಸ ಮಾಡುವ  ಖಲೀಲ್ ಖಾನ್ (24), ಮತ್ತೀರ್ವ ಅಲ್ಯುಮಿನಿಯಂ ಫ್ಯಾಬ್ರಿಕೇಷನ್ ಕೆಲಸ ಮಾಡುವ ಸೈಯದ್ ಜಾವಿದ್ (23) ರನ್ನ ಬಂಧಿಸಿದ ತನಿಖಾ ತಂಡ ಒಂದು ಸುಜೀಕಿ ಆಕ್ಸಿಸ್ ಸ್ಕೂಟರ್, 5.50 ಲಕ್ಷ ಮೌಲ್ಯದ 72 ಗ್ರಾಂ ಚಿನ್ನಾಭರಣ, 250 ಗ್ರಾಂ ಮೌಲ್ಯದ ಬೆಳ್ಳಿ ಸೇರಿ 6.52 ಲಕ್ಷ ರೂ ಮೌಲ್ಯವನ್ನ ವಶಪಡಿಸಿಕೊಳ್ಳಲಾಗಿದೆ. 

Theft case was detected by Maluru ps

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close