woman gored by a Bison-ಕಾಡೆಮ್ಮೆ ದಾಳಿ-ಮಹಿಳೆ ಗಾಯ

 Suddilive || Shivamogga

A woman was gored by a Bison while working in a coffee estate and was injured and admitted to Meggan Hospital in Shivamogga.


ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡೆಮ್ಮೆ ಯೊಂದು ತಿವಿದಿದ್ದು, ಗಾಯಗೊಂಡ ಮಹಿಳೆಯನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಕಪ್ಪತ್ ಗಿರಿಯ ಕಾಫಿ ಎಸ್ಟೇಟ್ ನಲ್ಲಿ ವಸಂತ ಎಂಬ 58 ವರ್ಷದ ಮಹಿಳೆ ಕೆಲಸ ಮಾಡುವಾಗ ಕಾಡೆಮ್ಮೆ ಅಟ್ಟಿಸಿಕೊಂಡು ಬಂದಿದೆ. ಅಟ್ಟಿಸಿಕೊಂಡ ಕಾರಣ ಮಹಿಳೆ ಓಡಲು ಹೋಗಿ ಬಿದ್ದಿದ್ದಾರೆ. 

ಬಿದ್ದ ಮಹಿಳೆಗೆ ಕಾಡೆಮ್ಮೆ ತಿವಿದಿದೆ. ಜೀವಕ್ಕೆ ಹಾನಿಯಾಗದಿದ್ದರೂ ಕಾಡೆಮ್ಮೆ ತಿವಿತದಿಂದ ಮಹಿಳೆಯ ಗಲ್ಲಕ್ಕೆ ಗಾಯವಾಗಿದೆ. ಅವರನ್ನ ಶಿವಮೊಗ್ಗದ ಮೆಗ್ಗಾನ್ ಗೆ ಕರೆತಂದು ಚಮದಾಖಲಿಸಲಾಗಿದೆ. ಈ ಘಟನೆ ನಿನ್ನೆ ನಡೆದಿದೆ. 

A woman was gored by a Bison

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close