Two brothers clash-ವರ್ಧಂತಿ ವಿಚಾರದಲ್ಲಿ ಸಹೋದರರ ನಡುವೆ ಬಡಿದಾಟ

Suddilive || Shivamogga

Two brothers clash in family over annual birth anniversary of Naga Chowdeshwari deity. ವರ್ಧಂತಿ ವಿಚಾರದಲ್ಲಿ ಸಹೋದರರ ನಡುವೆ ಬಡಿದಾಟ


ತಂದೆಯ ಮೇಲೆ ಹಲ್ಲೆ ಮಾಡಿದ್ದಕ್ಕೆ ಹಲ್ಲೆ ಮಾಡಿದವರ ಮೇಲೆ ಮಗನಿಂದ ಪ್ರತಿ ದಾಳಿ. ನಾಗ ಚೌಡೇಶ್ವರಿ ದೇವರ ವಾರ್ಷಿಕ ವರ್ಧಂತಿ ವಿಚಾರದಲ್ಲಿ ಕುಟುಂಬದಲ್ಲೇ ಸಹೋದರರಿಬ್ಬರು ಬಡಿದಾಡಿಕೊಂಡಿದ್ದಾರೆ. 

ವರ್ಧಂತಿಗೆ ಪುರೋಹಿತರನ್ನು ನಿಗದಿ ಮಾಡುವ ವಿಚಾರದಲ್ಲಿ ಮೊದಲು ಮಂಜಯ್ಯ ಎಂಬ ವ್ಯಕ್ತಿಯಿಂದ ತನ್ನ ಸಹೋದರ ರಾಜು ಎಂಬುವರ ಮೇಲೆ ಹಲ್ಲೆ ನಡೆದಿದೆ. ಮೊದಲು ಹಲ್ಲೆ ಮಾಡಿದ ಮಂಜಯ್ಯ ಹಾಗೂ ಆತನ ಹೆಂಡತಿ ಶಶಿಕಲಾ ಎಂಬುವರು ಹಲ್ಲೆ ನಡೆಸಿದ್ದಾರೆ. 

ದಿನಾಂಕ 5/3/2015 ರಲ್ಲಿ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಂತರ ಮಂಜಯ್ಯ ಮೇಲೆ ದಾಳಿ  ಸಹೋದರ ರಾಜು ಅವರ ಪುತ್ರ ಪ್ರತಿದಾಳಿ ನಡೆಸಿದ್ದಾನೆ. ಅಣ್ಣ ತಮ್ಮಂದಿರ ಈ ಜಗಳದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಮಂಜಯ್ಯ ಮೇಲೆ ರೀಪರ್ ನಿಂದ ಹಲ್ಲೆ ನಡೆಸಲಾಗಿದೆ. 

ಹಲ್ಲೆಯಿಂದ ಮಂಜಯ್ಯ ತೀರ್ವಗಾಯಗೊಂಡಿದ್ದಾರೆ. ಮಂಜಯ್ಯಗೆ ಹಲ್ಲೆಯಿಂದ ತಲೆಭಾಗಕ್ಕೆ ಬಲವಾದ ಹೊಡೆತ ಬಿದ್ದಿದೆ. ಗಾಯಗೊಂಡ ಮಂಜಯ್ಯ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. 

Two-brothers-clash

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close