Suddilive || Shivamogga
Bjp strike against state government Budget accused it is an halal budget.
ನಿನ್ನೆ ರಾಜ್ಯ ಸರ್ಕಾರದ ಬಜೆಟ್ ನ್ನ ವಿರೋಧೀಸಿ ಇಂದು ಶಿವಮೊಗ್ಗದಲ್ಲಿ ಬಿಜೆಪಿ ಬೃಹತ್ ಮೆರವಣಿಗೆ ನಡೆಸಿದೆ. ಹಲಾಲ್ ಬಜೆಟ್ ಎಂದು ಘಂಟಾ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಿದೆ.
ಹಲಗೆ ಬಾರಿಸಿಕೊಂಡು ಮೂರು ಟ್ರ್ಯಾಕ್ಟರ್ ಏರಿ ಬಿಜೆಪಿ ಸಂಸದರು, ಶಾಸಕರು ಮತ್ತು ಕಾರ್ಯಕರ್ತರು ಗೋಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದಾರೆ. ದಲಿತರ ವಿರೋಧಿ, ರೈತ ವಿರೋಧಿ ರಾಜ್ಯ ಸರ್ಕಾರ ಒಂದು ಲಕ್ಷ ಸಾಲದ ಹೊರೆಯನ್ನ ಹೋರಿಸಿದೆ ಎಂದು ದೂರಲಾಗಿದೆ.
ಈ ವೇಳೆ ಮಾಧ್ಯಮಗಳಿಗೆ ಮಾತನಾಡಿದ ಸಂಸದ ರಾಘವೇಂದ್ರ, ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಕೊಟ್ಟಂತೆ ಮಾಡಿ ಕಸಿದುಕೊಳ್ಳುವ ಬಜೆಟ್ ನ್ನ ಮಂಡಿಸಲಾಗಿದೆ. ರಾಜ್ಯದ ವ್ಯಕ್ತಿಯ ಪರ್ ಕ್ಯಾಪಿಟಾ ಇನ್ ಕಂ ಅಭವೃದ್ಧಿ ಆಗಬೇಕಿತ್ತು. ಅದು ಆಗಿಲ್ಲ. ಬಜೆಟ್ ನಲ್ಲಿ ಒಂದು ಧರ್ಮವನ್ನಒಲೈಸುವ ಕೆಲಸವಾಗಿದೆ ಎಂದು ದೂರಿದರು.
ಹಿಂದೂಗಳಲ್ಲಿ ಬಡವರಿಲ್ಲವಾ? ಅಲ್ಪ ಸಂಖ್ಯಾತರಿಗೆ ಮಾತ್ರ ಸರಳ ಮದುವೆಗೆ 50 ಸಾವಿರ ರೂ. ನೀಡಲಾಗಿದೆ. ಕೇಂದ್ರ ಆಯುಷ್ ಮಾನ್ ಜಾರಿಗೊಳಿಸಿದಾಗ ಹಾಗೆ ಮಾಡಲಾಯಿತಾ? ಎಂದು ಪ್ರಶ್ನಿಸಿದ ಸಂಸದರು ಅಯುಷ್ ಮಾನ್ ಭಾರತ್ ನ್ನ ಇಡೀ ದೇಶದ ಜನರಿಗೆ ಜಾರಿಯಾಗುವಂತೆ ಮಾಡಲಾಗಿದೆ. 2025-26 ನೇ ಸಾಲಿನ ಬಜೆಟ್ ಮಂಡಿಸಿದ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು. ಂಂಮ