brahamin organisation-ನಾಡಿದ್ದು ಬ್ರಾಹ್ಮಿನ್ ಆರ್ಗನೈಜೇಷನ್ ಉದ್ಘಾಟನೆ

 Suddilive || Shivamogga

brahamin organisation shivamogga units bigins from tomarrow

Brahmin organisation


ಬ್ರಾಹ್ಮಿನ್ ಆರ್ಗನೈಜೇಷನ್ ಆಫ್ ಇಂಡಿಯಾ ಶಿವಮೊಗ್ಗ ಸಮಿತಿಯ ಉದ್ಘಾಟನಾ ಸಮಾರಂಭ  ಮಾ.07 ರಂದು  ಕೋಟೆ ರಸ್ತೆಯಲ್ಲಿರುವ ಗಾಯಿತ್ರಿ ದೇವಸ್ಥಾನದಲ್ಲಿ ನಡೆಯಲಿದೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಾಹ್ಮಿನ್ ಆರ್ಗನೈಜೇಷನ್ ನ ಜಿಲ್ಲಾಧ್ಯಕ್ಷವೆಂಕಟೇಶ್ ರಾವ್ 18 ರಾಜ್ಯದಲ್ಲಿ ನಮ್ಮ ಸಂಘಟನೆ ಕಾರ್ಯಪ್ರವೃತ್ತಿ ಇದೆ, ರಾಜ್ಯದ 17 ಜಿಲ್ಲೆಯಲ್ಲಿ ಸಂಘಟನೆ ಕೆಲಸ ಮಾಡುತ್ಯಿದೆ. ಪರಶುರಾಮ್ ಟ್ರಸ್ಟ್ ನ ಅಡಿಯಲ್ಲಿ ಆರ್ಗನೈಜೇಷನ್ ಆರಂಭವಾಗಿದೆ. ಸುಖವೀರ್ ಶರ್ಮ ದೆಹಲಿಯಲ್ಲಿ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ  ಎಂದರು. 

ರಾಜ್ಯಾಧ್ಯಕ್ಷರಾಗಿ ರವೀಂದ್ರ ಕುಲ್ಕರ್ಣಿ ಆಗಿದ್ದಾರೆ. ಬ್ರಾಹ್ಮಣರಿಗಾಗಿ, ಬ್ರಾಹ್ಣರಿಗೋಸ್ಕರ ಈ ಸಂಘಟನೆ ಆರಂಭವಾಗಿದೆ. ಬ್ರಾಹ್ಮಣರನ್ನ ಅವಹೇಳನ ಮಾಡುವ ಬಗ್ಗೆ ಇತ್ತೀಚೆಗೆ ಹೆಚ್ಚಾಗಿದೆ. ಇದನ್ನ ಸಂಘಟನೆ ಖಂಡಿಸಲಿದೆ ಎಂದರು. 

ದುರ್ಬಲ ವರ್ಗದವರಿಗೆ ಮೀಸಲಾತಿ, ರಾಜಕೀಯ ಪ್ರಾಶಸ್ತ್ಯ, ವಿಪ್ರ ನೌಕರರಿಗೆ ಬೆಂಬಲ, ಆರೋಗ್ಯ ತಪಾಸಣೆ, ಸಂಸ್ಕೃತ ಭಾಷೆಗೆ ಆಧ್ಯತೆ, ವೇದಾಧ್ಯಯನ ಮಾಡಿದ ಯುವಕರಿಗೆ ಸರ್ಕಾರಿ ಉಪನ್ಯಾಸಕರ ಹುದ್ದೆ, ಸಾಮಾಜಿಕ ಹೋರಾಟ ಶ್ರಮಿಸುವುದು ನಮ್ಮ ಮುಖ್ಯ ಗುರಿಯಾಗಿದೆ. 

ಶಿವಮೊಗ್ಗದ ಸಮಿತಿಯಲ್ಲಿ 30 ಜನರಿದ್ದಾರೆ. ಮುಂದಿನ ಜಿಲ್ಲೆ 7 ತಾಲೂಕಿನಲ್ಲಿ ಪ್ರತಿನಿಧಿಗಳನ್ನ  ನೇಮಿಸಲಾಗುವುದು. ತಾಲೂಕು ಘಟಕ, ಮಹಿಳ ಘಟಕ ಮತ್ತು ಯುವ ಘಟಕ ನೇಮಿಸಲಾಗುವುದು. ನಾಡಿದ್ದಿನ  ಉದ್ಘಾಟನಾ ಕಾರ್ಯಕ್ರಮಕ್ಕೆ ಭೀನಕಟ್ಟೆ ರಘುವರೇಂದ್ರ ಶ್ರೀಗಳು ಭಾಗಿಯಾಗಲಿದ್ದಾರೆ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close