There was a fatal attack on the wife-ಗಂಡು ಮಗು ಆಗಿಲ್ಲವೆಂದು ಪತಿಯಿಂದ ರಾಸಕ್ಷಸೀಕೃತ್ಯ

Suddilive ||shivamogga

There was a fatal attack on the wife for not having male child and an incident took place where she tried to kill the one year old girl by hitting around the ground

Fatal, attack



ಗಂಡು ಮಗು ಆಗಿಲ್ಲವೆಂದು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಒಂದು ವರ್ಷದ ಹೆಣ್ಣು ಮಗುವನ್ನು ನೆಲಕ್ಕೆ ಅಪ್ಪಳಿಸಿ  ಸಾಯಿಸಲು ಯತ್ನಿಸಿರುವ ಘಟನೆ ನಡೆದಿದೆ. 

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಅರಸಾಳು ಗ್ರಾಮದಲ್ಲಿ ಘಟನೆ ನಡೆದಿದೆ. ಅರಸಾಳು ಗ್ರಾಮದ ಕಿರಣ್ ಡಿಸೋಜಾ , ಅತ್ತೆ ಸೂರಿನ್ ಡಿಸೋಜಾ , ನಾದಿನಿ ನಿರ್ಮಲ ಮೇಲೆ ಪ್ರಕರದ ದಾಖಲಾಗಿದ್ದಾನೆ. 

ಅರಸಾಳು ಗ್ರಾಮದ ಸುನೀತಾ ಡಿಸೋಜ ಎಂಬ ಮಹಿಳೆಗೆ ಪತಿ ಕಿರಣ್ ಡಿಸೋಜಾ ಎಂಬಾತ ಅತ್ತೆ ಮತ್ತು ನಾದಿನಿಯ ಕುಮ್ಮಕ್ಕಿನಿಂದ ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. 

ಮಾರಣಾಂತಿಕ ಹಲ್ಲೆ ನಡೆಸಿ ಪುಟ್ಟ ಮಗುವನ್ನು ಸಾಯಿಸಲು ತಂದೆ ಹಲವಾರು ಬಾರಿ ಪ್ರಯತ್ನಪಟ್ಟಿದ್ದಾನೆ ಎಂದು ದೂರು ದಾಖಲಾಗಿದೆ. ಸುನೀತಾ ಡಿಸೋಜಾ ಈಗಾಗಲೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದು ಇದೇ ಕಾರಣವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. 

ಹಾಗೂ ಮನೆಯವರು ಹಲವು ಬಾರಿ ಮನಸ್ಸೋಇಚ್ಚೆ ಥಳಿಸಿದ್ದರು ಹಾಗೂ ಮಗುವಿನ ಕಾಲು ಹಿಡಿದು ನೆಲಕ್ಕೆ ಬಡಿದು ಸಾಯಿಸಲು ಪ್ರಯತ್ನಿಸಿದ್ದರು ಎಂದು ದೂರಿನಲ್ಲಿ ದಾಖಲು

ಶನಿವಾರ ಅರಸಾಳು ಚರ್ಚ್ ನಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಹೋದ ಸುನೀತಾ ಡಿಸೋಜಾ ಮೇಲೆ ಅತ್ತೆ ಮತ್ತು ಪತಿ ನಡುರಸ್ತೆಯಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ತೀವ್ರ ಗಾಯಗೊಂಡಿದ್ದ ಮಹಿಳೆಯನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಗೆ ರಾವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಕೀಸರು ಬಲೆ ಬೀಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close