Calf Elephant died-ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಮರಿ ಆನೆ ಸಾವು

 Suddilive || Shivamogga

Calf Elephant died in shivamogga shettyhalli forest, ತಾಯಿ ಹಾಲು ಸಿಗದೆ ಸಾವು

Calf, Elephant
ಸಾಂಧರ್ಭಿಕ ಚಿತ್ರ

ಶೆಟ್ಟಿಹಳ್ಳಿಯ ಕಾಡಿನಲ್ಲಿ ತಾಯಿತನಕ್ಕೆ ಅಪಕ್ವವಾದ ಆನೆಯೊಂದು ಗಂಡು ಮರಿಯೊಂದಕ್ಕೆ ಜನ್ಮ ನೀಡಿದ್ದು, ಜನ್ಮ ನೀಡಿದ ನಾಲ್ಕು ದಿನಗಳಲ್ಲಿ ತಾಯಿಯ ಹಾಲು ಸಿಗದೆ ಮರಿ ಸಾವಾಗಿದೆ. ತಾಯಿತನವನ್ನ ತೋರುವಷ್ಟು ಮೆಚೂರ್ ಆದ ಸಕ್ರಬೈಲಿನ ಹೇಮಾವತಿ ಎಂಬ ಆನೆ ತನ್ನ ಮರಿಯನ್ನ ಕಳೆದುಕೊಂಡಿದೆ.

ಹೇಮಾವತಿ ಎಂಬ  ಸರಿ ಸುಮಾರು 11 ವರ್ಷದ ಆನೆ ಕಾಡಿನಲ್ಲಿ ಶುಕ್ರವಾರ ಮರಿಹಾಕಿತ್ತು. ಮರಿಹಾಕಿದಾಗಿನಿಂದ ತಾಯಿ ಆನೆ ಹಾಲುಣಿಸದೆ ಇದ್ದು,  ಸಕ್ರೆ ಬೈಲಿನ ಸಿಬ್ಬಂದಿಗಳಾದ ಕಾವಾಡಿಗಳು ಮರಿಯನ್ನ ಬಜಾವ್ ಮಾಡಲು  ಪ್ರಯತ್ನ ಪಟ್ಟಿದ್ದಾರೆ. 

ಆದರೆ ಹೇಮಾವತಿ ಮರಿಯನ್ನ ಬಿಟ್ಟುಹೋದಾಗ ಈ ಕಾವಾಡಿಗಳು ಹಾಲುಣಿಸುವ ಕೆಲಸ ಮಾಡಿದ್ದಾರೆ. ಆದರೂ ಮರಿ ಹಾಲು ಕುಡಿಯದ ಕಾರಣ ನಿನ್ನೆ ಸಂಜೆ ಸಾವನ್ನಪ್ಪಿದೆ. ಹೇಮಾವತಿ ಇನ್ನೂ ಇಮೆಚ್ಯೂರು ಆದ ಕಾರಣ ನೇತ್ರಾವತಿಯ ಜೊತೆಗೆ ಇರುತ್ತಿತ್ತು. ಸಕ್ರೆಬೈನಿಂದ ಕಾಡಿಗೆ ಬಿಟ್ಟಾಗ ಹೇಮಾವತಿ ಮತ್ತು ನೇತ್ರಾವತಿಯ ಜೊತೆಗೆ ಕಾಡಾನೆಯೊಂದು ಸೇರಿಕೊಂಡಿತ್ತು. 

ಇದರಿಂದಾಗಿ ಹೇಮಾವತಿ ಗರ್ಭಾವತಿಯಾಗಿ ಶುಕ್ರವಾರ ಮರಿಹಾಕಿದೆ. ಆನೆಗಳು 14½ ವರ್ಷದ ನಂತರ ಪರಿಪಕ್ವವಾಗಿ ಮರಿಗಳಿಗೆ ಜನ್ಮ ನೀಡುವುದಕ್ಕೆ. ಮರಿ ಹಾಕಿದ ನಂತರ ತಾಯಿತನ ಮೆರೆಯೋದಕ್ಕೆ ಸಾಧ್ಯವಾಗುತ್ತದೆ. ಆದರೆ ಹೇಮಾವತಿ 11 ವರ್ಷಕ್ಕೆ ಮರಿ ಹಾಕಿದ ಕಾರಣ ಎದೆಹಾಲು ಉಣಿಸಲು ಸಹ ಹಾಲು ಉತ್ಪತ್ತಿ ಕಡಿಮೆ ಇತ್ತು ಎಂಬ ಮಾಹಿತಿ ಸಹ ಲಭ್ಯವಾಗಿದೆ. 

ನಿನ್ನೆ ದಾಳಿ 

ಇದೇ ವೇಳೆ ಈ ಆನೆಯನ್ನ ನೋಡಿಕೊಳ್ಳಲು 5-6 ಜನ ಸಿಬ್ಬಂದಿಗಳನ್ನ ನಿಯೋಜಿಸಲಾಗಿತ್ತು. ಈ ವೇಳೆ ಕಾಡಿನಲ್ಲಿ ಹೋಗುತ್ತಿದ್ದ ಕಾವಾಡಿ ಒಬ್ಬರಿಗೆ ಕಾಡಾನೆ ದಾಳಿ ನಡೆಸಿದೆ. ದಾಳಿಯಲ್ಲಿ ಒಂದು ಕಿಮಿ ನಷ್ಟು ಕಾಡಾನೆ ಅಟ್ಟಿಸಿಕೊಂಡು ಬಂದಿದೆ. ಎದ್ದುಬಿದ್ದು ಜೀವದ ಭಯದಿಂದ ಓಡಿದ ಕಾವಾಡಿಗನಿಗೆ ಗಾಯಗಳಾಗಿದ್ದು ನಿನ್ನೆ ಮೆಗ್ಗಾನ್ ನಲ್ಲಿ ಚಿಕಿತ್ಸೆ ನೀಡಲಾಗಿದೆ.

Calf Elephant died

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close