Suddilive || Shivamogga
DC appointed retired judge to enquiry and give a report whether appointment of administrative officer to press trust is suitable or not.
ಪತ್ರಿಕಾ ಭವನ ಕಟ್ಟಡ ಮತ್ತು ಲೆಕ್ಕಪತ್ರಗಳ ಪಾರದರ್ಶಕ ನಿರ್ವಹಣೆಗೆ ಆಡಳಿತಾಧಿಕಾರಿಯನ್ನ ನೇಮಿಸಲು ನಿವೃತ್ತ ನ್ಯಾಯಾಧೀಶರನ್ನ ನೇಮಿಸಿ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ಪತ್ರಿಕಾಭವನದ ಕಟ್ಟಡ ಮತ್ತು ಲೆಕ್ಕಪತ್ರಗಳ ಪಾರದರ್ಶಕ ನಿರ್ವಹಣೆಗೆ ಆಡಳಿತಾಧಿಕಾರಿಗಳನ್ನ ನೇಮಿಸುವಂತೆ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಡಿ.ಜಿ ನಾಗರಾಜ್ ಹಲವು ಬಾರಿ ಡಿಸಿಗೆ ಮನವಿ ಸಲ್ಲಿಸಿದ್ದರು.
ಪತ್ರಿಕಾಭವನ ಕಟ್ಟಡದ ಕಾರ್ಯಚಟುವಟಿಕೆಗಳು ಮತ್ತು ನಿರ್ವಹಣೆಯ ಬಗ್ಗೆ ಸ್ಪಷ್ಟೀಕರಣ ಕೇಳಿದಾಗ ಅಂತಹ ಆರೋಪವನ್ನ ಟ್ರಸ್ಟ್ ಅಲ್ಲಗೆಳೆದಿತ್ತು. ವಾರ್ತಾ ಇಲಾಖೆಗೆ ಇದರ ಬಗ್ಗೆ ತನಿಖೆಗೆ ಕೋರಿದಾಗ ಧ್ವನಿ ಸಂಘಟನೆ ವಾರ್ತ ಹಿರಿಯ ಅಧಿಕಾರಿಗಳ ವಿರುದ್ಧವೇ ಪೂರ್ವಗ್ರಹಪೀಡಿತರಾಗಿ ಆರೋಪ ಮಾಡುತ್ತಿದ್ದು, ತನಿಖಾ ಕಾರ್ಯದಿಂದ ತಮ್ಮನ್ನ ಕೈಬಿಡುವಂತೆ ಕೋರಿದ್ದರು.
ಇವೆಲ್ಲದರ ಬಗ್ಗೆ ಕೂಲಂಕೂಷವಾಗಿ ಪರಿಶೀಲಿಸಿದ ಡಿಸಿಯವರು ನಿವೃತ್ತ ನ್ಯಾಯಾಧೀಶ ರವೀಂದ್ರನಾಥ್ ಹೆಚ್ ಬಿ ಅವರಿಗೆ ತನಿಖೆ ನಡೆಸಿ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶವನ್ನ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಡಿ.ಜಿ ನಾಗರಾಜ್ ಸ್ವಾಗತಿಸಿದ್ದಾರೆ.