ಸಬ್ ರಿಜಿಸ್ಟ್ರಾರ್, ಆರ್ ಟಿ ಒ ಮತ್ತು ಮೆಗ್ಗಾನ್ ಕುರಿತು ಉಪಲೋಕಾಯುಕ್ತ ಅಸಮಾಧಾನ-Deputy Lokayukta Phanidra visit various department

Suddilive|| shivamogga

Deputy Lokayukta Phanidra visit various department says Sub-Registrar, RTO and Meggan are unhappy with. ಸಬ್ ರಿಜಿಸ್ಟ್ರಾರ್, ಆರ್ ಟಿ ಒ ಮತ್ತು ಮೆಗ್ಗಾನ್ ಕುರಿತು ಉಪಲೋಕಾಯುಕ್ತ ಅಸಮಾಧಾನ

Deputy lokayukta, unhappy

ಮಾನ್ಯ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ  ಇಂದು ಬೆಳಗ್ಗಿಂದ ವಿವಿಧ ಇಲಾಖೆ, ಆಸ್ಪತ್ರೆ, ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಸಂಚಲನ ನೀಡಿದ್ದಾರೆ. ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ವಿವಿಧ ಮಾಹಿತಿ ಹಂಚಿಕೊಂಡಿದ್ದಾರೆ. 

ಇವತ್ತು ಬೆಳಗ್ಗೆ 7.30 ರಿಂದ ಆಂತರಿಕ ಚರ್ಚೆ ನಡೆಸಿದ್ದೇವೆ. ಒಟ್ಟಾರೆ ಇಂದು 4 ಹಾಸ್ಟೆಲ್, 1 ಬಾಲ ಮಂದಿರ, 1 ಮಹಿಳಾ ಮಂದಿರವನ್ನು ಭೇಟಿ ಮಾಡಿದ್ದೇವೆ.‌ ಒಂದು ಬಾಲ ಮಂದಿರ ಬಹಳ ಚೆನ್ನಾಗಿದೆ. ಸಣ್ಣ ಸಣ್ಣ ಪುಟಾಣಿ ಮಕ್ಕಳು ಇದ್ದಾರೆ. ಮಕ್ಕಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೆ ಅಲ್ಲಿಯ ವಾತಾವರಣ ಚೆನ್ನಾಗಿಲ್ಲ. ಅವರು ಸರಿಪಡಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದರು. 

ಇನ್ನೊಂದು ಬಾಲ ಮಂದಿರದಲ್ಲಿ ಪ್ರೈಮರಿ ಸ್ಕೂಲ್ ಯಿಂದ 10 ನೇ ತರಗತಿಯ ಮಕ್ಕಳು ಇದ್ದಾರೆ. ಆದರೆ ಕಟ್ಟಡ ಚೆನ್ನಾಗಿಲ್ಲ. ಬೇರೆ ಕಡೆ ವರ್ಗಾವಣೆ ಮಾಡಲು ತಿಳಿಸಿದ್ದೇನೆ. ಅಲ್ಲಿ ಯಾವುದೇ ರೀತಿಯ ಕಂಪ್ಯೂಟರ್ ಇರಲಿಲ್ಲ. ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಕಲಿಕೆಗೆ ಒತ್ತು ನೀಡಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ. 

ಹಾಸ್ಟೆಲ್ ಸರಿಯಿಲ್ಲ

ಹಾಸ್ಟೆಲ್ ಗಳ ಕಟ್ಟಡ ಬಹಳ ಶೋಚನೀಯ ಸ್ಥಿತಿಯಲ್ಲಿದ್ದವು. ಅಧಿಕಾರಿಗಳು ಬೇರೇನೋ ವಿವರಣೆ ಕೊಡುತ್ತಾರೆ. ಕರ್ನಾಟಕ ಮಹಿಳಾ ಮಂದಿರದಲ್ಲಿ ಬುದ್ಧಿ ಮಾಂದ್ಯ ಮಹಿಳೆಯರಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಅವರ ಮನೆಯರು ಅವರನ್ನು ಮನೆಗೆ ಕರೆದುಕೊಂಡು ಹೋಗಲು ತಯಾರಿಲ್ಲ. 

ಮೆಗ್ಗಾನ್ ಆಸ್ಪತ್ರೆ ಸರಿಯಿಲ್ಲ

ಮೆಗ್ಗಾನ್ ಆಸ್ಪತ್ರೆಯ ಸ್ಥಿತಿ ಸರಿಯಿಲ್ಲ. ಕುಡಿಯುವ ನೀರು, ಶೌಚಾಲಯ ಯಾವುದೇ ಮೂಲಭೂತ ಸೌಕರ್ಯಗಳು ಸರಿಯಿಲ್ಲ. ಹೆರಿಗೆ ವಾರ್ಡ್ ಗಳಲ್ಲಿ ಬಾಣತಿಯರಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಇಲ್ಲ. ಸ್ವಚ್ಛತೆ ಕೂಡಾ ಇಲ್ಲ. ಮೆಗ್ಗಾನ್ ಆಸ್ಪತ್ರೆ ಬಹಳ ಅವ್ಯವಸ್ಥೆಯಿಂದ ಕೂಡಿದೆ ಎಂದರು. 

ಆಸ್ಪತ್ರೆಯಲ್ಲಿ ಔಷಧಿಗಳಿಗೆ ಹೊರಗೆ ಕಾಲಿಸುತ್ತಿರುವ ಡಾಕ್ಟರ್ ಗಳ ವಿರುದ್ಧ ಕಠಿಣವಾಗಿ ಕ್ರಮ ಕೈಗೊಳ್ಳಲಾಗುವುದು. ಡಾಕ್ಟರ್ ರೋಗಿಗಳನ್ನು ನೋಡಲು ನಿರ್ಲಕ್ಷ್ಯ ಮಾಡಿದ್ದಾರೆ. ನರ್ಸ್ ಗಳಿಗೆ ಬೇಡಿಕೆ ಹೆಚ್ಚಿದೆ. ಒಟ್ಟಾರೆ ಮೆಗ್ಗಾನ್ ಆಸ್ಪತ್ರೆ ಯಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಅಂತಹ ಡಾಕ್ಟರ್ ಗಳ ಬಗ್ಗೆ ಮಾಹಿತಿ ತಿಳಿಸಲು ಹೇಳಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.‌

ಆರ್ ಟಿ ಒ, ಸಬ್ ರಿಜಿಸ್ಟ್ರಾರ್ ನಲ್ಲಿ ಭ್ರಷ್ಠಾಚಾರ

ಆಸ್ಪತ್ರೆಯ ವೇಳೆ ಮುಗಿದ ನಂತರ ತಮ್ಮ ಕ್ಲಿನಿಕ್ ಗೆ ಹೋಗಬೇಕು. ಆಸ್ಪತ್ರೆಯ ವೇಳೆ ಹೋಗಿ ಕ್ಲಿನಿಕ್ ಅಲ್ಲಿ ಕುಳಿತ್ತಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಕೈ ಬರಹದ ದಾಖಲೆಗಳಿವೆ. ಯಾವ ಡಾಕ್ಯೂ ಮೆಂಟ್ ಎಂದು ಕೇಳಿದರೆ ಹೇಳಲು ಉತ್ತರ ಇಲ್ಲ. ಏಜೆಂಟ್ ಮೂಲಕ ಬಂದಿರುವ ದಾಖಲೆಗಳು. 

ಆರ್ ಟಿ ಓ ಆಫೀಸ್ ನಲ್ಲಿ 10 ಸಾವಿರ ವಾಹನಗಳು ಎಫ್ ಸಿ ಇಲ್ಲದ ವಾಹಗಳಿವೆ. ಏನೇ ಕೇಳಿದರೂ ಸಿಬ್ಬಂದಿಗಳಿಲ್ಲ ಎಂದು ಉತ್ತರ ಹೇಳುತ್ತಾರೆ. ಇಂತಹ ಅನಾಹುತಗಳು ಸುಮಾರು ಆಫೀಸ್ ಗಳಲ್ಲಿವೆ. ಒಟ್ಟಾರೆ 16 ಸುಮೋಟೊ ಕೇಸ್ ದಾಖಲಿಸಲಾಗಿದೆ. ಸಮಸ್ಯೆಯ ಪರಿಹಾರ ಅಗತ್ಯ. ದುರುದ್ದೇಶ ಇದ್ದರೆ ಅವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದರು. 

ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ ಎಂದರೆ ಏನೂ ಮಾಡಲು ಆಗೊಲ್ಲ

ಸೆಕಂಕ್ಷನ್ 12(1), ಸೆಕ್ಷನ್ 12 (3) ರಲ್ಲಿ ನಮಗೆ  ಹೇಳಲು ಅಧಿಕಾರ ಇದೆ. ಇಂಪ್ಲಿಮೆಂಟ್ ಮಾಡಲು ಅಧಿಕಾರ ಇಲ್ಲ. ಬಾಲ ಮಂದಿರದ ಮಕ್ಕಳು ತಪ್ಪಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಲು ಹೇಳಿದ್ದೇನೆ. ಮೆಗ್ಗಾನ್ ಡ್ರೈನೇಜ್ ನ್ನೂ ಮೊದಲು ವೈಜ್ಞಾನಿಕ ತನಿಖೆ ನಡೆಸಿ, ಸರಿಪಡಿಸಬೇಕು. 

ಸರ್ಕಾರದ ಪಾಲಿಸಿಯನ್ನು ಅನುಸರಿಸಬೇಕಾಗುತ್ತದೆ. ದುರುದ್ದೇಶದಿಂದ ಮಾಡದೇ ಇದ್ದರೆ ಅದು ತಪ್ಪು ಆದರೆ ಸರ್ಕಾರ ಹಣ ಬಿಡುಗಡೆ ಮಾಡದೇ ಇದ್ದರೆ ಏನೂ ಮಾಡಲು ಸಾಧ್ಯ ಎಂದು ಅವರು ವಿವರಿಸಿದರು. 

ತುಂಗ ನದಿ ಕುರಿತು ಮಾಹಿತಿ ಇಲ್ಲ

ತುಂಗಾ ನದಿ 14. ಅಲ್ಯೂಮಿನಿಯಂ ಇದೆ ಎಂದು ಸರ್ಕಾರಕ್ಕೆ ಆದೇಶ ಕಳುಹಿಸಿದ್ದರು ಕ್ರಮ ತೆಗೆದುಕೊಂಡಿಲ್ಲ ಎಂಬ ಪ್ರಶ್ನೆಗೆ ಅದರ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ನನಗೆ ಮಾಹಿತಿ ಇಲ್ಲದ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. 

ಸ್ಮಾರ್ಟ್ ಸಿಟಿ ಮಾಡಿದ ನಂತರವೇ ಶಿವಮೊಗ್ಗ ಅದ್ವಾನಾ ಆಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಮಾರ್ಟ್ ಸಿಟಿ ಬಗ್ಗೆ ಅಷ್ಟು ಮಾಹಿತಿ ಇಲ್ಲ, ಆದರೆ ರವೀಂದ್ರ ನಗರ ಪಾರ್ಕ್ ಬಗ್ಗೆ ಮಾಹಿತಿ ಬಂದಿದೆ ಎಂದರು.

3 ದಿನದ ಭೇಟಿ ನನಗೆ ಸಂತೋಷ ತಂದಿದೆ. 

ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಶಿವಮೊಗ್ಗ ಜಿಲ್ಲೆ ಮದ್ಯಮ ಸ್ಥಾನದಲ್ಲಿದೆ. ಶಿವಮೊಗ್ಗ ಲೋಕಾಯುಕ್ತದಲ್ಲಿ ಇದೂವರೆಗೂ ದಾಖಲಾದ 485 ಪ್ರಕರಣಗಳು, 181 ಪ್ರಕರಣಗಳನ್ನು ಕೈಗಿತ್ತಿಕೊಂಡಿದ್ದೇವೆ. ಉಳಿದ 111 ಪ್ರಕರಣಗಳಿಗೆ ಸಮಯದ ಅಭಾವದ ಕಾರಣ ವಿಚಾರಿಸಲು ಸ್ಥಳಿಯ ಎಸ್ ಪಿ ಅವರಿಗೆ ಹೇಳಿದ್ದೇವೆ.

11 ಕೇಸ್ ಅಬ್ಸೆಂಟ್ ಆಗಿವೆ.10 ಪ್ರಕರಣಗಳನ್ನು ಅಲ್ಲಿಯೇ ಮುಗಿಸಿದ್ದೇವೆ. 4 ಪ್ರಕರಣಗಳನ್ನು ಬೇರೆ ಇಲಾಖೆಗಳಿಗೆ ರೆಫರ್ ಮಾಡಿದ್ದೇವೆ. 4 ಡಿಸ್ಟ್ರಿಕ್ ಲೀಗಲ್ ಡಿಪಾರ್ಟ್ಮೆಂಟ್, 34 ಖಾಸಗಿಗೆ ಸಂಬಂಧ ಪಟ್ಟ ಇಂತಹದನ್ನು ವಾಪಾಸ್ ಕಳಿಸಲಾಗಿದೆ.

25 ಇತರೆ ಕೇಸ್ ಗಳಿವೆ. 91 ಅರ್ಜಿಗಳನ್ನು ತೆಗೆದುಕೊಂಡು  ರಿಜಿಸ್ಟರ್ ಮಾಡಿಕೊಳ್ಳಲಾಗಿದೆ.64 ಪ್ರಕರಣಗಳನ್ನು ಸರಳವಾಗಿ ಬಗೆಹರಿಸಬಹುದಾಗಿದೆ. 41 ಪ್ರಕರಣ ಇತ್ಯರ್ಥವಾಗಿದೆ. ಸುಮಾರು 485 ಪ್ರಕರಣಗಳು ದಾಖಲಾಗಿವೆ. 65 ಖಾಸಗಿ ಪ್ರಕರಣಗಳನ್ನು ಸೆಲೆಕ್ಟ್ ಮಾಡಲಾಗಿದೆ. ಒಟ್ಟಾರೆ ಮೂರು ದಿನಗಳ ಪ್ರವಾಸ ಸಂತೋಷ ತಂದಿದೆ ಎಂದರು. 

Deputy Lokayukta Phanidra visit various department

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close