Suddilive || Shivamogga
No response in Shivamogga to Karnataka bandh tomorrow-ನಾಳೆ ಕರ್ನಾಟಕ ಬಂದ್ ಗೆ ಶಿವಮೊಗ್ಗದಲ್ಲಿ ಇಲ್ಲ ಸ್ಪಂಧನೆ
ನಾಳೆ ಕನ್ನಡ ಚಳುವಳಿ ವಾಟಾಳ್ ನಾಗರಾಜ್ ಕರೆದಿರುವ ಕರ್ನಾಟಕ ಬಂದ್ ಶಿವಮೊಗ್ಗದಲ್ಲಿ ಸಂಪೂರ್ಣ ವಿಫಲವಾಗುವ ಸಾಧ್ಯತೆಯಿದೆ. ಯಾವ ಸಂಘಟನೆಗಳು ಬಂದ್ ಗೆ ಸ್ಪಂಧಿಸದ ಕಾರಣ ಬಂದ್ ಯಶಸ್ವಿಯಾಗುವ ಲಕ್ಷಣಗಳು ಕಾಣುತ್ತಿಲ್ಲ.
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಖಂಡಿಸಿ ಕನ್ನಡ ಚಳುವಳಿಯ ವಾಟಾಳ್ ನಾಗರಾಜ್ ಕರ್ನಾಟಕ ಬಂದ್ ಗೆ ಕರೆ ನೀಡಿದ್ದರು. ಆ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಈ ಬಂದ್ ಯಶಸ್ವಿಯಾಗುವ ಲಕ್ಷಣಗಳಿವೆ. ಆದರೆ ಶಿವಮೊಗ್ಗದಲ್ಲಿ ಯಾವ ಸಂಘಟನೆಗಳು ಮುಂದೆ ಬರುತ್ತಿಲ್ಲ. ಯಾವ ಒಬ್ಬ ಆಟೋ ಚಾಲಕನೂ ಬೆಂಬಲ ಸೂಚಿಸುತ್ತಿಲ್ಲ.
ಖಾಸಗಿ ಬಸ್ ಗಳು ನಾಳೆ ಎಂದಿನಂತೆ ರಸ್ತೆಗಿಳಿಯಲಿವೆ. ಈಗಾಗಲೇ ಸಾರಿಗೆ ಸಚಿವ ರಾಮಲಿಂಗರೆಡ್ಡಿಯವರು ಕೆಎಸ್ಆರ್ ಟಿಸಿ ಬಸ್ ಗಳು ರಸ್ತೆಗಿಳಿಯಲಿವೆ ಎಂದು ತಿಳಿಸಿದ್ದಾರೆ. ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಈ ಬಂದ್ ನ್ನ ಬೆಂಬಲಿಸುತ್ತಿಲ್ಲ. ಆದರೆ ನೈತಿಕ ಬೆಂಬಲವಿದೆ ಎಂದಿದ್ದಾರೆ.
ಕಾರ್ಮಿಕ ರಕ್ಷಣ ವೇದಿಕೆ ವಾಟಾಳ್ ಮಂಜು ಸಹ ಬಂದ್ ಗೆ ಬೆಂಬಲವಿಲ್ಲ ಎಂದಿದ್ದಾರೆ. ಕರ್ನಾಟಕ ನಾಡು ರಕ್ಷಣ ವೇದಿಕೆಯೂ ಸಹ ಬಂದ್ ಗೆ ಬೆಂಬಲಿಸುತ್ತಿಲ್ಲ. ಖಾಸಗಿ ನಗರ ಸಿಟಿ ಬಸ್ ಗಳು ಎಂದಿನಂತೆ ರಸ್ತೆಗಿಳಿಯಲಿವೆ. ಕರ್ನಾಟಕ ರಕ್ಷಣ ವೇದಿಕೆ ಸಿಂಹ ಸೇನೆಯ ಮಧು ಸಹ ಬಂದ್ ಗೆ ಬೆಂಬಲ ತಿರಸ್ಕರಿಸಿದ್ದಾರೆ. ಕರವೇಯ ಒಂದು ಬಣ ಬೆಂಬಲವಿಲ್ಲ ಎಂದಿದೆ.
ಹೀಗೆ ನಾಳೆಯ ಕರ್ನಾಟಕದ ಬಂದ್ ಗೆ ಶಿವಮೊಗ್ಗದಲ್ಲಿ ಬೆಂಬಲವಿಲ್ಲದಂತಾಗಿದೆ. ಇನ್ನು ಯಾವುದಾದರೂ ರಾತ್ರೋ ರಾತ್ರಿಯ ಸಂಘಟನೆಗಳು ಬೆಂಬಲ ಸೂಚಿಸಿ ಪ್ರತಿಭಟನೆ ಮಾಡಿದರೆ ಅದು ಗೊತ್ತಿಲ್ಲ. ಹೀಗಾಗಿ ಕನ್ನಡ ಸಂಘಟನೆಗಳ ಬಂದ್ ಫ್ಲಾಪ್ ಆಗಲಿದೆ.
No response in Shivamogga to Karnataka bandh tomorrow