18 ಶಾಸಕರ ಅಮಾನತ್ತಿಗೆ ಶಾಸಕ ಚೆನ್ನಿ ಆಕ್ರೋಶ- Chenni outraged over suspension

 Suddilive || Shivamogga

18 ಶಾಸಕರ ಅಮಾನತ್ತಿಗೆ ಶಾಸಕ ಚೆನ್ನಿ ಆಕ್ರೋಶ  -MLA Chenni outraged over suspension of 18 MLAs

MLA-chenni, outrage


ಶಾಸಕ ಚೆನ್ನಬಸಪ್ಪ ಸೇರಿ ವಿಪಕ್ಷಗಳ 18 ಜನ ಶಾಸಕರನ್ನ 6 ತಿಂಗಳ ವರೆಗೆ ಅಮಾನತ್ತು ಪಡಿಸಿದ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ಶಾಸಕ ಚೆನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದ್ದು ಹೋರಾಟದ ಎಚ್ಚರಿಕೆ ನೀಡಿದ್ದಾರೆ. 

ಪ್ರಜಾಪ್ರಭುತ್ವದ ಹೆಸರಿನಲ್ಲಿ 'ತುಘಲಕ್‌' ಸರ್ಕಾರ ನಡೆಯುತ್ತಿರುವ ದಬ್ಬಾಳಿಕೆಗೆ ನಮ್ಮ ಧಿಕ್ಕಾರ ಎಂದಿರಯವ ಶಾಸಕರು, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಬಾರದು ಎಂಬುದು ಭಾರತ ಸಂವಿಧಾನದ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಪಷ್ಟ ನಿಲುವು. ಆದರೂ, ಕಾಂಗ್ರೆಸ್ ಸರ್ಕಾರ ತನ್ನ ಮತ ಬ್ಯಾಂಕ್‌ ರಾಜಕೀಯದ ಅನುಕೂಲಕ್ಕಾಗಿ ತುಷ್ಟೀಕರಣ ರಾಜಕಾರಣ ನಡೆಸುತ್ತಾ, ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಹಂತದಲ್ಲೂ ಮೀಸಲಾತಿ ನೀಡುವ ಅಸಂವಿಧಾನಿಕ ನಡೆ ಕೈಗೊಂಡಿರುವುದು ತೀವ್ರ ಖಂಡನೀಯ ಎಂದಿದ್ದಾರೆ. 

ಇದು ದೇಶದ ಸಮಾನತೆ ತತ್ವದ ವಿರುದ್ಧವಾಗಿದ್ದು, ಸಮಾಜದಲ್ಲಿ ಭಿನ್ನತೆ ಉಂಟುಮಾಡಿ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ದಿಕ್ಕಿನ ಹೆಜ್ಜೆಯಾಗಿದೆ. ಇದೆಲ್ಲದರ ಜೊತೆಗೆ, 40ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರ ಮೇಲೆ ಹನಿಟ್ರ್ಯಾಪ್ ಪ್ರಕರಣಗಳ ಆರೋಪಗಳು ಕೇಳಿ ಬಂದಿದ್ದು, ಇಂತಹ ಗಂಭೀರ ಪ್ರಕರಣಗಳ ತನಿಖೆಗೆ ಆದ್ಯತೆ ನೀಡದೆ, ಕಾಂಗ್ರೆಸ್ ಸರ್ಕಾರ ಜನರ ಗಮನವನ್ನು ಬೇರೆಡೆ ಹರಿಸುತ್ತಿರುವುದು ಕಾಂಗ್ರೆಸ್ ಪಕ್ಷದ ನೀತಿಯನ್ನು ಎತ್ತಿ ತೋರುತ್ತಿದೆ ಎಂದು ದೂರಿದ್ದಾರೆ. 

ಸಿದ್ಧರಾಮಯ್ಯ ಸರ್ಕಾರ ನಡೆಸುತ್ತಿರುವ ಅನ್ಯಾಯ ಮತ್ತು ಅಕ್ರಮಗಳನ್ನು ವಿರೋಧಿಸಿ, ಸಿಬಿಐ ತನಿಖೆಗೆ ಒತ್ತಾಯಿಸಿದ್ದ ವಿರೋಧಪಕ್ಷದ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಕೇವಲ ವಿರೋಧ ಪಕ್ಷದ ಧ್ವನಿಯನ್ನು ಅಡಗಿಸುತ್ತಿರುವುದಲ್ಲದೆ, ಪ್ರಜಾಪ್ರಭುತ್ವದ ಮೂಲ ತತ್ವಗಳನ್ನೇ ತುಳಿಯುತ್ತಿದೆ. ಈ ಕ್ರಮ ಟಿಪ್ಪು ಸರ್ಕಾರದ ಸರ್ವಾಧಿಕಾರಿ ನಿಲುವನ್ನು ನೆನಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಈ ಅಮಾನತನ್ನು ಪಕ್ಷಪಾತಿ ವಿಧಾನಸಭೆಯ ಸ್ಪೀಕರ್, ಶ್ರೀ ಯು.ಟಿ. ಖಾದರ್ ತಕ್ಷಣವೇ ಹಿಂಪಡೆಯಬೇಕು, ಇಲ್ಲದಿದ್ದರೆ ಸೋ ಕಾಲ್ಡ್ ಬಂಧುಗಳ ಬಕೆಟ್ ಹಿಡಿಯುತ್ತಿರುವ ಸರ್ಕಾರದ ವಿರುದ್ಧ ಹಾಗೂ ಸಮಾಜದ ನ್ಯಾಯ ಮತ್ತು ಶಾಸಕರ-ವಿಧಾನಸಭೆಯ ಘನತೆಯನ್ನು ಮತ್ತು ರಾಜ್ಯದ ಮರ್ಯಾದೆಯನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ಸದಾ ಮುಂದುವರಿಯುತ್ತದೆ ಎಂದು ಎಚ್ಚರಿಸಿದ್ದಾರೆ. 

MLA Chenni outraged over suspension

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close