ವಾಹನಗಳ ತಪಾಸಣೆ ವೇಳೆ ಡಸ್ಟರ್ ವಾಹನದಲ್ಲಿ ಪತ್ತೆಯಾಗಿದ್ದು ಏನು?During an inspection by Vinoba Nagar police

Suddilive || shivamogga

During an inspection by Vinoba Nagar police station near the Last Bus Stop of Bomman Katte in Nagendra Colony, a suspected wild animal blood stain was found on a Duster-ವಾಹನಗಳ ತಪಾಸಣೆ ವೇಳೆ ಡಸ್ಟರ್ ವಾಹನದಲ್ಲಿ ಪತ್ತೆಯಾಗಿದ್ದು ಏನು?

Vinoba nagara, police inspection

ಶಿವಮೊಗ್ಗದ ಬೊಮ್ಮನ್ ಕಟ್ಟೆಯ ನಾಗೇಂದ್ರ ಕಾಲೋನಿಯಲ್ಲಿ ಬೊಮ್ಮನ್ ಕಟ್ಟೆಯ ಲಾಸ್ಟ್ ಬಸ್ ಸ್ಟಾಪ್ ಬಳಿ ವಿನೋಬ ನಗರ ಪೊಲೀಸರು ವಾಹನ ತಪಾಸಣೆ ಮಾಡುವ ವೇಳೆ ಡಸ್ಟರ್ ನಲ್ಲಿ ಅನುಮಾನಸ್ಪದ ಕಾಡು ಪ್ರಾಣಿಯ ರಕ್ತದ ಕಲೆ ಕೂದಲುಗಳು ಪತ್ತೆಯಾಗಿದೆ. ಈ ಕುರಿದು ಸೂಮೋಟೊ ಪ್ರಕರಣ ದಾಖಲಾಗಿದೆ. 

ವಿನೋಬನಗರ ಪೊಲೀಸರು ತಪಾಸಣೆ ನಡೆಸುವಾಗ ಬಸವಗಂಗೂರಿನ ರಸ್ತೆಯಲ್ಲಿ ಕೆಎ 14 ಎಂಬಿ 7209 ಕ್ರಮ ಸಂಖ್ಯೆಯ ಡಸ್ಟರ್ ವಾಹನ ಬಂದಿದ್ದು ಅಡ್ಡಹಾಕುತ್ತಿದ್ದಂತೆ ವಾಹನ ಚಾಲಕ ಪರಾರಿಯಾಗಿದ್ದಾನೆ. 

ತಪಾಸಣೆ ನಡೆಸಿದಾಗ ನಾಲ್ಕು ಪ್ಯಾಲೆಟ್ ಕ್ಯಾಟ್ರೇಡ್ಜ್, ಡಿಕ್ಕಿಯ ಮ್ಯಾಟ್ ಮೇಲೆ ಕಾಡು ಪ್ರಾಣಿಗಳ ರಕ್ತದ ಕಲೆ, ಪ್ರಾಣಿಯ ಕೂದಲಿನ ನಿಶಾನೆ, ಮರದ ಹಿಡಿಕೆಯಿರುವ ಕಬ್ಬಿಣದ ಚಾಕು ಒಪ್ಪೊ ಮೊಬೈಲ್ ಪತ್ತೆಯಾಗಿದೆ. 

ಈ ಪ್ರಕರಣ ಕುರಿತು ಪಶುವೈದ್ಯಾಧಿಕಾರಿಗಳ ಸೂಕೋ ತಂಡ ಸ್ಥಳಕ್ಕೆ ಆಗಮಿಸಿ ಎಲ್ಲಾ ಸ್ಯಾಂಪಲ್ ಗಳನ್ನ ಸಂಗ್ರಹಿಸಿಕೊಂಡು ಹೋಗಿವೆ. ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವನ್ಯಜೀವಿ ಸಂರಕ್ಷಣೆ ಹಾಗೂ ಅಕ್ರಮ ಆಯುಧ ಸಂಗ್ರಹದ ಅಡಿ ದೂರು ದಾಖಲಾಗಿದೆ.

During an inspection by Vinoba Nagar police

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close