Education minister Madhu Bangarappa says-ಬಾಯಿಗೆ ಜಿಪ್ ಹಾಕಿಕೊಂಡಿರುವೆ-ಸಚಿವ ಮಧು ಬಂಗಾರಪ್ಪ ಹೇಳಿದ್ದೇಕೆ?

Suddilive || Shivamogga

Education minister Madhu Bangarappa says no discussion about politics. ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ ಈ ವಿಷಯ ತಿಳಿಸಿದರು. 

Education, Minister, Madhu, bangarappa

ರಾಜಕೀಯ ವಿಷಯ ಕುರಿತು ಬಾಯಿಗೆ ಜಿಪ್ ಹಾಕಿಕೊಂಡಿರುವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಬಿಜೆಪಿಗೆ ಹೋಗುವ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಾಯಿಮುಚ್ಚಿಕೊಂಡು ಕೆಲಸ ಮಾಡಲು ಸೂಚಿಸಿದ್ದಾರೆ. ಹಾಗಾಗಿ ರಾಜಣ್ಣ, ಡಿಕೆಶಿ ನನ್ನನ್ನೂ ಸೇರಿದಂತೆ ರಾಜಕೀಯ ವಿಚಾರದ ಬಗ್ಗೆ ಬಾಯಿಗೆ ಜಿಪ್ ಹಾಕಿಕೊಂಡಿದ್ದೇನೆ ಎಂದರು. 

ವಿದ್ಯುತ್ ಪೂರೈಕೆ ಬಗ್ಗೆ:

ಈಗ ವಿದ್ಯುತ್ ಬೇಡಿಕೆ ಮೇಲೆ ಒತ್ತಡ ಇದೆ. ಇದಕ್ಕಾಗಿ ವಿದ್ಯುತ್ ಗ್ರೀಡ್ ಸ್ಥಾಪನೆ ಮಾಡಲಾಗುತ್ತಿದೆ. ಶರಾವತಿ ಪಂಪ್ ಸ್ಡೋರೇಜ್ ಬಗ್ಗೆ ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ಮಾಡಲಾಗುವುದು ಎಂದರು. 

ತ್ರಿಭಾಷ ಸೂತ್ರದ ಬಗ್ಗೆ ಎಚ್ಚರಿಕೆಯ ಗಮನ

ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಲಾಗುತ್ತಿದೆ. ಈಗ ಕಾನೂನು ಏನ್ ಇದೇಯೂ ಅದರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ.‌ ಕನ್ನಡದ ಜೊತೆಗೆ ತ್ರಿಭಾಷ ಸೂತ್ರದ ಬಗ್ಗೆ ಎಚ್ಚರಿಕೆಯ ಗಮನ ಹರಿಸಬೇಕಿದೆ. ಹೊರಗಡೆಯಿಂದ ಬರುವ ಜನರಿಗೆ ಕನ್ನಡ ಹೇರಿಕೆಯಾಗಬಾರದು. ಇದು ತಾಂತ್ರಿಕ ಸಮಸ್ಯೆಯಿದೆ. ಏಕಾಏಕಿ ಹಿಂದಿಯನ್ನ ತಿರಸ್ಕರಿಸಲು ಬರೊಲ್ಲ.  ಎಲ್ಲಾ ಭಾಷೆಗಳನ್ನ ಎಲ್ಲರೂ ಕಲಿಯಬೇಕು. ಆದರೆ ಕನ್ನಡಕ್ಕೆ ಪ್ರಧಾನ್ಯತೆ ಹೆಚ್ಚು ನೀಡಬೇಕು ಎಂದರು.

ಬಂದ್ ಬಗ್ಗೆ ಕಾದು ನೋಡಬೇಕಿದೆ

ಮಾ.22 ರಂದು ಕರ್ನಾಟಕ ಬಂದ್ ವಿಚಾರದ ಬಗ್ಗೆ ಗಮನ ಹರಿಸಬೇಕಿದೆ.  ಕಾನೂನು ಸುವ್ಯವಸ್ಥೆಯ ಬಗ್ಗೆ ಸಂಬಂಧಪಟ್ಟ ಮಂತ್ರಿಗಳಿಗೆ ಆಯಾ ಜಿಲ್ಲೆಯ ಸಿಇಒ, ಎಸ್ಪಿ ಮತ್ತು ಡಿಸಿಗೆ ಸಂಪೂರ್ಣವಾಗಿ ರಕ್ಷಣೆಗಾಗಿ ಸೂಚನೆ ನೀಡಲಾಗುವುದು. ಏನಾಗಲಿದೆ ಕಾದು ನೋಡೋಣ ಎಂದು ತಿಳಿಸಿದರು.

ಡಿಕೆಶಿ ಬಿಜೆಪಿಗೆ ಹೋಗುವ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಾಯಿಮುಚ್ಚಿಕೊಂಡು ಕೂತಿಕೋ ಎಂದಿದ್ದಾರೆ. ರಾಜಣ್ಣ, ಡಿಕೆಶಿ ಸೇರಿದಂತೆ ರಾಜಕೀಯ ವಿಚಾರದ ಬಗ್ಗೆ ಬಾಯಿಗದ ಜಿಪ್ ಹಾಕಿಕೊಂಡಿದ್ದೇನೆ ಎಂದರು. 

38 ಜನರಿಗೆ ವಿಮಾನಯಾನ

38 ಜನ ಬಂಗಾರಪ್ಪನವರ ಅನುಯಾಯಿಗಳು ದುಡಿದಿದ್ದಾರೆ. ಅವರನ್ನು ವಿಮಾನದಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ.  ನಾನು ಅವರನ್ನು ವಿಮಾನ ಏರಿದ್ದಿರಾ ಎಂದು ಕೇಳಿದೆ.‌ಇಲ್ಲಾ ಎಂದರು.  ಇದರಿಂದ ಅವರನ್ನು ಕರೆದು ಕೊಂಡು ಹೋಗಲಾಗುತ್ತಿದೆ.  ಸೊರಬದವರಿಗೆ ಬೆಂಗಳೂರಿನಲ್ಲಿ ವಾಸ‌ ಮಾಡುವವರಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ.  ಆಡಳಿತ ಭವನ, ನೀರಾವರಿ ಯೋಜನೆ ಅನೇಕ ವಿಷಯಗಳನ್ನು ಗಮನಕ್ಕೆ ತಂದಿದ್ದೆನೆ. ಅಧಿಕಾರದಲ್ಲಿ ಇದ್ದಾಗ ಕತ್ತೆದರ ದುಡಿದಾಗ ನಮ್ಮನ್ನು ನೆನಪಿಟ್ಟುಕೊಳ್ಳುತ್ತಾರೆ‌. 

ಶರಾವತಿ ಯೋಜನೆ 

ಯಾರು ತಪ್ಪು ಮಾಡಿದ್ದಾರೆ. ಅವರಿಗೆ ಕಾನೂನು ಪ್ರಕಾರ ಶಿಕ್ಷೆ ನೀಡಲಾಗುತ್ತದೆ. ಈ ಕುರಿತು ನಾನು ಅಧಿಕಾರಿಗಳಿಗೆ ತಿಳಿಸಿದ್ದೆನೆ ಎಂದರು‌.ಒಂದನೇ ತರಗತಿ ಗೆ ವಯಸ್ಸಿನ ಮಿತಿ ಕುರಿತು ಅದು ಕೋರ್ಟ್ ನಲ್ಲಿದೆ. ಆ ಬಗ್ಗೆ ನಾನು ಪ್ರಸ್ತಾಪ ಮಾಡೂದಿಲ್ಲ ಎಂದರು.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close