Siddaramaihaya will be continued as cm cannot be said-ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಮುಂದುವರೆಯುವ ಬಗ್ಗೆ ಶಾಸಕ ಬೇಳೂರು ಹೇಳಿದ್ದೇನು?

 Suddilive || Shivamogga

MLA  Gopal Krishna Beluru says CM Siddaramaihaya will be continued as cm cannot be said

Gopalkrishna, Beluru

ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ ಐದು ವರ್ಷ ಮುಂದುವರೆಯಲಿದ್ದಾರೆ ಎಂಬ ಹೇಳಿಕೆಯನ್ನ ನಾನು ಹೇಳಲು ಸಾಧ್ಯವಿಲ್ಲ. ಅದು ಹೈಕಮಾಂಡ್ ಗೆ ಬಿಟ್ಟ ವಿಷಯ ಎಂದು  ಶಾಸಕ ಗೋಪಾಲ ಕೃಷ್ಣ ಬೇಳೂರು ಹೇಳಿದ್ದಾರೆ. 

ಇಂದು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಸಿದ್ದರಾಮಯ್ಯರವರು ಸಿಎಂ ಆಗಿ ಅವಧಿ ಪೂರೈಸುವ ಬಗ್ಗೆ ಮೊದಲ ಬಾರಿ ಗೊಂದಲದ ಹೇಳಿಕೆ ಹೊರಬಿದ್ದಿದೆ. 

ಕರ್ನಾಟಕ ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಡಿಕೆಶಿ ಅವರು ಏಕನಾಥ ಶಿಂಧೆ ಆಗಲಿದ್ದಾರಾ ಎಂಬ ಮಾಧ್ಯಮಗಳ ಹೇಳಿಕೆಗೆ ಉತ್ತರಿಸಿದ ಶಾಸಕರು, ಕಾರ್ಯಕ್ರಮದಲ್ಲಿ ಸಿಕ್ದಾಗ ಅದನ್ನ ರಾಜಕಾರಣಕ್ಕೆ ಬಳಸಿಕೊಂಡರೆ ಹೇಗೆ?  ಇಶಾ‌ಫೌಂಡೇಷನ್ ಕಾರ್ಯಕ್ರಮಕ್ಕೆ ಕರೆದಾಗ ಹೋಗಿರುವ ಉಪಮುಖ್ಯಮಂತ್ರಿಗಳ ಬಗ್ಗೆ ರಾಜಕಿಯ ಮಾತನಾಡಿರುವ ಬಿಜೆಪಿಗರಿಗೆ ಏನೆಂದು ಕರೆಯೋಣ ಎಂದು ಪ್ರಶ್ನಿಸಿದ್ದಾರೆ. 

ಆರ್ ಎಸ್ ಎಸ್ ನಲ್ಲಿ ಎರಡು ವಿಭಾಗವಿದೆ. ಒಂದು ಭಾಗ ಇಂತಹ ಬೇಡದ ರಾಜಕಾರಣವನ್ನೇ ಮಾಡುತ್ತೆ. ಹಿಂದು ಆಗಿ ಕುಂಭ ಮೇಳಕ್ಕೆ ಡಿಕೆಶಿ ಹೋಗಿದ್ದಾರೆ. ಅದನ್ನ ಬಿಜೆಪಿಗೆ ಹೋಗುತ್ತಾರೆ ಎಂದು ಬಿಂಬಿಸಿರುವುದು ಸರಿಯಲ್ಲ ಎಂದು ಎಚ್ಚರಿಸಿದರು. 

ನಮ್ಮ ಪಕ್ಷದವರೇ ಗೊಂದಲ ಮೂಡಿಸುತ್ತಿದ್ದಾರೆ. ಇದು ಎಲ್ಲ ಪಕ್ಷದಲ್ಲಿ ಇರುತ್ತದೆ. ನಮ್ಮ ಪಜ್ಷದಲ್ಲಿ ನೊಣ ಸತ್ತು ಬಿದ್ದರೆ, ಬಿಜೆಪಿಯಲ್ಲಿ ಹೆಗ್ಗಣವೇ ಸತ್ತು ಬಿದ್ದಿದೆ ಎಂದ ಶಾಸಕರು,  ಸಿದ್ದರಾಮಯ್ಯ ಸಿಎಂ ಆಗಿ ಐದು ವರ್ಷದವರೆಗೆ ಇರುತ್ತಾರೆ ಎಂದು ಹೇಳಲ್ಲ. ಕೇಂದ್ರದ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಅವರಿಗೆ ಬಿಟ್ಟಿದ್ದು ಎಂದರು. 

ನಾನು ಸಚಿವ ಸ್ಥಾನದ ಆಕಾಂಕ್ಷಿನೇ ಆದರೆ ಯಾರಮೇಲೂ ಒತ್ತಡಹೇರೊಲ್ಲ. ಸಾಗರದಲ್ಲಿ ವಿದ್ಯುತ್ ಅಭಾವವಿಲ್ಲ. ಆದರೆ  ಟಿಸಿ ಸುಟ್ಟು ಹೋಗುತ್ತಿದೆ. ಇದನ್ನ ಸರಿಪಡಿಸಲಾಗುವುದು. ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಹುಟ್ಟು ಹಬ್ಬಕ್ಕೆ ಹಾರ್ಧಿಕ ಶುಭಾಶಯಗಳನ್ನ ಸಲ್ಲಿಸಿದ ಬೇಳೂರು. ಬಂಗಾರಪ್ಪನವರ ಒಡನಾಡಿಗಳನ್ನ ಬೆಂಗಳೂರಿಗೆ ವಿಮಾನದಲ್ಲಿ ಕರೆದೊಯ್ಯುತ್ತಿದ್ದಾರೆ ಸಂತೋಷದ ವಿಷಯವೆಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close