Suddilive || Shivamogga
Family boycotted by villagers, ಗ್ರಾಮಸ್ಥರಿಂದಲೇ ಕುಟುಂಬಕ್ಕೆ ಬಹಿಷ್ಕಾರ, ಕಟ್ಟಡ ಬಾಡಿಗೆ ಕೊಟ್ಟಿದ್ದಕ್ಕೆ ಬಹಿಷ್ಕಾರ
ಮಧ್ಯದ ಅಂಗಡಿಗೆ ಬಾಡಿಗೆ ಕೊಟ್ಟಿದಕ್ಕೆ ಗ್ರಾಮಸ್ಥರೆಲ್ಲಾ ಸೇರಿ ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿದ ಅಮಾನವೀಯ ಘಟನೆವೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ತಟ್ಟೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಹಿಷ್ಕಾರ ಹಾಕಿದ ಕುಟುಂಬಸ್ಥರನ್ನ ಮಾತನಾಡಿಸಿದ್ರೆ 5 ಸಾವಿರ ದಂಡ ಕಟ್ಟಿಬೇಕಂತೆ.
ಹೌದು ಭದ್ರಾವತಿ ತಾಲೂಕಿನ ತಟ್ಟೆಹಳ್ಳಿ ಗ್ರಾಮದ ಮಂಜೋಜಿರಾವ್ ಎಂಬುವರಿಗೆ ಸೇರಿದ ಜಾಗವನ್ನ ಖಾಸಗಿ ವ್ಯಕ್ತಿಯೊಬ್ಬರು 27 ವರ್ಷಕ್ಕೆ ಜಾಗ ಲೀಜ್ ಪಡೆದು ಮದ್ಯದ ಅಂಗಡಿ ತೆರೆದಿದ್ದಾರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿ ಊರಿನ ಮುಖಂಡರು ಮಂಜೋಜಿರಾವ್ ಕುಟುಂಬಕ್ಕೆ ಊರಿಂದ ಬಹಿಷ್ಕಾರ ಹಾಕಿದ್ದಲ್ಲದೇ ಅವರ ಕುಟುಂಬದವರ ಜೊತೆ ಯಾರಾದರೂ ಮಾತನಾಡಿದರೆ ಅವರಿಗೆ 5 ಸಾವಿರ ದಂಡ ವಿಧಿಸಿದ್ದಾರೆ. ಇನ್ನು ಮಂಜೋಜಿರಾವ್ ನ್ಯಾಯಕ್ಕಾಗಿ, ನ್ಯಾಯ ಕೊಡ್ಸಿ, ಕುಟುಂಬಕ್ಕೆ ಆದ ಬಹಿಷ್ಕಾರಕ್ಕೆ ಮುಕ್ತಿ ಕೊಡಿಸಿ ಅಂತಾ ಮಂಜೋಜಿರಾವ್ ಆಳಲು ತೋಡಿಕೊಂಡಿದ್ದಾರೆ.
ಬಹಿಷ್ಕಾರ ಮಾಡಿರೋದು ಬೇರ್ಯಾರು ಅಲ್ಲ ಇವರ ಊರಿನ ಮುಖಂಡರೇ, ಅವ್ರದ್ದೇ ಸಮೂದಾಯದ ಸೇರಿದಂತೆ ಐದಾರು ಸಮುದಾಯದ ಮುಖಂಡರು ಬಹಿಷ್ಕಾರ ಹಾಕಿದ್ದಾರಂತೆ. ಇನ್ನು ಈ ಕುಟುಂಬ ತಮ್ಮ ಸಮೂದಾಯವರ ಮನೆಗಳಿಗೆ ಹೋಗೋ ಹಾಗಿಲ್ಲ, ಶುಭಸಮಾರಂಭಕ್ಕೆ ಬರೋ ಹಾಗಿಲ್ಲ, ದೇವಸ್ಥಾನಕ್ಕೂ ಎಂಟ್ರಿ ಇಲ್ಲ, ಪೂಜೆಗೆ ಹೋದ್ರೆ ಪೂಜಾರಿ ಪೂಜೆ ಮಾಡಿಕೊಡಲ್ವಂತೆ, ಇನ್ನು ಮನಗ ಪರಿಸ್ಥಿತಿ ಕಂಡು ಮಂಜೋಜಿರಾವ್ ತಾಯಿ ಕಣ್ಣೀರಿಡುತ್ತಿದ್ದಾರೆ. ಇನ್ನು ಇವರನ್ನ ಮಾತನಾಡಿಸಿದಕ್ಕೆ ವ್ಯಕ್ತಿಯೊಬ್ಬರಿಗೆ ಐದು ಸಾವಿರ ದಂಡ ಹಾಕಿದ್ದಾರೆ, ಇದೆಲ್ಲಾ ನಡೆಸಬಾರದು ಕೂಡಲೇ ಇದರ ಕ್ರಮ ಆಗಬೇಕು ಅಂತಾ ಸ್ಥಳೀಯರು ಆಗ್ರಹಿಸಿದ್ದಾರೆ
ಒಟ್ಟಾರೆ, ತಮ್ಮ ಸ್ವಂತ ಜಾಗ ಬಾಡಿಗೆ ಕೊಟ್ಟಿದ್ದಕ್ಕೆ ಗ್ರಾಮಸ್ಥರು ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.