Sagara city council member meet DC-ಈ ಬಾರಿ ಸಾಗರದ ನಗರಸಭೆ ಕಾಂಗ್ರೆಸ್ ಸದಸ್ಯರ ಸರದಿ

 Suddilive || shivamogga

Sagara city council member meet DC and demands congress members should be considered for standing committee. And rejects city council presidents ruling

Sagara, city council


ಹಬ್ಬ ಮುಗಿದರೂ ಹೋಳಿಗೆ ಮುಗಿಯಲ್ಲ ಎಂಬ ಗಾದೆ ಮಾತು ಸಾಗರದ ನಗರ ಸಭೆಯ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿ ಅಧ್ಯಕ್ಷ ಚುನಾವಣೆ ನಂತರವೂ ಮುಂದು ವರೆದಿದೆ. 

ಚುನಾವಣೆಯ ವೇಳೆ ಶಾಸಕ ಗೋಪಾಲ ಕೃಷ್ಣ ಬೇಳೂರಿನ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಸಾಗರದ ಬಿಜೆಪಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ನೀಡಿದ್ದರು. ಇದಾದ ನಂತರ ಇಂದು ಕಾಂಗ್ರೆಸ್ ನವರ ಪಾಳೇಯ ಹಚ್ಚಿದ್ದಾರೆ. ಸಾಗರದ ನಗರಸಭೆ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ರನ್ನ ನೇಮಿಸಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 

ಇಂದು ನಗರಸಭೆ ಅಧ್ಯಕ್ಷರು ಬಿಜೆಪಿಯ 11 ಜನರ ಹೆಸರು ಸೂಚಿಸಿ ರೂಲಿಂಗ್ ಕೊಟ್ಟು ಹೋಗಿದ್ದು, ಕಾಂಗ್ರೆಸ್ ನ 11 ಜನ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರೂ ಪರಿಗಣಿಸದೆ ಇರುವುದರಿಂದ 11 ಜನ ಕಾಂಗ್ರೆಸ್ ನ ನಗರ ಸಭೆ ಸದಸ್ಯರು ಜಿಲ್ಲಾಧಿಕಾರಿಗಳನ್ನ‌ ಭೇಟಿ ನೀಡಿದ್ದಾರೆ. 11 ಜನ ಸದಸ್ಯರು ನಾಮಪತ್ರ ಸಲ್ಲಿಸಿದ್ದು ಕೋರಂ ಕಾಙಗ್ರೆಸ್ ನವರದ್ದು ಹೆಚ್ಚಿದೆ ಎಂಬುದು ಕಾಂಗ್ರೆಸ್ ನ ವಾದವಾಗಿದೆ.

ನಗರ ಸಭೆ ಅಧ್ಯಕ್ಷರ ರೂಲಿಂಗ್ ನ್ನ ತೆಗೆದು ಸ್ಪರ್ಧಿಸಿರುವ ಕಾಂಗ್ರೆಸ್ ನ 11 ಜನರನ್ನ ನೇಮಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.  

ಮನವಿ ನೀಡುವ ವೇಳೆ ಕಾಂಗ್ರೆಸ್ ಸದಸ್ಯರಾದ ಮಂಡಗಳಲೆ ಗಣಪತಿ,ಲಲಿತಮ್ಮ ಸಬೀನಾ ಪರ್ವಿನ್, ಶಾಹಿನಾಬಾನು,ಮದುಮಾಲತಿ, ಕುಸುಮಾಸುಬ್ಬಣ್ಣ,ನಾದಿರಾ, ಶಂಕರ್ ಅಳ್ವೆಕೋಡಿ, ಜಾಕಿರ್, ಉಮೇಶ್, ಶಂಕರ್, ಸರಸ್ವತಿ ನಾಗರಾಜ್,ಸುರೇಶ್ ಬಾಬು, ದಿನೇಶ್ ಡಿ  ಹಾಗೂ ಪಕ್ಷದ ಮುಖಂಡರುಗಳು ಹಾಜರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close