Four person arrested in Robbery case-ರೈಲ್ವೆ ನಿಲ್ದಾಣದ ಮುಂದೆ ಶೇಕ್ ಹ್ಯಾಂಡ್ ಮಾಡಿ ಬ್ರಾಸ್ ಲೈಟ್ ನ್ನ ಕಿತ್ತುಕೊಂಡು ಹೋದ ಪ್ರಕರಣ, ನಾಲ್ವರು ಬಂಧನ

 Suddilive || Shivamogga


Four persons were arrested in Robbery case where the incident took place in shivamogga railwaystation. 

Robbery, Arrested


ಶಿವಮೊಗ್ಗದ ರೈಲ್ವೆ ನಿಲ್ದಾಣದಿಂದ ಬಂದ ವ್ಯಕ್ತಿಯನ್ನ ಗೇಲಿ ಮಾಡಿ ಶೇಕ್ ಹ್ಯಾಂಡ್ ಮಾಡುವಾಗ ಕೈಯಲ್ಲಿದ್ದ 14.5 ಗ್ರಾಂ ಬ್ರಾಸ್ ಲೇಟ್ ನ್ನ ರಾಬ್ರಿ ಮಾಡಿಕೊಂಡು ಹೋದ ಪ್ರಕರಣವನ್ನ‌ ಜಯನಗರ ಪೊಲೀಸರು ಬೇಧಿಸಿದ್ದಾರೆ. ನಾಲ್ವರನ್ನ ವಶಕ್ಕೆ ಪಡೆದು ಆಟೋ ಮತ್ತು ಬ್ರಾಸ್ ಲೇಟ್ ನ್ನ ರಿಕವರಿ ಮಾಡಿದ್ದಾರೆ.

ಫೆ.19 ರಂದು ಶಿವಮೊಗ್ಗದ ಪೆಬೆಲ್ ನಿವಾಸಿ ಜಯದೇವಪ್ಪನವರು ಮದುವೆ ರಿಸೆಪ್ಷನ್ ವೊಂದರಲ್ಲಿ ಭಾಗಿಯಾಗಿ. ಅಲ್ಲಿ ಭೇಟಿಯಾದ ಸ್ನೇಹಿತನ ಮಗನನ್ನ ಬರಮಾಡಿಕೊಳ್ಳಲು ರೈಲ್ವೆ ನಿಲ್ದಾಣಕ್ಕೆ ಹೋಗಬೇಕಿತ್ತು. ಜಯದೇವಪ್ಪನವರು 11-30 ಕ್ಕೆ ರೈಲ್ವೆ ನಿಲ್ದಾಣಕ್ಕೆ ಹೋದಾಗ ರೈಲು ಮುಂದೆ ಸಾಗಿತ್ತು. 

ತಕ್ಷಣವೇ ತಾವು ತಂದಿದ್ದ ಸ್ಕೂಟರ್ ನ್ನ ನಿಲ್ಲಿಸಿದ್ದ ಜಾಗಕ್ಕೆ ಹೋದ ಜಯದೇವಪ್ಪನವರಿಗೆ 5-6 ಜನ ಒಟ್ಟಿಗೆ ಬಂದು ಏನ್ ಸಾರ್ ರೈಲು ಹೋದ ಮೇಲೆ ಬಂದಿದ್ದೀರಿ. ರೈಲು ಹೋಗಿಬಿಡ್ತು ಎಂದು ಗೇಲಿ ಮಾಡಿ ಶೇಕ್ ಹ್ಯಾಂಡ್ ಮಾಡಿದ್ದಾರೆ. ಅದರಲ್ಲಿ ಒಬ್ಬ ಜಯದೇವಪ್ಪನವರ ಬ್ರಾಸ್ ಲೈಟ್ ನ್ನ ನೋಡಿ ಕಿತ್ತುಕೊಂಡಿದ್ದಾನೆ. ನನ್ನ ಬ್ರಾಸ್ ಲೈಟ್ ಕೊಡಪ್ಪ ಎಂದು ಜಯದೇವಪ್ಪ ಕೇಳುತ್ತಿದ್ದಂತೆ ಎಲ್ಲರೂ ಓಡಿದ್ದಾರೆ. 

ಪ್ರಕರಣವನ್ನ ಜಯದೇವಪ್ಪ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಪ್ರಕರಣವನ್ನ ಜಯನಗರ ಪೊಲೀಸ್ ಠಾಣೆ ಪಿಐ ಸಿದ್ದನಗೌಡರ ನೇತೃತ್ವದಲ್ಲಿ ಭರ್ಜರಿ ಕಾರ್ಯಚಾರಣೆ ನಡೆದಿದೆ. ಪ್ರಕರಣವನ್ನ‌ ಬೇಧಿಸಿದ್ದ ಪೊಲೀಸರಿಗೆ ನಾಲ್ವರು ಪತ್ತೆಯಾಗಿದ್ದಾರೆ. 

ಮಂಜುನಾಥ ಬಡಾವಣೆಯ ಜಬೀರ್ ಜೆ (25),  2) ಬೊಮ್ಮನ್ ಕಟ್ಟೆಯ ಅಬ್ರಹಾರ್ ಯಾನೆ ಮೊಹಮ್ಮದ್ ಸಮೀವುಲ್ಲಾ (22), 3) ಬೊಮ್ಮನ್ ಕಟ್ಟೆ ಸಿ ಬ್ಲಾಕ್ ನ ಆಂಜನೇಯ (22), 4)ಆರ್ ಎಂ ಎಲ್ ನಗರದ ಸೈಯ್ಯದ್ ನೇಮನ್ ಅವರನ್ನ ಬಂಧಿಸಿ 15 ಗ್ರಾಂ ಬ್ರಾಸ್ ಲೇಟ್ ಮತ್ತು ಆಟೋವನ್ನ ವಶಕ್ಕೆ ಪಡೆಯಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close