Suddilive || Shivamogga
Fraud of lakhs of rupees by claiming to cure knee pain caused by sugar. ಆಯುರ್ವೇದಿಕ್ ಎಂದು ಪುಡಿ ಹಚ್ಚಿ ಮಂಕುಬರುವಂತೆ ಮಾಡಿ ಹಣ ವಂಚನೆ
ಶಿವಮೊಗ್ಗದಲ್ಲಿ ಮದುಮೇಹದಿಂದ ಮಂಡಿ ನೋವಿನಿಂದ ಬಳಲುತ್ತಿದ್ದ ವೃದ್ದೆಗೆ ಮಂಡಿ ನೋವು ವಾಸಿ ಮಾಡುವುದಾಗಿ ಭರವಸೆ ನೀಡಿ ಮೂರ್ಛೆ ಬರುವಂತೆ ಮಾಡಿ 1.75 ಲಕ್ಷ ರೂ. ವಂಚಿಸಿ ಅಧಿಕ ಹಣ ನೀಡಿದರೆ ಔಷಧಿಕೊಡುವುದಾಗಿ ನಂಬಿಸಿ ಹೆಚ್ಚಿನಹಣಕ್ಕೆ ಬೇಡಿಕೆಯಿಟ್ಟ ಇಬ್ಬರು ವಂಚಕರ ವಿರುದ್ಧ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವಮೊಗ್ಗದ ಊರುಗಡೂರಿನ ನಿವಾಸಿಯ ವೃದ್ದೆ ಕುಟುಂಬದ ವೈದ್ಯರ ಬಳಿ ಮದುಮೇಹ ಕಾಯಿಕೆ ತಪಾಸಣೆ ಮಾಡಿಕೊಂಡು ಹೊರಗೆ ಬರುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಸ್ಕೂಟರ್ ನಲ್ಲಿ ಬಂದು ಪರಿಚಯ ಮಾಡಿಕೊಂಡಿದ್ದಾನೆ. ನಮ್ಮದು ಆಯುರ್ವೇದಿಕ್ ಅಂಗಡಿಯಿದೆ. ನಾನು ಪ್ರದೀಪ ಎಂದು ಪರಿಚಿಸಿಕೊಂಡಿದ್ದಾನೆ.
ಅವರನ್ನ ನಂಬಿದ ವೃದ್ದೆಯ ನಂಬರ್ ಪಡೆದ ಪ್ರದೀಪ್ ವೃದ್ದೆಯ ವಿಳಾಸ ಪಡೆದು ಬಂದು ಲಕ್ಷ್ಮೀ ಪರಂಪರ ಆಯುರ್ವೇದಿಕ್ ಮೆಡಿಸಿನ್ ಗೆ ಬನ್ನಿ ಎಂದು ಕಚೇರಿಗೆ ಬನ್ನಿ ನಿಮಗೆ ಸೂಕ್ತ ಚಿಕಿತ್ಸೆ ನೀಡುತ್ತೇವೆ ಎಙದು ನಂಬಿಸಿ . 25 ಸಾವಿರ ರೂ. ಪಡೆದಿದ್ದಾನೆ. ಒಂದು ಆಟೋ ಮಾಡಿ ಹಿಂಬಾಲಿಸಿಕೊಂಡು ಬನ್ನಿ ಎಂದು ಆರ್ವೇದಿಕ್ ಕಚೇರಿಗೆ ಕರೆದೊಯ್ದಿದ್ದಾನೆ.
ಅಲ್ಲಿ ಕೆಲ ಪುಡಿಯನ್ನ ವೃದ್ಧೆಯ ಮೂಗು ಕೈಗೆ ಹಚ್ಚಿದ್ದಾನೆ. ಆಗ ಮಹಿಳೆಗೆ ಮಂಕು ಕವಿದಂತಾಗಿದೆ. ಮಂಕುಕವಿದಾಗ 5.5 ಲಕ್ಷ ರೂ ಮೆಡಿಸಿನ್ ಆಗುತ್ತೆ. ಮುಂಗಡವಾಗಿ ನೀಡಬೇಕೆಂದು ಹೇಳಿದ್ದಾರೆ. ಮಂಕಿನಲ್ಲಿಯೇ ವೃದ್ದೆ 1.5 ಲಕ್ಷ ರೂ. ಹಣ ನೀಡಿದ್ದಾರೆ. ನೀವು ಕಚೇರಿಗೆ ಬರಬೇಡಿ ನಾವೇ ಮೆಡಿಸಿನ್ ತರುತ್ತೇವೆ ಎಂದು ಹೇಳಿದ್ದಾನೆ.
ಈ ವಿಷಯವನ್ನ ವೃದ್ಧೆ ಆಟೋದಲ್ಲಿ ಹೋಗುವಾಗ ಚಾಲಕನ ಬಳಿ ಹೇಳಿಕೊಂಡಿದ್ದು ನೀವು ಮೋಸ ಹೋಗಿದ್ದೀರಿ ಎಂದು ತಿಳಿಸಿದ್ದಾರೆ. ಇದಾದ ನಂತರ ಪ್ರದೀಪ್ ಮತ್ತು ರಮೇಶ್ ಉಳಿದ ಹಣ ನೀಡಿ ಮೆಡಿಸಿನ್ ಕೊಡ್ತೀವಿ ಎಂದು ಒತ್ತಾಯಿಸಿದ್ದಾರೆ.
ಒತ್ತಾಯಿಸಿದ ಜೊತೆಗೆ ವೃದ್ಧೆಯ ಹಣಕ್ಕಾಗಿ ಬೆನ್ನುಬಿದ್ದು ಹೆಚ್ಚು ಬಲವಂತಿಸಿದ್ದಾರೆ. ಆಗ ವೃದ್ಧೆ ಪೊಲೀಸ್ ಠಾಣೆಗೆ ಪ್ರದೀಪ್ ಮತ್ತು ರಮೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.