Suddilive || Shivamogga
Hyderabad Flight has been cancelled due to technical issues. 32 ಪ್ರಯಾಣಿಜರು ವಾಪಾಸ್, ಒಂದು ವಾರದಲ್ಲಿ ಇದು ಎರಡನೇ ಬಾರಿ ವಿಮಾನ ಹಾರಾಟ ರದ್ದು.
ಇಂದು ಮಧ್ಯಾಹ್ನ 3-30 ಕ್ಕೆ ಹಾರಾಡ ಬೇಕಿದ್ದ ಸ್ಪೈಸ್ ವಿಮಾನ ರದ್ದಾಗಿದ್ದು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಡು ದಿನ ನೈಟ್ ಲ್ಯಾಂಡಿಂಗ್ ಸಮಸ್ಯೆ ಭಜನೆ ಮಾಡಲಾಗುತ್ತಿದ್ದು ಈಗ ತಾತ್ರಿಕ ದೋಷದಿಂದ ವಿಮಾನ ಹಾರಾಟ ರದ್ದಾಗಿದೆ ಎಂಬ ಸಮ್ಜಾಯಿಷಿ ನೀಡಲಾಗುತ್ತಿದೆ.
ಚೆನ್ನೈನಿಂದ ಶಿವಮೊಗ್ಗದಿಂದ ಹೈದ್ರಾಬಾದ್ ಗೆ ತೆರಳಬೇಕಿದ್ದ ಸ್ಪೈಸ್ ಜೆಟ್ ವಿಮಾನ ಹಾರಾಟ ಇಂದು ರದ್ದಾಗಿದೆ. 72 ಸಾಮರ್ಥ್ಯದ ವಿಮಾನದಲ್ಲಿ ಶಿವಮೊಗ್ಗದಿಂದ 32 ಜನರ ಪ್ರಯಾಣ ರದ್ದಾಗಿದೆ. 32 ಜನ ಪ್ರಯಾಣಿಕರು ಕಾದು ಜಾದು ನಂತರ ರದ್ದಾದ ವಿಮಾನ ಹಾರಾಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಮಾನ ವಾರದಲ್ಲಿ ಇದು ಎರಡನೇ ವಿಮಾನ ಹಾರಾಟ ರದ್ದಾಗಿದೆ. ಅಂತರರಾಷ್ಡ್ರೀಯ ಮಟ್ಟದಲ್ಲಿ ಕಟ್ಟಲಾದ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷದ ಹಿನ್ನಲೆಯಲ್ಲಿ ಹಾರಾಟ ರದ್ದಾಗಿದೆ. 32 ವಿಮಾನ ಪ್ರಯಾಣಿಕರ ಹಣ ವಾಪಾಸ್ ನೀಡಲಾಗಿದೆ. ಏರ್ ಪೋರ್ಟ್ ಇನ್ಚಾರ್ಜ್ ಅವರು ತಾಂತ್ರಿಕ ದೋಷದಿಂದ ವಿಮಾನ ಹಾರಾಟ ರದ್ಸಾಗಿದೆ ಎಂದು ಸಬೂಬು ನೀಡಿದರೆ, ಪ್ರಯಾಣಿಕರು ಎಸಿ ಹಾಳಾದ ಪರಿಣಾಮ ಪ್ರಯಾಣ ರದ್ದಾಗಿದೆ ಎಂಬುದನ್ನ ಹೇಳುತ್ತಿದ್ದಾರೆ.
ಈ ಪ್ರಯಾಣ ರದ್ದಾಗುತ್ತಿರುವುದು ಎರಡನೇ ಬಾರಿ ಒಂದು ವಾರದಲ್ಲಿ ಇದೇ ವಿಮಾನ ಚೆನ್ನೈಗೆ ಹಾರಾಟವನನ್ನ ರದ್ದು ಪಡಿಸಿತ್ತು. ಈಗ ಎಲ್ಲವೂ ಸರಿಯಿದ್ದಾಗ 4 ಗಂಟೆಗಳ ಕಾಲ ಪ್ರಯಾಣಿಕರನ್ನ ಕಾಯಿಸಿ ತಾಂತ್ರಿಕ ದೋಷದ ನೆಪದಲ್ಲಿ ವಿಮಾನ ಹಾರಾಟ ರದ್ದು ಪಡಿಸಿರುವ ಆರೋಪವನ್ನ ಪ್ರಯಾಣಿಕರು ಮಾಡಿದ್ದಾರೆ.