ನಕಲಿ ದಾಖಲೆ ಸೃಷ್ಠಿಸಿ ಸರ್ಕಾರಿ ಭೂಮಿ ಗುಳುಂ-ಇದರಲ್ಲಿ ಶಾಸಕರ ಬೆಂಬಲಿಗರಿದ್ದಾರೆ-ಮಾಜಿ ಸಚಿವರ ಗಂಭೀರ ಆರೋಪ-Government land was stolen by creating fake documents

Suddilive || sagara

ನಕಲಿ ದಾಖಲೆ ಸೃಷ್ಠಿಸಿ ಸರ್ಕಾರಿ ಭೂಮಿ ಗುಳುಂ-ಇದರಲ್ಲಿ ಶಾಸಕರ ಬೆಂಬಲಿಗರಿದ್ದಾರೆ-ಮಾಜಿ ಸಚಿವರ ಗಂಭೀರ ಆರೋಪ-Government land was stolen by creating fake documents - MLA's supporters are among them - former minister's serious accusation

Government, land

ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಗಳಿಸುವ ಕೆಲಸವನ್ನು ಅಧಿಕಾರಸ್ತ ರಾಜಕಾರಣಿಗಳು ಮತ್ತವರ ಹಿಂಬಾಲಕರು ಮಾಡುತ್ತಿದ್ದು, ಇವರಿಗೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಆರೋಪಿಸಿದ್ದಾರೆ. 

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಕಲಿ ದಾಖಲೆ ಸೃಷ್ಟಿ ಮಾಡುವ ದೊಡ್ಡ ಜಾಲವೊಂದು ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿದ್ದು ಇದಕ್ಕೆ ಅಧಿಕಾರಸ್ಥ ರಾಜಕಾರಣಿಗಳ ಅಧಿಕಾರಿಗಳ ಕೃಪಕಟಾಕ್ಷ ಇದೆ ಎಂದರು.


ನಗರ ಸಮೀಪದ ಮಂಕೋಡು ಗ್ರಾಮದ ಸ.ನಂ. ೧೨ರಲ್ಲಿ ೧೬ ಎಕರೆ ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿ ಮಾಡಿ ಮಾರಾಟ ಮಾಡಲಾಗಿದೆ. ಸುಮಾರು ೩೨ ಕೋಟಿ ರೂ. ಮಾರಕಟ್ಟೆ ಬೆಲೆ ಜಮೀನಿಗೆ ಇದ್ದು ಶೇ. ೭೫ರಷ್ಟನ್ನು ಮಾರಾಟ ಮಾಡಲಾಗಿದೆ. ಈ ಪ್ರಕರಣದಲ್ಲಿ ಅಧಿಕಾರಸ್ಥ ರಾಜಕಾರಣಿಗಳು, ತಹಶೀಲ್ದಾರ್, ಬ್ರೋಕರ್‌ಗಳು ಭಾಗಿಯಾಗಿದ್ದಾರೆ. ಕಮೀಷನ್ ಹಂಚಿಕೆಯಲ್ಲಿ ಆಗಿರುವ ಲೋಪದಿಂದ ಪ್ರಕರಣ ಬೆಳಕಿಗೆ ಬಂದಿದೆ. ಉಪವಿಭಾಗಾಧಿಕಾರಿಗಳು ದಕ್ಷರಿದ್ದರೂ ಅವರಿಗೆ ಕೆಲಸ ಮಾಡಲು ಬಿಡುತ್ತಿಲ್ಲ. ಜಿಲ್ಲಾಧಿಕಾರಿಗಳ ಮೇಲೆ ಸಾಕಷ್ಟು ವಿಶ್ವಾಸ ಇತ್ತಾದರೂ ಅವರು ಸಹ ನಿಷ್ಕಿçಯರಾಗಿದ್ದಾರೆ ಎಂದು ಹೇಳಿದರು.

ಬಿಳಿಸಿರಿ ಸ.ನಂ. ೧೩ರ ಹೊಳಗೋಡಿನಲ್ಲಿ ೧೦ ಎಕರೆಗೆ ನಕಲಿ ದಾಖಲೆ ಸೃಷ್ಟಿ, ಮಳ್ಳ ಗ್ರಾಮದ ಸ.ನಂ. ೭೯ ಮತ್ತು ೮೦ರಲ್ಲಿ ೬ ಎಕರೆ, ಬಳಸಗೋಡು ಸ.ನಂ. ೨೩ರಲ್ಲಿ ಸುಮಾರು ೨೩ ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿ ಮಾಡಲಾಗುತ್ತಿದೆ. ಬಳಸಗೋಡು ಗ್ರಾಮದ ಜಮೀನನ್ನು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಬೇಕು ಎಂದು ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಕಾಯ್ದಿರಿಸಲಾಗಿತ್ತು. ಪಟ್ಟಣ ವ್ಯಾಪ್ತಿಯ ಶಿವಪ್ಪನಾಯಕ ನಗರದಲ್ಲಿ ಬೆಲೆಬಾಳುವ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಸುವ ಪ್ರಯತ್ನ ನಡೆದಿದೆ. ಹೀಗೆ ಎಲ್ಲೆಲ್ಲಿ ಸರ್ಕಾರಿ ಜಾಗ ಇದೆಯೋ ಅಲ್ಲೆಲ್ಲಾ ಅಧಿಕಾರದಲ್ಲಿರುವ ರಾಜಕಾರಣಿಗಳು, ತಹಶೀಲ್ದಾರ್, ಶಾಸಕರ ಹಿಂಬಾಲಕರು, ಬ್ರೋಕರ್‌ಗಳು ವಕ್ಕರಿಸಿಕೊಂಡು ನಕಲಿ ದಾಖಲೆ ಸೃಷ್ಟಿಸುತ್ತಿದ್ದಾರೆ. ಬೆಂಗಳೂರಿನAತಹ ನಗರಗಳಿಗೆ ಸೀಮಿತವಾಗಿದ್ದ ಭೂಕಬಳಿಕೆ ಸಾಗರಕ್ಕೂ ಕಾಲಿಟ್ಟಿದೆ. ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಸಿ, ಕಮೀಷನ್ ಹಂಚಿಕೆ ಮಾಡುವಾಗ ಉಂಟಾದ ವ್ಯತ್ಯಾಸದಿಂದ ಒಂದಷ್ಟು ಅಕ್ರಮಗಳು ಬೆಳಕಿಗೆ ಬರುತ್ತಿದೆ. ಇದಕ್ಕೆ ಸಂಬAಧಪಟ್ಟAತೆ ಅವರ ನಡುವೆಯೆ ಬುಧವಾರ ಸಣ್ಣಪುಟ್ಟ ಗಲಾಟೆ ಸಹ ಆಗಿದೆ ಎಂದರು.

ಸಾಗರ ತಾಲ್ಲೂಕಿನಲ್ಲಿ ನಡೆದಿರುವ ಭೂಕಬಳಿಕೆ ಪ್ರಕರಣವನ್ನು ಮುಖ್ಯಮಂತ್ರಿಗಳು, ಕಂದಾಯ ಸಚಿವರ ಗಮನಕ್ಕೆ ತರುವ ಜೊತೆಗೆ ಲೋಕಾಯುಕ್ತಕ್ಕೆ ಸಹ ದೂರು ನೀಡಲಾಗುತ್ತದೆ. ಹಿಂದೆ ಕೋಟೆಕೊಪ್ಪ ಗ್ರಾಮದಲ್ಲಿ ಸಹ ೩೦ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದ ಜಮೀನನ್ನು ತ್ಯಾಗರ್ತಿ ಭಾಗದ ಕಾಂಗ್ರೇಸ್ ಮುಖಂಡರು, ಹೊಸನಗರದ ಓರ್ವ ಮುಖಂಡರು ಅಕ್ರಮವಾಗಿ ಖರೀದಿಸಿ, ನಕಲಿ ದಾಖಲೆ ಸೃಷ್ಟಿಸಿದ್ದರು. ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಸುವವರಿಗೆ ಈಗ ಬೆಲೆ ಇದೆ. ಆದರೆ ಪ್ರಾಮಾಣಿಕವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ೭ ರೈತರನ್ನು ೧೩ದಿನ ಜೈಲಿಗೆ ಕಳಿಸಿದ ಕೀರ್ತಿ ಈಗಿನ ಚುನಾಯಿತ ಪ್ರತಿನಿಧಿಗಳಿಗೆ ಸಲ್ಲುತ್ತದೆ ಎಂದು ಹೇಳಿದರು. 

ಕೋಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೊಳೆಬಾಗಿಲು ಲಾಂಚ್ ಶುಲ್ಕ ವಸೂಲಿಯಲ್ಲಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ. ಕಾರುಗಳಿಗೆ ರೂ. ೩೦, ದೊಡ್ಡ ವಾಹನಗಳಿಗೆ ೫೦ ರೂ. ಶುಲ್ಕ ವಸೂಲಿ ಮಾಡುವ ನಿಯಮ ಇದ್ದರೂ ಗುತ್ತಿಗೆದಾರರು ಕಾರುಗಳಿಗೆ ೫೦ ರೂ., ದೊಡ್ಡ ವಾಹನಗಳಿಗೆ ೧೦೦ ರೂ. ಶುಲ್ಕ ವಸೂಲಿ ಮಾಡಲಾಗುತ್ತಿದೆ. ಜನಪ್ರತಿನಿಧಿಗಳಿಗೆ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿಗೆ ಇದರ ಬಗ್ಗೆ ಮಾಹಿತಿ ಇದ್ದರೂ ಅಕ್ರಮ ತಡೆಯುವ ಪ್ರಯತ್ನ ನಡೆಸಿಲ್ಲ ಎಂದು ದೂರಿದ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ನಾನು ವಿರೋಧ ಇದ್ದು, ಪರಿಸರಾಸಕ್ತರ ಹೋರಾಟಗಳಿಗೆ ನನ್ನ ಸಂಪೂರ್ಣ ಬೆಂಬಲ ಇದೆ. ನಾನು ಶಾಸಕನಾಗಿದ್ದಾಗ ಯೋಜನೆಗೆ ವಿರೋಧ ಸಹ ವ್ಯಕ್ತಪಡಿಸಿದ್ದೇನೆ. ಇದೊಂದು ಹಣ ಹೊಡೆಯುವ ಯೋಜನೆಯಾಗಿದೆ. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಯೋಜನೆಗೆ ಸಂಬAಧಪಟ್ಟAತೆ ರಾಜಕೀಯ ಪಕ್ಷವೊಂದು ಕಮೀಷನ್ ಪಡೆದಿದೆ ಎನ್ನುವ ದೂರು ಸಹ ಇದೆ. ಇದನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

ಗೋಷ್ಟಿಯಲ್ಲಿ ಬಿಜೆಪಿ ಪ್ರಮುಖರಾದ ದೇವೇಂದ್ರಪ್ಪ ಯಲಕುಂದ್ಲಿ, ಗಣೇಶಪ್ರಸಾದ್, ಡಾ. ರಾಜನಂದಿನಿ ಕಾಗೋಡು, ರತ್ನಾಕರ ಹೊನಗೋಡು, ಟಿ.ಡಿ.ಮೇಘರಾಜ್, ಭೈರಪ್ಪ, ಭರ್ಮಪ್ಪ ಅಂದಾಸುರ, ಅರುಣ ಕುಗ್ವೆ, ಹರೀಶ್ ಮೂಡಳ್ಳಿ, ಕೋಟ್ರಪ್ಪ ನೇದರವಳ್ಳಿ, ಗಂಗಾಧರಪ್ಪ, ಬಿ.ಟಿ.ರವೀಂದ್ರ, ರಮೇಶ್ ಹಾರೆಗೊಪ್ಪ, ಸತೀಶ್ ಕೆ., ನಾರಾಯಣಪ್ಪ, ಗಿರೀಶ್ ಗೌಡ ಹಾಜರಿದ್ದರು.

Government land was stolen by creating fake documents

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close