ಹನಿಟ್ರ್ಯಾಪ್ ಗೆ ಒಳಗಾದ 48 ಗಣ್ಯ ವ್ಯಕ್ತಿಗಳ ಹೆಸರು ಬಹಿರಂಗ ಪಡಿಸಿ-ದೇವೇಂದ್ರಪ್ಪ ಆಗ್ರಹ-names of 48 prominent people who fell victim to honeytrap

 Suddilive || shivamogga

ಹನಿಟ್ರ್ಯಾಪ್ ಗೆ ಒಳಗಾದ 48 ಗಣ್ಯ ವ್ಯಕ್ತಿಗಳ ಹೆಸರು ಬಹಿರಂಗ ಪಡಿಸಿ-ದೇವೇಂದ್ರಪ್ಪ ಆಗ್ರಹ-Devendraappa demands disclosure of names of 48 prominent people who fell victim to honeytrap    

Demand, honeytrap

ಇತ್ತೀಚೆಗೆ ವಿಧಾನ ಮಂಡಲ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸಹಕಾರ ಸಚಿವರಾದ  ಕೆ ಎನ್ ರಾಜಣ್ಣನವರು 48 ರಾಜಕೀಯ ಮುಖಂಡರು ಹನಿ ಟ್ರ್ಯಾಪ್‌ಗೆ ಒಳಪಟ್ಟಿದ್ದಾರೆ ಎಂದು ಹೇಳಿಕೆ ನೀಡಿರುವುದು ಆಘಾತ ಸುದ್ದಿಯಾಗಿದೆ ಎಂದು ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಆಗ್ರಹಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ  ರಾಜಣ್ಣರ ಹೇಳಿಕೆ ಆಘಾತವಾಗಿರುವುದರಿಂದ   ಈ ಕೂಡಲೇ ಈ ಪ್ರಕರಣದಲ್ಲಿ ಸಿಲುಕಿಕೊಂಡವರ 48 ವ್ಯಕ್ತಿಗಳು ಯಾರೆಂದು ಬಹಿರಂಗಪಡಿಸಬೇಕು. ಈ ಟ್ರಾಫಿ ಗೆ ಒಳಪಟ್ಟಂತಹ ವ್ಯಕ್ತಿಗಳನ್ನು ಕೂಡಲೇ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಹನಿ ಟ್ರ್ಯಾಪ್ ನಲ್ಲಿ ಭಾಗಿಯಾದ ಹೆಣ್ಣು ಮಕ್ಕಳು ಏನಾದರೂ ವಿವಿಧ ಆಸೆ ಅಮಿಷಗಳಿಗೆ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದರೆ ಅಂತ ಹೆಣ್ಣು ಮಕ್ಕಳನ್ನು ವಿಚಾರಣೆಗೊಳಪಡಿಸಬೇಕು, ಆ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಕೊಡಬೇಕು ಮತ್ತು ಹಾಗೂ ಭಾಗವಹಿಸಿದ ಗಣ್ಯ ವ್ಯಕ್ತಿಗಳನ್ನು ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.  

ಅದೇ ರೀತಿ ಗಣ್ಯ ವ್ಯಕ್ತಿಗಳು ಏನಾದರೂ ಆ ಹೆಣ್ಣು ಮಕ್ಕಳಿಂದ ಲೈಂಗಿಕ ದೌರ್ಜನ್ಯದ ಹೆಸರಿನಲ್ಲಿ ಹನಿಟ್ರಾಪ್ ಮಾಡಿಕೊಂಡು ಗಣ್ಯ ವ್ಯಕ್ತಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರೆ  ಆ ಹೆಣ್ಣು ಮಕ್ಕಳನ್ನು ಕೂಡಲೇ ಬಂಧಿಸಿ ಅವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಎಲ್ಲಾ ಪ್ರಕರಣವು ಸತ್ಯಂಶ ಹೊರಬರಬೇಕಾದರೆ ಇದರ ಮಂಡಲ ಅಧಿವೇಶನದಲ್ಲಿ ದಾಖಲಾಗಿರುವ ಈ ಪ್ರಕರಣವನ್ನು ಈ ಕೂಡಲೇ  ಎಸ್‌ಐಟಿ ಸಂಸ್ಥೆಗೆ ತನಿಖೆಗೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎಸ್ಐಟಿ ಇಲ್ಲವಾದಲ್ಲಿ  ನಿವೃತ್ತ ನ್ಯಾಯಾಧೀಶರು ನೇಮಕ ಮಾಡಿ ಈ ಕೂಡಲೇ ಈ ಹನಿ ಟ್ರಾನಿ ಅಲೆಟ್ ಟ್ರಾಪ್‌ ನಲ್ಲಿ ಯಾರು ಸಂತ್ರಸ್ತರು ಎಂದು ಪರಿಗಣಿಸಿ ಕೂಡಲೇ ಅವರಿಗೆ ರಕ್ಷಣೆ ಕೊಡಬೇಕು ತಪ್ಪಿಸ್ತರುಯಾರೆಂದು ಪರಿಗಣಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನಾವು ಸರ್ಕಾರವನ್ನು ಆಗ್ರಹಿಸಿದರು. 


ಶಾಸಕ ಮುನಿರತ್ನಂ ರವರನ್ನು ಈ ಕೂಡಲೇ ಮಂಪರ್ ಪರೀಕ್ಷೆಗೆ ಒಳಪಡಿಸಿ

ವಿಧಾನಮಂಡಲ ಅಧಿವೇಶನದಲ್ಲಿ ಆರ್ ಆರ್ ನಗರ ಶಾಸಕ ಮುನಿರತ್ನಂ ಅವರು ಬೇಕಾಬಿಟ್ಟಿ ಹೇಳಿಕೆ ಕೊಡುತ್ತಿರುವುದು ರಾಜ್ಯದ ಸಾರ್ವಜನಿಕರಲ್ಲಿ ಗೊಂದಲಮಯ ಉಂಟು ಮಾಡುತ್ತಿದ್ದೆ ನನ್ನ ಜೀವಕ್ಕೆ ಹಾನಿಯಾಗುವ ಸಂಚು ಉಂಟಾಗುತ್ತಿದೆ.. ಎಂದು ಹೇಳಿಕೆ ನೀಡುವ ಮೂಲಕ ಉನ್ನತ ಕುಟುಂಬದ ಹಾಗೂ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸನ್ಮಾನ್ಯ ಡಿಕೆ ಶಿವಕುಮಾರ್ ಅವರ ಘನತೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. 

 ಇಂಥ ಹೇಳಿಕೆಗಳು ಪಕ್ಷದ ಚೌಕಟ್ಟಿನಲ್ಲಿ ಸಹಿಸಲಾಗುವುದಿಲ್ಲ ಮುನಿರತ್ನಂ ರವರ ಕುಟುಂಬ ಹಿನ್ನಲೆ ಹಾಗೂ ಗೂಂಡಾ ಪ್ರವೃತ್ತಿ ಹಿಂಸಾತ್ಮಕ ಹಿನ್ನಲೆಯವರದಾಗಿದ್ದು ಅವರ ಹಿನ್ನೆಲೆಯನ್ನು ಮೊದಲು ಪರಿಗಣಿಸಿ ನಂತರ ಹೇಳಿಕೆ ಕೊಡುವುದು ಉತ್ತಮ ಎಂದು ನಾವು ಪರಿಗಣಿಸುತ್ತೇವೆ ಇವರ ಹೇಳಿಕೆಯನ್ನು ರಾಜ್ಯ ಸರ್ಕಾರವು ಪರಿಗಣಿಸಿ ಕೂಡಲೇ ಇವರನ್ನು ಮಂಪರ್ ಪರೀಕ್ಷೆ ಒಳಪಡಿಸಿ ಇವರಿಂದ ವಾಸ್ತವಂಶವನ್ನು ಸಂಗ್ರಹಿಸಬೇಕಿದೆ ಎಂದರು.

names of 48 prominent people who fell victim to honeytrap

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close