house robbery at sagara rural-ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮನೆಗೆ ನುಗ್ಗಿ ವೃದ್ಧೆಯ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದ ಆರೋಪಿ ಅರೆಸ್ಟ್

Suddilive || Shivamogga

Accused of house robbery was arrested by sagar rural police.

House, Robbery



ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮನೆಯೊಳಗೆ ನುಗ್ಗಿ ವೃದ್ಧೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದ ಪ್ರಕರಣವನ್ನ ಸಾಗರ ಗ್ರಾಮಾಂತರ ಪೊಲೀಸರು ಬೇಧಿಸಿ ಆರೋಪಿಯೋರ್ವನನ್ನ ಬಂಧಿಸಿದ್ದಾರೆ.  

ಫೆ.28ರಂದು ಸಂಜೆ  ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಶೆಡ್ತಿಕೆರೆ ಗ್ರಾಮದಲ್ಲಿ  ವೃದ್ಧ ದಂಪತಿಗಳಾದ ಕೃಷ್ಣಭಟ್ ಮತ್ತು ಸಾವಿತ್ರಮ್ಮ ಟಿವಿ ನೋಡುವಾಗ ವಿಧ್ಯುತ್ ಸಂಪರ್ಕ ಕಡಿತಗೊಳಿಸಿ ಮನೆಯೊಳಗೆ ನುಗ್ಗಿದ ಅಪರುಚಿತನೋರ್ವ ವೃದ್ದ ಮಹಿಳೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುವ ಘಟನೆ ವರದಿಯಾಗಿತ್ತು.  ದೂರಿನ ಮೇರೆಗೆ ಗುನ್ನೆ ಸಂಖ್ಯೆ 0047/2025 ಕಲಂ 309(4), 332(ಬಿ), ಬಿಎನ್ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿತ್ತು. 

ಪ್ರಕರಣದಲ್ಲಿ ಕಿತ್ತುಕೊಂಡು ಹೋದ ಮಾಂಗಲ್ಯ ಸರ ಮತ್ತು ಆರೋಪಿಯ ಪತ್ತೆಗಾಗಿ ಮಿಥುನ್ ಕುಮಾರ್ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭೂಮಾರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ.ಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2 ಶಿವಮೊಗ್ಗ ಜಿಲ್ಲೆ. ರವರ ಮಾರ್ಗದರ್ಶನದಲ್ಲಿ, ಗೋಪಾಲಕೃಷ್ಣ ನಾಯ್ಕ ಟಿ. ಪೊಲೀಸ್ ಉಪಾಧೀಕ್ಷಕರು ಸಾಗರ ಉಪವಿಭಾಗರವರ ಮೇಲ್ವಿಚಾರಣೆಯಲ್ಲಿ ಮಹಾಬಲೇಶ್ವರ ಎಸ್.ಎನ್, ಪಿಐ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ ಸಿದ್ದರಾಮಪ್ಪ ಪಿ.ಎಸ್.ಐ ಹಾಗೂ  ಸಿಬ್ಬಂದಿಗಳಾದ ಸಿಹೆಚ್ಸಿ ಷೇಖ್ ಫೈರೋಜ್ ಅಹಮ್ಮದ್. ಸಿಪಿಸಿ ರವಿಕುಮಾರ್. ಹನುಮಂತ ಜಂಬೂರ್, ನಂದೀಶ್, ಪ್ರವೀಣ್ ಕುಮಾರ್, ವಿಶ್ವನಾಥ, ಚಾಲಕರಾದ ಎ.ಹೆಚ್.ಸಿ  ಗಿರೀಶ್ ಬಾಬು ಜಿಲ್ಲಾ ತಾಂತ್ರಿಕ ಘಟಕದ ಹೆಚ್ ಸಿ ಇಂದ್ರೇಶ್, ಗುರುರಾಜ್ ಮತ್ತು ವಿಜಯ್ ಕುಮಾರ್  ರವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. 

ತನಿಖಾ ತಂಡವು ದಿನಾಂಕಃ 02-03-2025 ರಂದು  ಪ್ರಕರಣ ದಾಖಲಾದ 24  ಗಂಟೆಯ ಒಳಗಾಗಿ ಆರೋಪಿ ರವಿ ಕುಮಾರ್ ಸಿ, 39 ವರ್ಷ, ಕೂಲಿ ಕೆಲಸ, ಶೆಡ್ತಿಕೆರೆ ಗ್ರಾಮ, ವರದಮೂಲ ಪೊಸ್ಟ್, ಸಾಗರ ತಾಲ್ಲೂಕು ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಅಂದಾಜು ಮೌಲ್ಯ 2,26,000/-  ರೂಗಳ 26 ಗ್ರಾಂ 400 ಮಿಲಿ ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ. 

 

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close