Press trust shivmogga-ಇದು ರದ್ದಾಗದ ಪ್ರೆಸ್ ಟ್ರಸ್ಟ್, ನಾನು ನಿರಂತರ ಅಧ್ಯಕ್ಷನಲ್ಲ-ಎನ್ ಮಂಜುನಾಥ್ ಸ್ಪಷ್ಟನೆ

 suddilive||Shivamogga


press trust shivamogga has cleared that there is no misuse of trust founds. ಪ್ರೆಸ್ ಟ್ರಸ್ಟ್ ವಿರುದ್ಧ ಪ್ರತಿಭಟನೆ ನಡೆಸುವವರಿಗೆ ಮಾಹಿತಿ ಕೊರತೆಯಿದ್ದು ಇವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎನ್ ಮಂಜುನಾಥ್ ಆರೋಪಿಸಿದರು. 

Press, trust shivamogga


ಪ್ರೆಸ್ ಟ್ರಸ್ಟ್ ನಿರ್ಮಾಣದಲ್ಲಿ ಪತ್ರಕರ್ತ ಪ್ರಮೋದ್ ಮಿಳ್ಳಗಟ್ಟಿಯವರ ಪಾತ್ರ ದೊಡ್ಡದಾಗಿದೆ.‌2016 ರಿಂದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕಾರ್ಯ ನಿರ್ವಹಿಸಿತು. ನನ್ನ ವಿರುದ್ಧ ಕೆಲ ಪತ್ರಕರ್ತರ ಸಂಘಟನೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮತ್ತು ಪ್ರತಿಭಟನೆ ನಡೆಸಲಾಗಿದೆ. ಇದು ರದ್ದುಮಾಡಲಾಗದ ಟ್ರಸ್ಟ್  ಎಂದು ಅಧ್ಯಕ್ಷ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

ಆಡಳಿತ ಮಂಡಳಿ ಮತ್ತು ಟ್ರಸ್ಟ್ ನ ಮಂಡಳಿಯಿದೆ. ಟ್ರಸ್ಟ್ ನಲ್ಲಿ ನಿರಂತರ ತಿದ್ದುಪಡಿಯ ಅವಕಾಶ ಇಟ್ಟುಕೊಂಡು ರಚನೆಯಾಗಿದೆ. ನಿವೇಶನದ ಗುರಿಯಿಟ್ಟುಕೊಂಡು ಟ್ರಸ್ಟ್ ನಿರ್ಮಿಸಲಾಗಿತ್ತು. 227 ಜನರಿಗೆ ಮೊದಲ ಹಂತದಲ್ಲಿ ಹಂಚಲಾಗಿದೆ. ಈಗ 68 ಜನರಿಗೆ ನಿವೇಶನ ನೀಡಲು ಸಿದ್ದತೆ ನಡೆದಿದೆ ಎಂದರು.

ನಾನು ನಿರಂತರವಾಗಿ ಅಧ್ಯಕ್ಷನಾಗಿ ಇರಬೇಕು ಅಂತಲ್ಲ. ಕಾನೂನು ಬದ್ದವಾಗಿ ಅಧ್ಯಕ್ಷನಿದ್ದೇನೆ. ಮುಂದುವರೆದಿದ್ದೇನೆ.  ಕೆಲವರು ಇದನ್ನ ಸಾಮಾಜಿಕ ಜಾಕತಾಣದಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಪ್ರತಿಭಟನೆ ಮತ್ತು ಸಾನಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ ಎಂದರು. 

60 ಲಕ್ಷ ರೂ. ಹಣ ಸಂಗ್ರಹವಾಗಿದೆ. ಟ್ರಸ್ಟ್ ಗೆ ವಾರ್ತ ಇಲಾಖೆ ಸಹಕಾರ ನೀಡುತ್ತಿದೆ ಎಂಬ ಆರೋಪ ಹೊರಿಸಲಾಗಿದೆ. ಈ ಆರೋಪಗಳು ಸತ್ಯಕ್ಕೆ ದೂರವಾದುದ್ದು,  ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಕಾರ್ಯನಿರತ ಪತ್ರಕರ್ತ ಸಂಘ ಕ್ಕೆ ಜಾಗ ನೀಡಲು ಬರೊಲ್ಲ ಎಂಬ ಕಾರಣ ಟ್ರಸ್ಟ್ ನಿರ್ಮಾಣವಾಗಿತ್ತು. ಮ್ಯನೇಜಿಂಗ್ ಅಧ್ಯಕ್ಷರಾಗಿ ನಾನು ನೇಮಕನಾಗಿದ್ದೆ ಎಂದು ವಿವರಿಸಿದರು. 

ಟಸ್ಟ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ನಡುವಿನ ಫೈನ್ ನಲ್ಲಿ ಹೈಕೋರ್ಟ್ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷರು ಟ್ರಸ್ಟ್ ನ ಅಧ್ಯಕ್ಷರಾಗಲು ಬರೊಲ್ಲ ಎಂದಿದೆ. ನಂತರ ಸಂಘ ಕೇಸ್ ವಾಪಾಸ್ ಪಡೆದ ಕಾರಣ, ಸಂಘ ಮತ್ತು ಟ್ರಸ್ಟ್ ಒಟ್ಟಾಗಿ ಮುಂದುವರೆಯುತ್ತಿದ್ದೇವೆ. ನಮ್ಮ ವಿರುದ್ಧ ಅಪಪ್ರಚಾರ ಮಾಡಿದವರ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದಾಗಿ ಮಂಜುನಾಥ್ ಗುಟರ್ ಹಾಕಿದರು. 

ಪತ್ರಕರ್ತರಿಗೆ ಸಾವಾದಾಗ ಹಣ ಹಂಚಿದ್ದೇವೆ ಪ್ರಚಾರ ಪಡೆದಿಲ್ಲ. ಪತ್ರಕರ್ತರಿಗೆ ಪ್ರವಾಸೋದ್ಯಮ, ಕ್ರೀಡೆಗಳು ಮತ್ತು ಕ್ಷೇಮಾಭಿವೃದ್ಧಿಯನ್ನ ನಡೆಸಿಕೊಂಡು ಬರುತ್ತಿದ್ದೇವೆ. ಟ್ರಸ್ಟ್ ನ ಹಣಕಾಸು ಆಡಿಟಿಂಗ್ ಕಾಲಕಾಲಕ್ಕೆ ನಡೆಯುತ್ತಿದೆ. ರಾಜ್ಯಮಟ್ಟದಲ್ಲೇ ಮಾದರಿಯಾದಂತಹ ಭವನ ಆಗಿದೆ. ನಾನು ನಿರಂತರ ಅಧ್ಯಕ್ಷನಲ್ಲ ಎಂದು ಮಂಜುನಾಥ್ ಸ್ಪಷ್ಟಪಡಿಸಿದರು. 

ಮುಂದಿನ ದಿನಗಳಲ್ಲಿ ಪತ್ರಕರ್ತರ ಆರೋಗ್ಯ, ಮಕ್ಕಳ ಶೈಕ್ಷಣಿಕ ಚಟುವಟಿಕೆಯನ್ನ ನಿರಂತರವಾಗಿ ನಡೆಸುವ ಕೆಲಸ ಮಾಡಲಿದ್ದೇವೆ. ಟ್ರಸ್ಟ್ ನಲ್ಲಿ ನಿರಂತರ ತಿದ್ದುಪಡಿಯ ಮೂಲಕವೇ ಚಟುವಟಿಕೆ ನಡೆಸುವ ಕೆಲಸ ಮಾಸುತ್ತಿದ್ದೇವೆ. ಅಪಪ್ರಚಾರಕ್ಕೆ ಯಾವುದೇ ಕಾರಣಕ್ಕೂ ತಲೆಕೊಡಬೇಡಿ. ಟ್ರಸ್ಟ್ ಎಲ್ಲ ಪತ್ರಕರ್ತರ ಪರವಾಗಿದೆ ಎಂದರು. 

ಪತ್ರಿಕಾಗೋಷ್ಠಿಗೆ ಇದುವರೆಗೆ 2000 ಇರುವುದನ್ನ 1500 ರೂ.ಗೆ ಇಳಿಸಲಾಗಿದೆ.ಮಾ.5 ರಿಂದ ಈ ಯೀಜನೆ ಜಾರಿಯಾಗಲಿದೆ.  60 ಲಕ್ಷ ಹಣ ಸಂಗ್ರಹವಾಗಿರುವ ಬಗ್ಗೆ ಆರೋಪಿತರು ಎಲ್ಲಿ ಸಂಗ್ರಹವಾಗಿದೆ ಎಂದು ಹೇಳಬೇಕು. ಸಂಗ್ರಹದ ಹಣದ ಬಗ್ಗೆ ಆಡಿಟಿಂಗ್ ಕಾಲಕಾಲಕ್ಕೆ ನಡೆದಿದೆ. ಇದರಲ್ಲಿ ಮುಚ್ಚುಮರೆಏನಿಲ್ಲ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close