Suddilive || Shiralkoppa
In Shiralkoppa Petrol pump staff attacked for allegedly pouring petrol into vehicle that came behind
ಶಿರಾಳಕೊಪ್ಪ ಪೆಟ್ರೋಲ್ ಬಂಕ್ ನಲ್ಲಿ ಹಿಂದೆ ಬಂದ ವಾಹನಕ್ಕೆ ಪೆಟ್ರೋಲ್ ತುಂಬಿಸಿದ ಕಾರಣಕ್ಕೆ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಹಲ್ಲೆಯನ್ನ ಮುಸ್ಲೀಂ ಯುವಕರಿಂದ ಮಾಡಿರುವುದಾಗಿ ಹಿಂದೂ ಸಂಘಟನೆಗಳು ಆರೋಪಿಸಿದೆ.
ಘಟನೆಯಲ್ಲಿ ಹಲ್ಲೆಗೊಳಗಾದ ಯುವಕನನ್ನ ನೇರಲಗಿ ಗ್ರಾಮದ ರವೀಂದ್ರ ಎಂದು ಗುರುತಿಸಲಾಗಿದೆ. ಯುವಕನ ಮರ್ಮಾಂಗಕ್ಕೆ ಹೊಡೆದಿರುವುದಾಗಿ ಹಿಂದೂ ಸಂಘಟನೆಗಳು ಆರೋಪಿಸಿದ್ದು ಗಾಯಗೊಂಡವನನ್ನ ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ಈ ದಿನ ಸಂಜೆ ಪೆಟ್ರೋಲ್ ಬಂಕ್ ನಲ್ಲಿ ರವೀಂದ್ರ ಎಂಬ ಯುವಕ ಕೆಲಸ ಮಾಡುತ್ತಿದ್ದು ಹಿಂದೆ ಬಂದ ಗಾಡಿಗೆ ಪೆಟ್ರೋಲ್ ಹಾಕಿದ ಎಂಬ ಕಾರಣಕ್ಕೆ ಕೆಲ ಮುಸ್ಲಿಂ ಗೂಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದೆ.
ಯುವಕ ರವೀಂದ್ರನ ಮೇಲೆ ಹಲ್ಲೆ ನಡೆದ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಯುವಕ ಮೇಲೆ ಹಿಗ್ಗಾಮುಗ್ಗ ಥಳಿಸಲಾಗಿದೆ. ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಂಘಟನೆ ಆಗ್ರಹಿಸಿದೆ.