job in private company-ಖಾಸಗಿ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ ವಂಚನೆ

 Suddilive || Shivamogga

An incident of being cheated by promising a job in private company 

Cheated, job


ಖಾಸಗಿ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿರುವ ಘಟನೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

31 ವರ್ಷದ ಯುವಕನಿಗೆ ಸ್ನೇಹಿತನ ಮೂಲಕ ಹೈದ್ರಾಬಾದ್ ವಾಸಿ ಮಹೇಶ್ ಎಂಬುವರು ಪರಿಚಯವಾಗಿದ್ದು, ಮಹೇಶ್ 2023 ರ ಡಿಸೆಂಬರ್ ನಲ್ಲಿ ಟೆಸ್ಟಾ ಇನ್ ಸ್ಟಿಟ್ಯೂಟ್ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ 2.10 ಲಕ್ಷ ರೂ. ಹಣ ಪಡೆದಿರುವ ಆರೋಪ ಮಾಡಲಾಗಿದೆ. 

ಹಣಪಡೆದ ನಂತರ 31 ವರ್ಷದ ಯುವಕ ತನಗೆ ನೀಡಿರುವ ಅಪಾಯಿಂಟ್ ಮೆಂಟ್ ಲೆಟರ್ ನಕಲಿಯಾಗಿದೆ ಎಂದು ಹೇಳಿದಾಗ ಮಹೇಶ್ ಹಣ ವಾಪಾಸ್ ನೀಡುವುದಾಗಿ ಹೇಳಿ ಇದುವರೆಗೂ ಹಣ ನೀಡಿಲ್ಲ ಎಂದು ದೂರು ದಾಖಲಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close