ರನ್ಯ ರಾವ್ ಪ್ರಕರಣದಲ್ಲಿ ಕೇವಲ ರಾಜ್ಯ ಸರ್ಕಾರದ ಪಾತ್ರವಿದೆಯಾ? Is it only the state government's fault

 suddilive || Shivamogga

Is it only the state government's fault in the actress Ranyarao case? Or is it the center's? Whose fault is it for the customs failure, questioned Labor Minister Santosh Lad.

Ranya rao, actress


ನಟಿ ರನ್ಯರಾವ್ ವಿಚಾರದಲ್ಲಿ ಕೇವಲ ರಾಜ್ಯ ಸರ್ಕಾರದ ಅತ್ರವಿದೆಯಾ? ಕೇಂದ್ರದ್ದು ಇಲ್ವಾ? ಕಸ್ಟಮ್ಸ್ ವೈಫಲ್ಯ ಯಾರದ್ದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು. 

ಇಂದು ಶಿವಮೊಗ್ಗಕ್ಕೆ ಆಗಮಿಸಿದ ಸಚಿವರು, ಶಿಸ್ತುಪಾಲನೆಯಲ್ಲಿ ಸರ್ಕಾರ ಉಲ್ಲಂಘಿಸಿದೆ ಎಂದು ಬಿಂಬಿಸಲಾಗುತ್ತಿದೆ.  ಆಗಿರುವ ಬಗ್ಗೆ ಪ್ರಶ್ನೆ ಬೇಡ ಕಸ್ಟಮ್ಸ್ ಯಾವುದರ ಅಡಿ ಬರುತ್ತೆ? ಅದಾನಿ ಪೋರ್ಟ್ ನಲ್ಲಿ 21 ಸಾವಿರ ಕೋಟಿ ಮಾದಕ ವಸ್ತು ಸೀಜ್ ಆಗಿತ್ತು. ಇದನ್ನ ಯಾಕೆ ಕೇಳಲ್ಲ ಎಂದು ಮರುಪ್ರಶ್ನಿಸಿದರು.

ರನ್ಯಾರಾವ್ ವಿಚಾರದಲ್ಲಿ ಪತ್ರಕರ್ತರು ಕೇಳಿದಪ್ರಶ್ನೆಗೆ ಗರಂ ಸಚಿವ ರಾಜ್ಯ ಸರ್ಕರದ ಅಧಿಕಾರಿಗಳ ಮೇಲೆ ಬೊಟ್ಟು ಮಾಡುವುದೇಕೆ ಎಂದರು. ಏರ್ ಪೋರ್ಟ್ ನಲ್ಲಿ 10 ವರ್ಷದಿಂದ ಅಧಿಕಾರಿಗಳು ಒಂದೇ ಕಡೆ ಇದ್ದಾರೆ ಎಂಬ ಪ್ರಶನೆಗೆ ಅದಕ್ಕೆ ರಾಜ್ಯ ಸರ್ಕಾರ ಒಂದೇ ಜವಬ್ದಾರಿ ಅಲ್ಲ ಎಂದರು. 

ಹಣ ದುರುಪಯೋಗದಿಂದ ಗ್ಯಾರೆಂಟಿ ಹಣ ದುರುಪಯೋಗ ಆಗೊಲ್ಲ. 60 ಸಾವಿರ ಕೋಟಿ ಗ್ಯಾರೆಂಟಿ ಗೆ ಹಣ ಬಿಡುಗಡೆಯಾಗುತ್ತಿದೆ. ಶಾಸಕರ ಹಕ್ಕನ್ನ ಮೊಟಕುಗೊಳಿಸುವ ಉದ್ದೇಶವಿಲ್ಲ. ಅನುಷ್ಠಾನಕ್ಕೆ ತರಲು ಸಮಿತಿ ಬೇಕಿದೆ ಹಾಗಾಗಿ ರಚಿಸಲಾಗಿದೆ ಎಂದರು. 

ಅಲ್ಪ ಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲು ಬಗ್ಗೆ ಬಿಜೆಪಿ ಆಕ್ಷೇಪಿಸಿದೆ. ಬಿಜೆಪಿ 10%ಮೀಸಲು ಯಾರಿಗೆ ಕೊಟ್ರು? ಅದು ಒಙದೇ ಸಮುದಾಯವಲ್ವಾ ಎಂದು ಪ್ರಶ್ನಿಸಿದ ಸಚಿವರು ಕಾರ್ಮಿಕರ ಕಿಟ್ ನಲ್ಲಿ ಅವ್ಯವಹಾರ ಆಗಿದೆ ಎಂಬ  ಆರೋಪ ಬಿಜೆಪಿದು ಆದರೆ ಅದಕ್ಕೆ ಸಾಕ್ಷಿ ಕೊಡಲಿ ಎಂದು ಹೇಳಿದರು. 

Is it only the state government's fault

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close