suddilive || shivamogga
Holi festival celebrations are underway in Shivamogga. Youths who have painted each other are celebrating with enthusiasm at these five places. Scenes of people riding bikes covered in paint are common.
ಮಲೆನಾಡು ಅಡಿಕೆ ವರ್ತಕರ ಸಂಘ, ಗೋಪಿ ವೃತ್ತ, ದುರ್ಗಿಗುಡಿ ದುರ್ಗಮ್ಮನ ಬೀದಿ, ರಾಯಲ್ ಆರ್ಜೆಡ್, ಗಾಂಧಿ ಬಜಾರ್ ಹೀಗೆ ಬಣ್ಣ ಹಚ್ಚಿಕೊಂಡು ಡಿಜೆ ಹಾಡುಗಳಿಗೆ ಯುವಕರ ಗುಂಪು ಸ್ಟೆಪ್ಸ್ ಇಟ್ಟಿದ್ದಾರೆ. ಯುವಕ ಯುವತಿಯರು ಸಂಭ್ರಮದ ಹೋಳಿಯಲ್ಲಿ ಇಂದು ತೇಲಿದ್ದಾರೆ.
ಹೋಳಿ ಹಬ್ಬ ಆಚರಣೆ ಶಿವಮೊಗ್ಗದಲ್ಲಿ ಸಂಭ್ರಮದಿಂದ ನಡೆದಿದೆ. ಪರಸ್ಪರ ಬಣ್ಣ ಹಚ್ಚಿಕೊಂಡ ಯುವಕರು ಈ ಐದು ಸ್ಥಳಗಳಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಬಣ್ಣ ಹಚ್ಚಿಕೊಂಡು ಬೈಕ್ ಗಳಲ್ಲಿ ತಿರುಗುತ್ತಿರುವ ದೃಶ್ಯಗಳು ಸಾನಾನ್ಯವಾಗಿದೆ.
ಮಧ್ಯಾಹ್ನ 12 ರವರೆಗೆ ಬಣ್ಣ ಹಬ್ಬ ಆಡಿದ ಯುವಕ, ಯುವತಿಯರು ನಂತರ ಹೊಳೆ ಮತ್ತು ಚಾನೆಲ್ ನಲ್ಲಿ ಮಿಂದು ಬಂದಿದ್ದಾರೆ.
ಹಬ್ವದ ಪ್ರಯುಕ್ತ ಇಂದು ಕಾಮಣ್ಣನನ್ನ ಸುಡಲಾಗುತ್ತಿದೆ. ನಿನ್ನೆ ಶುಕ್ರವಾರ ವಾದುದರಿಂದ ಕಾಮಣ್ಣನನ್ನ ಸುಡಲಾಗಿಲ್ಲ. ಇಂದು ರಾತ್ರಿ ಸುಡಲಾಗುತ್ತಿದೆ.
Holi festival celebrations