SUDDILIVE || SORABA
ಮರ್ಯಾದೆಗೆ ಅಂಜಿ ಮಗಳನ್ನ ಕೊಲೆಗೆ ಯತ್ನಿಸಿದ ತಂದೆ-Father attempts to murder daughter out of fear for her honor
ಮದುವೆಗೂ ಮುನ್ನವೇ ಮಗಳು ಗರ್ಭಿಣಿಯಾಗಿದ್ದಾಳೆ ಎಂಬ ವಿಷಯದಲ್ಲಿ ಮರ್ಯಾದೆಗೆ ಅಂಜಿ ಮಗಳನ್ನ ತಂದೆಯೇ ಕೊಲೆ ಮಾಡಲು ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಗ್ರಾಮದಲ್ಲಿ ನಿನ್ನೆ ನಡೆದಿದೆ.
ಪುತ್ರಿ ಗರ್ಭಿಣಿಯಾದ ವಿಷಯ ವಿಷಯ ತಿಳಿದ ತಂದೆ ಧರ್ಮಾನಾಯ್ಕ ಸಿಟ್ಟಾಗಿದ್ದರು. ಆಸ್ಪತ್ರೆಗೆ ಹೋಗೋಣವೆಂದು ಹೇಳಿ ಪತ್ನಿ ಹಾಗೂ ಮಗಳನ್ನ ಉಳವಿ ಸಮೀಪದ ಕಾನಹಳ್ಳಿ ಬಳಿಯ ಕಣ್ಣೂರು ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದರು.
ಅರಣ್ಯ ಪ್ರದೇಶದಲ್ಲಿ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಪತ್ನಿ ಮಗಳನ್ನ ಸಾಯಿಸ ಬೇಡಿ ಎಂದು ಪತಿ ಧರ್ಮನಾಯ್ಕರ ಕಾಲಿಗೆ ಬಿದ್ದಿದ್ದಾರೆ. ಕಾಲಿಗೆ ಬಿದ್ದರೂ ಪತಿ ಒಪ್ಪಿಕೊಳ್ಳಲಿಲ್ಲ. ಈ ವೇಳೆ ಮಗಳು ಪ್ರಜ್ಞೆತಪ್ಪಿ ಬಿದ್ದಿದ್ದಾಳೆ.
ಪ್ರಜ್ಞೆ ತಪ್ಪಿದ ಮಗಳನ್ನ ಸತ್ತಿದ್ದಾಳೆ ಎಂದು ಭಾವಿಸಿ ತಂದೆ ತಾಯಿ ಊರಕಡೆ ಹೊರಟಿದ್ದಾರೆ. ನಂತರ ಪ್ರಜ್ಞೆ ಬಂದ ಯುವತಿ ಕಾಡಿನಿಂದ ರಸ್ತೆಯ ವರೆಗೆ ನಡೆದುಕೊಂಡು ಬಂದು ಸ್ಥಳೀಯರ ಸಹಾಯದಿಂದ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾಳೆ. ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
Father attempts to murder daughter