Suddilive || Shivamogga
Keladi Rani Chennamma Drama Performance-ದಕ್ಷಿಣಾಧೀಶ್ವರಿ ಕೆಳದಿ ರಾಣಿ ಚೆನ್ನಮ್ಮ ನಾಟಕ ಪ್ರದರ್ಶನ
ಗಾರಾ ಫೌಂಡೇಶನ್, ಕ್ರಿಯೇಟಿವ್ ಗ್ರೂಪ್, ಭೂಮಿ ಸಂಸ್ಥೆಯ ಸಹಯೋಗದಲ್ಲಿ ರಂಗ ಚಿತ್ತಾರ ಎನ್ನುವ ರಂಗ ಕಾರ್ಯಕ್ರಮವನ್ನು ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದೆ, ಇದೊಂದು ರಂಗಕರ್ಮಿಗಳ ಉತ್ತೇಜನಕ್ಕಾಗಿ ಆಯೋಜಿಸಲಾಗಿದ್ದು, ರಂಗಗೀತೆ, ಹತ್ತು ಜನ ಕಲಾವಿದರಿಗೆ ಮಲೆನಾಡು ಕಲಾ ಕೌಸ್ತುಭ ಪ್ರಶಸ್ತಿ ಮತ್ತು ಗೌರವ ಸನ್ಮಾನ ಇರುತ್ತದೆ, ಇದೇ ತಿಂಗಳು ಬಿಡುಗಡೆಯಾಗಲಿರುವ ದಾಸರಹಳ್ಳಿ ಕನ್ನಡ ಚಲನಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಸಿನಿಮಾ ಯಶಸ್ವಿ ಪ್ರದರ್ಶನಕ್ಕೆ ಹಾರೈಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ,
ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಆಯೋಜಕರು ನಾಳೆ ಶನಿವಾರ ಸಂಜೆ ೫.೩೦ ರಿಂದ ೯ ರವರೆಗೆ ರಂಗ ಚಿತ್ತಾರ ನಡೆಯಲಿದ್ದು ಈಗಾಗಲೇ ಯಶಸ್ವಿ ಪ್ರದರ್ಶನ ಮಾಡಿರುವ ಹಾಗೂ ಜನ ಮೆಚ್ಚುಗೆ ಗಳಿಸಿರುವ ದಕ್ಷಿಣಾಧೀಶ್ವರಿ ಕೆಳದಿ ರಾಣಿ ಚೆನ್ನಮ್ಮ ನಾಟಕದಲ್ಲಿ ಬರುವ ಕೆಳದಿ ರಾಣಿ ಚೆನ್ನಮ್ಮ ಪಾತ್ರವನ್ನು ಬಹುಮುಖಿ ಪ್ರತಿಭೆ ಲಕ್ಷ್ಮೀಯವರು ನಿರ್ವಹಿಸಲಿದ್ದಾರೆ, ರಂಗಕರ್ಮಿ ಗಣೇಶ್ ಕೆಂಚಾನಲ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಐತಿಹಾಸಿಕ ನಾಟಕ ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿದೆ ಎಂದು ತಿಳಿಸಿದರು
ಈ ನಾಟಕದ ವೀಕ್ಷಣೆಗೆ ಬರುವ ಕಲಾಸಕ್ತರಿಗೆ, ಸಾರ್ವಜನಿಕರಿಗೆ ಉಚಿತ ಪ್ರವೇಶ ಇರುತ್ತದೆ, ಮುಕ್ತವಾಗಿ ಬಂದು ರಂಗ ಚಿತ್ತಾರದಲ್ಲಿ ಭಾಗವಹಿಸಲು ಈ ಮೂಲಕ ಆಯೋಜಕರು ಕೋರಿದ್ದಾರೆ, ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಬೂಡಾ ಅಧ್ಯಕ್ಷರಾದ ಹೆಚ್.ಎಸ್ ಸುಂದರೇಶ್‌ರವರು ನೆರವೇರಿಸುತ್ತಾರೆ, ಮುಖ್ಯ ಅತಿಥಿಗಳಾಗಿ ಕೆ.ಎಸ್ ಶಶಿ, ವಾಲಿಬಾಲ್ ಅಸೋಸಿಯೇಷನ್, ಎಸ್.ಆರ್ ಶ್ರೀನಾಥ್ ಅಧ್ಯಕ್ಷರು ಶಿವಮೊಗ್ಗ ಪುಟ್ಬಾಲ್ ಸಂಸ್ಥೆ, ಹಾಗೂ ದಾಸರಹಳ್ಳಿ ಚಲನಚಿತ್ರದ ಸಹ ನಿರ್ಮಾಪಕರು, ಗೀತಾ ಮಾನೆ ವಕೀಲರು ಶಿವಮೊಗ್ಗ, ಚಿರಂಜೀವಿ ಬಾಬು ಸಮಾಜಸೇವಕರು ಶಿವಮೊಗ್ಗ, ವಿನೋದ್ ಮಾಲೀಕರು ಕಂಪ್ಯೂಟರ್ ಹೌಸ್ ಶಿವಮೊಗ್ಗ, ಇವರುಗಳು ಉಪಸ್ಥಿತರಿರುತ್ತಾರೆ,
ಮಲೆನಾಡು ಕಲಾ ಕೌಸ್ತುಭ ಪ್ರಶಸ್ತಿಯನ್ನು ಗಣೇಶ್ ಕೆಂಚನಾಲ, ಶಿವಮೊಗ್ಗ ರಾಮಣ್ಣ. ಶಿವಮೊಗ್ಗ ದಾನಂ, ಚೆನ್ನಯ್ಯ ಉಪನ್ಯಾಸಕರು, ಹಿರಿಯ ರಂಗಕರ್ಮಿ ತಿಪ್ಪಣ್ಣ, ಅಂಜನಮೂರ್ತಿ, ಪೂರ್ಣಿಮ ಪ್ರಸನ್ನ, ಸುಧೀರ್, ಸಿದ್ರಾಮ ಕುವೆಂಪು ಯೂನಿರ್ವಸಿಟಿ, ಇವರುಗಳಿಗೆ ಪ್ರಧಾನ ಮಾಡಲಾಗುವುದು ಎಂದು ಗಾರಾ ಫೌಂಡೇಶನ್, ಕ್ರಿಯೇಟಿವ್ ಗ್ರೂಪ್, ಭೂಮಿ ಸಂಸ್ಥೆಯ ಆಯೋಜಕರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆಗಾರಾ ಫೌಂಡೇಶನ್, ಕ್ರಿಯೇಟಿವ್ ಗ್ರೂಪ್, ಭೂಮಿ ಸಂಸ್ಥೆವತಿಯಿಂದ ಓ ನಾಟಕ ನಡೆಯಲಿದೆ.
Keladi Rani Chennamma Drama Performance