ಭದ್ರಾವತಿಯಲ್ಲಿ ಎರಡು ಗೋಮಾಂಸ ಮಾರಾಟದ ಮೇಲೆ ಪೊಲೀಸರ ದಾಳಿ-Police raid two beef vendors in Bhadravati

Suddilive || Bhadravathi

ಭದ್ರಾವತಿಯಲ್ಲಿ ಎರಡು ಗೋಮಾಂಸ ಮಾರಾಟದ ಮೇಲೆ ಪೊಲೀಸರ ದಾಳಿ-Police raid two beef vendors in Bhadravati

Police, raid



ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಖಚಿತ ಮಾಹಿತಿಯ ಮೇರೆಗೆ ಭದ್ರಾವತಿ ಎರಡು ಅಕ್ರಮ ಗೋಮಾಂಸದ ಅಡ್ಡೆಗಳ ಮೇಲೆ ಪೊಲೀಸರಿಂದ ದಾಳಿ ನಡೆಸಿದ್ದಾರೆ. 

ಬೆಳಗ್ಗೆ ಭದ್ರಾವತಿ ತಾಲೂಕು ವೀರಪುರ ಗ್ರಾಮದಲ್ಲಿ ನಜೀರ್ ಎಂಬುವರಿಗೆ ಸೇರಿದ ಶೆಡ್ನೊಳಗೆ ಮತ್ತು ಭದ್ರಾವತಿ ನಗರದ  ಅನ್ವರ್ ಕಾಲೋನಿಯಲ್ಲಿ ನಡೆಯುತ್ತಿದ್ದ ಅಕ್ರಮ ಗೋ ಹತ್ಯೆ ಅಡ್ಡಗಳ ಮೇಲೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಭಟನೆ ಹೋರಾಟ ಮನವಿಗಳನ್ನು ನೀಡಿದರು ಸಹ ಭದ್ರಾವತಿಯಲ್ಲಿ ಗೋ ಹತ್ಯೆ ಪ್ರಕರಣಗಳು ನಿಲ್ಲುತ್ತಿಲ್ಲವೆಂದು ಹಿಂದೂ ಸಂಘಟನೆ ಆರೋಪಿಸಿವೆ. 

ಅಕ್ರಮವಾಗಿ ನಡೆಯುತ್ತಿರುವ ಗೋವುಗಳ ಸಾಗಾಟವನ್ನು ತಡೆಯಬೇಕೆಂದು ಭದ್ರಾವತಿಯ ಎಲ್ಲಾ ಪೊಲೀಸ್ ಠಾಣೆಗಳಿಗೂ ಹಿಂದೂ ಸಂಘಟನೆ ಮುಖ್ಯಸ್ಥರು ಮನವಿ ಸಲ್ಲಿಸಿದ್ದಾರೆ.

ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಖಚಿತ ಮಾಹಿತಿಯ ಮೇರೆಗೆ

ಹಳೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ಅಕ್ರಮ  ಕಸಾಯಿ ಖಾನೇ ಮೇಲೆ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್ ನಾಯಕ್ ರವರ ನೇತೃತ್ವದಲ್ಲಿ ದಾಳಿ 13 ಎಳೆ ಕರುಗಳು ಮತ್ತು ಎರಡು ಗೋವುಗಳ ರಕ್ಷಣೆ ಮಾಡಲಾಗಿದೆ. ಗೋವುಗಳ ರಕ್ಷಣೆ ಮಾಡಿದ ಸಬ್ ಇನ್ಸ್ಪೆಕ್ಟರ್ ಮತ್ತು ಅವರ ತಂಡಕ್ಕೆ ಗೋರಕ್ಷಕರಿಂದ ಅಭಿನಂದನೆಗಳು ಮತ್ತು ಧನ್ಯವಾದಗಳು ತಿಳಿಸುತ್ತೇವೆ. 

Police raid two beef vendors in Bhadravati

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close