Suddilive || Shivamogga
ಮಲಗಿದ್ದ ಹಸುವನ್ನೇ ಕಾರಿನಲ್ಲಿ ಹಾಕಿಕೊಂಡು ಕಳುವು ಮಾಡುವ ಯತ್ನ- Attempted theft by putting a sleeping cow in a car
ಗೋಹತ್ಯೆ ಪ್ರಕರಣಗಳು ಠಾಣಾ ವ್ಯಾಪ್ತಿಯಲ್ಲಿ ಮಾಮೂಲಾಗಿದೆ. ಯಾವುದೇ ಕಾನೂನಿನ ಮೂಲಕ ಗೋವುಗಳ ಸಂರಕ್ಷಣೆ ಎಂಬುದು ಕಷ್ಟವೇ ಎಂಬಂತಾಗಿದೆ. ಒಂದು ಖಡಕ್ ದಾಳಿ ಒಂದೇ ಕಸಾಯಿ ಖಾನೆಗಳು ತಲೆ ಎತ್ತದಂತೆ ಮಾಡಬಹುದಾಗಿದೆ.
ಆದರೆ, ಬೀದಿಯ ಮೇಲೆ ಮಲಗಿದ್ದ ಹಸುವನ್ನೇ ಎತ್ತಾಕಿಕೊಂಡು ಹೋಗುವ ಘಟನೆಯೊಂದು ಗಾಜನೂರಿನಲ್ಲಿ ನಡೆದಿದೆ. ಮಲೆನಾಡಿನ ಭಾಗದಲ್ಲಿ ಇದೆಲ್ಲ ಹೊಸದಲ್ಲ. ಸಾಗರ, ಸೊರಬ ಹೀಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹೀಗೆ ಗೋವುಗಳನ್ನ ಕಳ್ಳತನದಿಂದ ಎತ್ತಾಕಿಕೊಂಡು ಹೋದ ಘಟನೆಗಳು ಎಫ್ಐಆರ್ ಆಗಿವೆ.
ಅದರಂತೆ ಗಾಜನೂರಿನಲ್ಲಿ ಮಾ.20 ರಂದು ಬೆಳಗ್ಗಿನ ಜಾವ 3 ಗಂಟೆಗೆ ಗಾಜನೂರಿನ ಬಸವೇಶ್ವರ ಬೀದಿಯಲ್ಲಿ ಮಲಗಿದ್ದ ಹಸುವನ್ನ ಸ್ಯಾಂಟ್ರೋ ವಾಹನದಲ್ಲಿ ಎತ್ತಾಕಿಕೊಂಡು ಹೀಗುವ ಪ್ರಯತ್ನ ನಡೆದಿರುವುದು ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸರ್ಕಾರಿ ನೌಕರರು ಬಸವೇಶ್ವರ ಬೀದಿಯಲ್ಲಿ ಏನು ನಡೆಯುತ್ತಿದೆ ಎಂದು ನೋಡಲು ಮನೆಯಿಂದ ಹೊರಗೆ ಹೋದಾಗ ಸ್ಯಾಂಟ್ರ್ರೋ ಕಾರಿನಲ್ಲಿ ಮೂರರಿಂದ ನಾಲ್ಕು ಜನ ಸೇರಿ ತುಂಬಿಸಿಕೊಳ್ಳಲು ಯತ್ನಿಸಿದ್ದಾರೆ. ಮನೆಯಿಂದ ಹೊರ ಬಂದ ಇವರನ್ನನೋಡಿ ಹಸುವನ್ನಬಿಟ್ಟು ಪರಾರಿಯಾಗಿದ್ದಾರೆ. ಕತ್ತಲಾಗಿದ್ದರಿಂದ ಕಾರಿನ ನಂಬರ್ ನ್ನ ಪತ್ತೆಮಾಡಲು ಇವರಿಗೆ ಸಾಧಗಯವಾಗಿಲ್ಲ. ದೂರು ದಾಖಲಾಗಿದೆ.
Attempted theft by putting a sleeping cow in a car