MLC Dr dhananjaya sarji-ಕ್ರೀಡೆ ಮತ್ತು ಯೋಗ ಕಡ್ಡಾಯ ಮಾಡಿ - ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಸಲಹೆ

Suddilive || Banglore

MLC Dr dhananjaya sarji advised to start sports and yoga in school and collages. ಶಾಲಾ ಕಾಲೇಜುಗಳಲ್ಲಿ  ಕ್ರೀಡೆ ಮತ್ತು ಯೋಗ ಆರಂಭಿಸುವಂತೆ ಎಂಎಲ್ ಸಿ ಡಾ.ಧನಂಜಯ ಸರ್ಜಿ ತಿಳಿಸಿದರು. 

MLC, Dr Dhanajaya sarji


ನಾವೆಲ್ಲ ನಮ್ಮ ಹಿರಿಯರು ಹೇಳಿದ ಮಾತನ್ನು ಕೇಳಿದ್ದೇವೆ " ಓದು ಒಕ್ಕಾಲು-ಬುದ್ದಿ ಮುಕ್ಕಾಲು, ಓದು ಕೆಲಸ ಮಾಡ್ತು-ಬುದ್ದಿ ದೇಶ ಆಳ್ತು" ಅಂತ. ಜೀವನದಲ್ಲಿ ಓದು ಕೇವಲ 25% ಮಾತ್ರ ಆದರೆ ಬುದ್ದಿ 75%. ಎರಡು ಮೆದಳು ಸಮತೋಲನದಲ್ಲಿ ಕಾರ್ಯ ಮಾಡಿದಾಗ ಮಾತ್ರ ಮಕ್ಕಳ ಧೈಹಿಕ ಮಾನಸಿಕ ಆರೋಗ್ಯ ಕೂಡ ಬಲಗೊಳ್ಳುತ್ತೆ. ಈ ನಿಟ್ಟಿನಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಆಗಬೇಕು ಅಂದರೆ ಮಕ್ಕಳಿಗೆ ಕ್ರೀಡೆ ಮತ್ತು ಯೋಗ ತುಂಬಾ ಅವಶ್ಯಕ. ಶಾಲಾ ಕಾಲೇಜುಗಳಲ್ಲಿ ಪಠ್ಯ ಚಟುವಟಿಕೆಗಳ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕಡ್ಡಾಯ ಮಾಡುವುದು ಸೂಕ್ತ ಎಂದು ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಸದನದಲ್ಲಿ ಮಂಗಳವಾರ ಸರ್ಕಾರಕ್ಕೆ ಸಲಹೆ ನೀಡಿದರು. 

 ಈ ಜಗತ್ತಿನ ಸೃಷ್ಟಿಯಲ್ಲಿ ಮನುಷ್ಯರಿಗೆ ಭಗವಂತ ಎರಡು ಕೈ ಕೊಟ್ಟಿದ್ದಾನೆ, ಎರಡು ಕಾಲು, ಎರಡು ಕಿವಿ, ಎರಡು ಕಿಡ್ನಿ, ಎರಡು ಶ್ವಾಸಕೋಶ, ಇವುಗಳ ರೀತಿಯಲ್ಲಿ ಎಡ ಮೆದುಳು ಮತ್ತು ಬಲ ಮೆದುಳು ಎಂಬ ಎರಡು ಮೆದುಳನ್ನು ಕೊಟ್ಟಿದ್ದಾನೆ. ಹಾಗಾಗಿ ಬಲಗಡೆ ಕೈ ಅಲ್ಲಿ ಬರೆಯುವಂತಹ ಮಕ್ಕಳಲ್ಲಿ ಒತ್ತಡ ಎಡಗಡೆ ಮೆದುಳಿನ ಮೇಲೆ ಬೀಳುತ್ತದೆ. 

ಇವತ್ತಿನ ಕಾಲದಲ್ಲಿ ನಾವು ಕೇವಲ ಅಂಕಪಟ್ಟಿಯಲ್ಲಿ ಬರುವ ಅಂಕಗಳಿಗೋಸ್ಕರ ಮಕ್ಕಳನ್ನು ಪಠ್ಯಗಳಲ್ಲಿ ಇರುವ ಪಾಠಗಳನ್ನು ಮಾತ್ರ ಅಭ್ಯಾಸ ಮಾಡಿಸುತ್ತಿರುವುದರಿಂದ ಕೆಳಗಡೆ ಮೆದುಳು ಚಟುವಟಿಕೆ ಇಲ್ಲದೆ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಬರುತ್ತಿದೆ. ಈಗಿನ ಮಕ್ಕಳಲ್ಲಿ ಎಡಗಡೆ ಮೆದುಳು ಒತ್ತಡವನ್ನು ಹೆಚ್ಚು ಅನುಭವಿಸುತ್ತಿರುವದರಿಂದ ಅವರಲ್ಲಿ ಖಿನ್ನತೆ ಜಾಸ್ತಿ ಆಗ್ತಿದೆ, ಆತ್ಮಹತ್ಯೆಗಳು ಜಾಸ್ತಿ ಆಗ್ತಿದೆ. ಆತ್ಮಸ್ಥೈರ್ಯ, ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಬಲಗಡೆ ಮೆದುಳು  ಸುಧಾರಣೆ ಆಗಬೇಕು ಅಂದರೆ ಕ್ರೀಡೆ, ಯೋಗಗಳಂತಹ ಪಠ್ಯೇತರ ಚಟುವಟಿಕೆಗಳು ಕೂಡ ಮಕ್ಕಳಿಗೆ ಅವಶ್ಯಕ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close