Suddilive|| shivamogga
A protest conducted by SDPI for the arrest of sdpi Nation president M.K. Faizy
ಎಸ್ ಡಿಪಿಐ ನ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಝಿ ಅವರನ್ನ ಕೇಂದ್ರ ಸರ್ಕಾರ ಬಂಧಿಸಿರುವುದನ್ನ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಸಂಘಟನೆಯ ಜಿಲ್ಲಾ ಘಟಕ ಪ್ರತಿಭಟಿಸಿದೆ.
ಜಿಲ್ಲಾ ನೂತನ ಅಧ್ಯಕ್ಷ ಜಿಲಾನ್ ಅವರ ಅಧ್ಯಕ್ಷತೆಯಲ್ಲಿ ಪ್ರತಿಭಟನೆ ನಡೆದಿದೆ. ಜಾರಿ ನಿರ್ದೇಶನಾಲಯವು ಫೈಝಿಯವರನ್ನ ಅಕ್ರಮ ಮನಿ ಲಾಂಡರಿಂಗ್ ನಲ್ಲಿ ಬಂಧಿಸಿದ್ದು, ಈ ಬಂಧನವು ಅಕ್ರಮವಾಗಿದೆ ಎಂದು ಖಂಡಿಸಿದೆ.
ಎಂಕೆ ಫೈಝಿಯನ್ನು ಸೋಮವಾರ ರಾತ್ರಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಬಂಧಿಸಲಾಗಿದೆ. .ಫೆಬ್ರವರಿ 28ರಂದು ಕೇರಳದಲ್ಲಿರುವ ಫೈಝಿ ಅವರ ನಿವಾಸದ ಮೇಲೆ ಈಡಿ ಅಧಿಕಾರಿಗಳು ದಾಳಿ ನಡೆಸಿದ್ದರು.