Suddilive || Sagara
Oneside love make young man to commute suicide, ಏಖಮುಖ ಪ್ರೀತಿ ಯುವಕ ಆತ್ಮಹತ್ಯೆ
ಏಖಮುಖ ಲವ್ ನಲ್ಲಿ ಬಿದ್ದಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಪೊಲೀಸ್ ದಾಖಲಾತಿ ಪ್ರಕಾರ ಇದೊಂದು ಅಸಹಜ ಸಾವಾಗಿ ದಾಖಲಾಗಿದೆ.
ವಚನ್ ಎಂಬ 23 ವರ್ಷದ ಯುವಕ ಗಿಣಿವಾರದ ಕಾಡಿನಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಎದೆಯ ಮೇಲೆ ಹುಡುಗಿಯ ಹಚ್ಚೆ ಹಾಕಿಸಿಕೊಂಡಿರುವ ಯುವಕ ಮನಸ್ಸಿಗೆ ಬೇಸರಿಸಿಕೊಂಡು ನೇಣಿಗೆ ಶರಣಾಗಿದ್ದಾನೆ.
ಈ ಘಟನ ನಡೆದು ನಾಲ್ಕು ದಿನಗಳಾಗಿವೆ. ಪ್ರೀತಿಸುತ್ತಿದ್ದ ಯುವತಿಗೆ ತನ್ನ ಪ್ರೀತಿಯನ್ನ ತೋಡಿಕೊಳ್ಳದ ವಚನ್ ಗಿಣಿವಾರದಲ್ಲಿ ಮರವೊಂದಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಯುವತಿಯ ಹೆಸರನ್ನ ಗೌಪ್ಯವಾಗಿಡಲಾಗಿದೆ.
ಏಖಮುಖ ಪ್ರೀತಿಯಲ್ಲೇ ಸಂತೋಷಗೊಂಡಿದ್ದ ಯುವಕ ಎದೆಯ ಮೇಲೆ ಆಕೆಯ ಹೆಸರು ಹಾಕಿಸಿಕೊಂಡಿದ್ದ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.