Suddilive || shivamogga
Ex corporator H.C.Yogish met urban Development Minister Bairathi Suresh and got assured from minister that demands will be fulfilled soon.
ಹೊರಗುತ್ತಿಗೆ ಆಧಾರದ ಮೇರೆಗೆ ಕೆಲಸ ಮಾಡುತ್ತಿರುವ ನೀರುಗಂಟಿಗಳ ಸಮಸ್ಯೆ ಕುರಿತು ಮಾಜಿ ಪಾಲಿಕೆ ಸದಸ್ಯ ಹೆಚ್ ಸಿ ಯೋಗೀಶ್ ಬೆಂಗಳೂರಿನಲ್ಲಿ ಸಚಿವ ಭೈರತಿ ಸುರೇಶ್ ಅವರನ್ನ ಭೇಟಿಯಾಗಿ ಮನವಿ ಸಲ್ಲಿಸಿದ್ದು, ಮನವಿಯ ಪ್ರತಿಫಲದಿಂದಾಗಿ ಸಚಿವರು ಪ್ರತಿಭಟನಾಕಾರರ ಬಹುತೇಕ ಬೇಡಿಕೆಗಳನ್ನ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.
ಶಿವಮೊಗ್ಗ ನಗರದಲ್ಲಿ ಇದೇ ತಿಂಗಳು 3ನೇ ತಾರೀಕಿನಿಂದ ಮಹಾನಗರ ಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರು ತಮ್ಮ ಕೆಲಸವನ್ನು ಖಾಯಂ ಹಾಗೂ ನೇರ ಪಾವತಿ ಗೊಳಿಸಬೇಕೆಂದು ಧರಣಿ ನಡೆಸುತ್ತಿದ್ದು, ಇದರ ವಿಚಾರವಾಗಿ ಇಂದು ಹೆಚ್ ಸಿ ಯೋಗೇಶ್ ರವರ ನೇತೃತ್ವದ ನಿಯೋಗ ಕರ್ನಾಟಕ ರಾಜ್ಯ ನಗರಾಭಿವೃದ್ಧಿ ಸಚಿವರಾದ ಶ್ರೀಯುತ ಬೈರತಿ ಸುರೇಶ್ ರವರನ್ನು ವಿಧಾನಸಭಾ ಕಲಪ ಪ್ರಾರಂಭವಾಗುವ ಮುನ್ನ ಭೇಟಿ ಮಾಡಿ ಶಿವಮೊಗ್ಗ ಮಹಾನಗರ ಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರ ಬೇಡಿಕೆಗಳನ್ನು ಸಚಿವರಿಗೆ ನೀಡಿದರು.
ತದನಂತರ ಮಾನ್ಯ ಸಚಿವರು ಮುಂದಿನ ದಿನಗಳಲ್ಲಿ ನೀರು ಸರಬರಾಜು ನೌಕರರ ಸಂಬಳವನ್ನು ನೇರ ಪಾವತಿ ಅಡಿಯಲ್ಲಿ ಒದಗಿಸಿಕೊಡುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ರವರು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ ರವರು, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಕೆ ರಂಗನಾಥ್ ರವರು, ಸೂಡಾ ಸದಸ್ಯರಾದ ಪ್ರವೀಣ್ ರವರು, ಕಾಂಗ್ರೆಸ್ ಪಕ್ಷದ ಮುಖಂಡರಾದ ಲೋಕೇಶ್ ರವರು, ಶಿವಮೊಗ್ಗ ನೀರು ಸರಬರಾಜು ಇಲಾಖೆ ಹೊರಗುತ್ತಿಗೆ ನೌಕರರಾದ ನಿತಿನ್ ರವರು, ನಾಗರಾಜ್ ರವರು ಉಪಸ್ಥಿತರಿದ್ದರು