Suddilive || shivamogga
Job for ex-army on the basis of out sources, ಮಾಜಿ ಸೈನಿಕರಿಗೆ ಹೊರಗುತ್ತಿಗೆ ಆಧಾರದ ಮೇಲೆ ಉದ್ಯೋಗಾವಕಾಶ
ಎನ್.ಸಿ.ಸಿ, ನಿರ್ದೇಶನಾಲಯ (ಕರ್ನಾಟಕ ಮತ್ತು ಗೋವಾ) ಇವರು ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ರಾಯಚೂರು ಮತ್ತು ಶಿವಮೊಗ್ಗದ ಎನ್.ಸಿ.ಸಿ, ಬೆಟಾಲಿಯನ್‌ಗಳಿಗೆ ಹೆಚ್ಚುವರಿ ತರಬೇತಿ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾಜಿ ಸೈನಿಕರನ್ನು ನೇಮಿಸಿಕೊಳ್ಳಲು ಉದ್ದೇಶಿಸಿದ್ದು, ಭೂ ಸೇನೆಯಿಂದ ಆಕ್ಟೋಬರ್ 2022ರ ನಂತರ ನಿವೃತ್ತರಾಗಿರುವ ಜೆ.ಸಿ.ಒ (ಸುಬೇದಾರ್ ಮತ್ತು ನಾಯಬ್ ಸುಬೇದರ್) ಹಾಗೂ ಹವಾಲ್ದಾರ್ (ಎಮ್ ಎಸಿಪಿ ಹವಾಲ್ದಾರ್‌ಗಳನ್ನು ಪರಿಗಣಿಸುವುದಿಲ್ಲ) ರ‍್ಯಾಂಕ್‌ನ ಮಾಜಿ ಸೈನಿಕ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ
ಸೈನ್ಯದಲ್ಲಿ ದುರ್ನಡತೆ ಸಲುವಾಗಿ ಮತ್ತು ಯಾವುದೇ ವೈದ್ಯಕೀಯ ಕಾರಣಗಳಿಂದ ಸೈನ್ಯದಿಂದ ಬಿಡುಗಡೆಗೊಂಡಿರದ ಆಸಕ್ತ ಮಾಜಿ ಸೈನಿಕರು ಮಾರ್ಚ್ 13 ರ ಒಳಗೆ ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ
jtdirpc.kardte@nccindia.nic.in, ಜಾಲತಾಣ-https://nis.bisag-n.gov.in/nis/downloads-public ಮತ್ತು ನಿರ್ದೇಶನಾಲಯ (ಕರ್ನಾಟಕ ಮತ್ತು ಗೋವಾ) ಕೆಎಸ್‌ಸಿಎಮ್‌ಎಫ್ ಬಿಲ್ಡಿಂಗ್, 4ನೇ ಮಹಡಿ ನಂ-8, ಕನ್ನಿಂಗ್‌ಹ್ಯಾಮ್ ರಸ್ತೆ, ಬೆಂಗಳೂರು-56000 ಅಂಚೆ ವಿಳಾಸವನ್ನು ಸಂಪರ್ಕಿಸಬಹುದಾಗಿದೆ ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
--