Suddilive || Shivamogga
Strict action should be taken against suspended MLAs too - Ayanuru demands
ಸದನದ ಘನತೆ ಹಾಳು ಮಾಡಿದ ಹಿನ್ನಲೆಯಲ್ಲಿ ಅಮಾನತ್ತುಗೊಂಡ ಶಾಸಕರು ಅಮಾತನತ್ತುಗೊಳಿಸಿದ ನಂತರವೂ ನಡೆದುಕೊಂಡ ರೀತಿ ಅಸಹ್ಯಕರವಾಗಿದ್ದು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊನ್ನೆ ನಡೆದ ಅಧಿವೇಶನದ ಕೊನೆಯ ದಿನ ಸದನದಲ್ಲಿ ಮಾನ್ಯ ಶಾಸಕರುಗಳು ವರ್ತಿಸಿದ ರೀತಿ, 18 ಶಾಸಕರುಗಳ ಅಮಾನತ್ತುಗೊಳ್ಳಲು ಕಾರಣವಾದ ನಡವಳಿಕೆಯನ್ನು ಮಾಧ್ಯಮದ ಮೂಲಕ ರಾಜ್ಯದ ಜನತೆ ಗಮನಿಸಿದೆ ಎಂದರು.
ಶಾಸಕರುಗಳು ಅಮಾನತ್ತುಗೊಂಡ ನಂತರವೂ ನಡೆದುಕೊಳ್ಳುತ್ತಿರುವ ರೀತಿ ಅಸವಿಂಧಾನಿಕವೂ ಹಾಗೂ ಸದನದ ಘನತೆ, ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ನೀಡುತ್ತಿರುವ ಹೇಳಿಕೆಗಳು ಅಕ್ಷಮ್ಯ ಅಪರಾಧವೆಂದು ಆರೋಪಿಸಿದರು.
ಸದನದಲ್ಲಿ ಮಂಡಿಸಲಾದ ನಿರ್ಣಯದಂತೆ 18 ಜನ ಶಾಸಕರ ಅಮಾನತ್ತು ಪ್ರಕರಣವು ಘನತವೆತ್ತ ಸದನದ ತೀರ್ಮಾನವೇ ಹೊರತು ಸಭಾಧ್ಯಕ್ಷರ ವ್ಯಕ್ತಿಗತ ತೀರ್ಮಾನವಲ್ಲ. ಸಭಾಧ್ಯಕ್ಷರಾಗಿ ಸದನದ ತೀರ್ಮಾನವನ್ನು ಪ್ರಕಟಿಸುವ ಹೊಣೆಗಾರಿಕೆ ಅವರದಾಗಿದ್ದು, ಶಿಕ್ಷೆಯ ಪ್ರಮಾಣ ಮತ್ತು ಅವಧಿಯನ್ನು ಮಾತ್ರವೇ ಅವರು ನಿರ್ಧರಿಸಬಹುದಾಗಿದೆ. ಅಂತಿಮವಾಗಿ ಇದು ಸದನದ ನಿರ್ಣಯವೇ ಹೊರತು ಸಭಾಧ್ಯಕ್ಷರ ಏಕಪಕ್ಷೀಯ ನಿರ್ಧಾರವಾಗಿರುವುದಿಲ್ಲ ಎಂದರು.
ವಸ್ತುಸ್ಥಿತಿ ಹೀಗಿರುವಾಗ ವಿರೋಧಪಕ್ಷದ ಸದಸ್ಯರು ನಿರ್ಣಯವನ್ನು ಕಾನೂನುಬಾಹಿರ, ತುಘಲಕ್ ದರ್ಭಾರ್ ಎಂದು ಹೀಯಾಳಿಸಿ ಟೀಕಿಸುವುದು, ಮಾಜಿ ಸಚಿವ ಹಾಗು ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ಪತ್ರದಲ್ಲಿ ಪ್ರಯೋಗಿಸಿದ ನಿಂದನೆಯ ಆರೋಪಗಳು, ಸದನಕ್ಕೆ ಮಾಡಿದ ಅವಮಾನ ಮಾತ್ರವಲ್ಲ ಸಂವಿಧಾನಿಕ ಸ್ಥಾನವಾದ ಸಭಾಧ್ಯಕ್ಷರ ಸ್ಥಾನಕ್ಕೂ ಮಾಡಿದ ಅವಮಾನವಾಗಿದೆ. ಇದು ಸದನದ ಗೌರವಕ್ಕೆ ಧಕ್ಕೆ ಉಂಟುಮಾಡಿದಂತಾಗಿದೆ.
ಆದ್ದರಿಂದ ಶಾಸಕರುಗಳು ಮಾಡಿದ ಬಹಿರಂಗ ಆರೋಪ, ದಾಖಲೆ ಸೇರಿರುವ ನಿಂದನೆಯ ಪತ್ರವನ್ನು ಸದನದ ಪಾವಿತ್ರ್ಯತೆ, ಘನತೆ, ಪರಂಪರೆಯ ಹಿನ್ನಲೆಯಲ್ಲಿ ಗಂಭೀರವಾಗಿ ಪರಿಗಣಿಸಿ ಇವರುಗಳ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
Strict action should be taken