Suddilive || Holehonnuru
ಕತ್ತು ಸೀಳಿದ ಸ್ಥಿತಿಯಲ್ಲಿ ಯುವಕ ಶವವಾಗಿ ಪತ್ತೆ -Young man found dead with throat slit
ವ್ಯಕ್ತಿಯೋರ್ವನ ಶವ ಕತ್ತುಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಲ್ಲಿಹಾಳು ಸಮೀಪದ ಬೋಮ್ಮನಕಟ್ಟೆ ಗ್ರಾಮದಲ್ಲಿ ಶ್ರೀನಿವಾಸ (28) ಎಂಬ ಯುವಕನ ಶವಪತ್ತೆಯಾಗಿದ್ದು, ಆತನ ಕುತ್ತಿಗೆ ಸೀಳಲಾಗಿದೆ.
ಕುಡಿತಕ್ಕೆ ದಾಸನಾಗಿದ್ದ ಶ್ರೀನಿವಾಸ್ ತಮ್ಮ ಮನೆಯ ಮೇಲೆ ಆತನ ಶವಪತ್ತೆಯಾಗಿದೆ. ೭ ವರ್ಷಗಳ ಹಿಂದೆ ಶ್ರೀನಿವಾಸ್ ಮದುವೆಯಾಗಿದ್ದ. ಎರಡು ಗಂಡು ಮಕ್ಕಳಿದ್ದರು. ಕೂಲಿಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ನಿನ್ನೆ ರಾತ್ರಿ ಆತನ ಶವ ಪತ್ತೆಯಾಗಿದೆ.
ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು - ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯರ ಮಾಹಿತಿಯ ಪ್ರಕಾರ ಶ್ರೀನಿವಾಸ್ ಅಧಿಕ ಕುಡಿತದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
Young man found dead with throat slit