3 ಹೊಸ ವಲಯಗಳ ಸೃಷ್ಠಿ ಅವೈಜ್ಞಾನಿಕವಂದು ಜೆಡಿಎದ್ ಮನವಿ-The District JDS has submitted a petition

 suddilive || Shivamogga

The District JDS has submitted a petition to the District Magistrate, requesting that the order issued by the Municipal Commissioner on 11/3/2025, creating 3 new zones in the 35 wards of the Shivamogga Municipal Corporation in the interest of smooth administration, be rectified.

Jds, petion

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್ ಗಳನ್ನು ಸುಗಮ ಆಡಳಿತದ ಹಿತದೃಷ್ಟಿಯಲ್ಲಿ 3 ಹೊಸ ವಲಯಗಳನ್ನು ಸೃಜಿಸಿ ದಿನಾಂಕ 11/3/2025 ರಂದು ಪಾಲಿಕೆ ಆಯುಕ್ತರು ಹೊರಡಿಸಿರುವ ಆದೇಶ ನ್ಯೂನ್ಯತೆಗಳಿಂದ ಕೂಡಿದ್ದು ಅದನ್ನ ಸರಿಪಡಿಸುವಂತೆ ಕೋರಿ ಜಿಲ್ಲಾ ಜೆಡಿಎಸ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 

ಶಿವಮೊಗ್ಗ ನಗರದ ನಾಗರಿಕರಿಗೆ ಅನುಕೂಲ ಆಗುವ ದೃಷ್ಟಿಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್ ಗಳನ್ನು ಸುಗಮ ಆಡಳಿತದ ಹಿತದೃಷ್ಟಿಯಲ್ಲಿ 3 ಹೊಸ ವಲಯಗಳನ್ನು ಸೃಜಿಸಿ ದಿನಾಂಕ 11/3/2025 ರಂದು ಪಾಲಿಕೆ ಆಯುಕ್ತರು ಹೊರಡಿಸಿರುವ ಅಧಿಕೃತ ಜ್ಞಾಪನ ಸಂಖ್ಯೆ: ಶಿಮನಪ್ರಾ/ಕಂಶಾ/ಸಿ.ಆರ್/18/2024-24 ರಲ್ಲಿ ಹಲವಾರು ನ್ಯೂನ್ಯತೆಗಳಿರುವ ಕಾರಣ ನಗರದ ನಾಗರಿಕರಿಗೆ ಇದು ಅನಾನುಕೂಲಗಳ ಆಗರವೇ ಆಗಿದೆ.

ಸದರಿ ಅಧಿಕೃತ ಜ್ಞಾಪನದಂತೆ ವಿಂಗಡಿಸಲಾಗಿರುವ ಹೊಸ ವಲಯ 01 ಇದರ ವಲಯ ಕಛೇರಿ ನಗರದ ವಿನೋಬನಗರ ಪೊಲೀಸ್ ಚೌಕಿ ಬಳಿ ಇದ್ದು, ಹೊರಡಿಸಲಾಗಿರುವ ಹೊಸ ಆದೇಶದಂತೆ ಇದರ ವ್ಯಾಪ್ತಿಗೆ ವಾರ್ಡ್ ನಂ. 1, 2, 3, 4, 6, 7, 8, 9, 32, 33, 34 ಬರಲಿವೆ. ಸದರಿ ವಾರ್ಡುಗಳ ಪೈಕಿ 32, 33, ಹಾಗೂ 34 ಕ್ರಮವಾಗಿ ಟಿಪ್ಪು ನಗರ, ಸವಾಯಿ ಪಾಳ್ಯ ಹಾಗೂ ವಿದ್ಯಾನಗರ ದಕ್ಷಿಣ ಆಗಿದ್ದು, ಇವು ತುಂಗಾ ನದಿ ದಡದಲ್ಲಿರುವ ಪ್ರದೇಶಗಳಾಗಿವೆ. ವಲಯ 1ರ ಕಚೇರಿ ವಿನೋಬನಗರದಿಂದ ಸುಮಾರು 5-6 ಕಿ. ಮೀ. ದೂರದಲ್ಲಿವೆ.

ಹಾಗೆಯೇ ವಲಯ 03 ರ ವ್ಯಾಪ್ತಿಗೆ ಬರುವಂತಹ ವಾರ್ಡ್ 12, 13, 14, 15, 16, 17, 18, 19, 23, 24, 25, 27, ಹಾಗೂ 28 ರ ಪೈಕಿ 18 ಮತ್ತು 19 ಕ್ರಮವಾಗಿ ವಿನೋಬನಗರ ದಕ್ಷಿಣ ಹಾಗೂ ಶರಾವತಿ ನಗರ ಆಗಿರುತ್ತದೆ. ವಲಯ 03 ರ ಕಛೇರಿ ಇರುವ ಪ್ರದೇಶಕ್ಕೂ ವಿನೋಬನಗರ ವಾರ್ಡ್ 18 ಹಾಗೂ ಶರಾವತಿ ನಗರ ವಾರ್ಡ್ 19ಕ್ಕೂ ಸುಮಾರು 5-6 ಕಿ. ಮಿ ದೂರವಿರುತ್ತದೆ ಎಂದು ದೂರಲಾಗಿದೆ. 

ವಿನೋಬನಗರದಲ್ಲೇ ಇರುವ ವಲಯ 01 ರ ಕಛೇರಿ ವ್ಯಾಪ್ತಿಗೆ ಬರುವ ವಾರ್ಡ್ 18 ವಿನೋಬನಗರ ದಕ್ಷಿಣ ಹಾಗೂ ವಾರ್ಡ್ 19 ಶರಾವತಿ ನಗರ ಪ್ರದೇಶಗಳನ್ನು ವಲಯ 03ಕ್ಕೆ ಹಾಗೂ ವಲಯ 03 ರ ಕಛೇರಿ ವ್ಯಾಪ್ತಿಗೆ ಬರುವ ವಾರ್ಡ್ 32 ಟಿಪ್ಪು ನಗರ, ವಾರ್ಡ್ 33 ಸವಾಯಿ ಪಾಳ್ಯ ಹಾಗೂ ವಾರ್ಡ್ 34 ವಿದ್ಯಾನಗರ ದಕ್ಷಿಣ ಪ್ರದೇಶಗಳನ್ನು ವಲಯ 01ಕ್ಕೆ ಅದ್ಯಾವ ತಾಂತ್ರಿಕ ಕಾರಣಗಳಿಂದಾಗಿ ಸೇರಿಸಲಾಗಿದೆಯೋ ಗೊತ್ತಿಲ್ಲ. ಆದರೆ ಇದರಿಂದ ನಗರದ ನಾಗರಿಕರಿಗೆ ತೊಂದರೆ ಆಗುತ್ತಿದೆ.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ವಲಯಗಳನ್ನು ಸೃಜಿಸುವಾಗ ಭೌಗೋಳಿಕವಾಗಿ ಶಿವಮೊಗ್ಗ ನಗರವನ್ನು ಪರಿಗಣಿಸಿ ಸಾರ್ವಜನಿಕ ಹಿತದೃಷ್ಟಿಯಲ್ಲಿ ಕ್ರಮಕೈಗೊಳ್ಳಬೇಕಿತ್ತು. ಆದರೆ ಹೊರಡಿಸಲಾಗಿರುವ ಪಾಲಿಕೆ ಆದೇಶವನ್ನು ನೋಡಿದರೆ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಯಾವುದೇ ಹಂತದಲ್ಲಿ ಚಿಂತನೆ ನಡೆಸಿರುವುದು ಕಂಡುಬರುವುದಿಲ್ಲ. 

ಇದೊಂದು ಅವೈಜ್ಞಾನಿಕ ಕ್ರಮವಾಗಿದ್ದು ಇದರಿಂದ ನಾಗರಿಕರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಿ ವಿನೋಬನಗರ ವಾರ್ಡ್ 18 ಹಾಗೂ ಶರಾವತಿ ನಗರ ವಾರ್ಡ್ 19 ಗಳನ್ನು ವಲಯ 01 ರ ವ್ಯಾಪ್ತಿಗೆ ಹಾಗೂ ಟಿಪ್ಪು ನಗರ ವಾಡ್ 32, ಸವಾಯಿ ಪಾಳ್ಯ ವಾರ್ಡ್ 33 ಹಾಗೂ ವಿದ್ಯಾನಗರ ವಾರ್ಡ್ 34 ಇವುಗಳನ್ನು ವಲಯ 03 ರ ವ್ಯಾಪ್ತಿಗೆ ಸೇರಿಸಿ ಸಾರ್ವಜನಿಕ ಹಿತದೃಷ್ಟಿಯಲ್ಲಿ ಸರಿಪಡಿಸಿ ಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ/ಆದೇಶ ನೀಡಬೇಕಾಗಿ ಪಕ್ಷ ಮನವಿಯಲ್ಲಿ ಒತ್ತಾಯಿಸಿದೆ. 

ನಗರದ ಮಾಜಿ ಶಾಸಕರು, ರಾಜ್ಯ ಜೆಡಿಎಸ್ ಉಪಾಧ್ಯಕ್ಷರು ಆದ ಕೆ ಬಿ ಪ್ರಸನ್ನ ಕುಮಾರ್ ರವರ ನೇತೃತ್ವದಲ್ಲಿ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್ ರವರ ಅದ್ಯಕ್ಷತೆಯಲ್ಲಿ ಮಾನ್ಯ ಜಿಲ್ಕಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಇದೆ ಸಂದರ್ಭ ಜಿಲ್ಲಾ ಜೆಡಿಎಸ್ ಮುಖಂಡರಾದ ಉಮಾಶಂಕರ್ ಉಪಾಧ್ಯಯ, ಕೃಷ್ಣ, ವೆಂಕಟೇಶ್, ವಿಜಯ್ ಕುಮಾರ್, ನಗರ ಯುವ ಜೆಡಿಎಸ್ ಅಧ್ಯಕ್ಷ ಸಂಜಯ್ ಕಶ್ಯಪ್, ಜೆಡಿಎಸ್ ಮುಖಂಡರುಗಳಾದ ದಯಾನಂದ್ ಸಾಲಾಗಿ, ಮಾಧವ ಮೂರ್ತಿ, ಸಿದ್ದೇಶ್, ಗೋವಿಂದ ರಾಜ್, ಗೋಪಿ ಮೊದಲಿಯರ್, ನಿಹಾಲ್ ಖಾನ್, ನೀಲು, ರುದ್ರೇಶ್, ಮೂರ್ತಿ, ಪ್ರಪುಲ, ಚಂದ್ರಶೇಖರ್, ಚನ್ನು, ಬಸಪ್ಪ, ಪುಷ್ಪ, ಲಕ್ಷ್ಮಿ, ಸರಿತ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

The District JDS has submitted a petition

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close