ಆಶಾ ಕಾರ್ಯಕರ್ತರಿಗೂ ಪ್ರೋತ್ಸಹಧನ ನೀಡಿ- Give incentives to ASHA workers too

 Suddilive || shivamogga

ಆಶಾ ಕಾರ್ಯಕರ್ತರಿಗೂ ಪ್ರೋತ್ಸಹಧನ ನೀಡಿ- Give incentives to ASHA workers too  

Incentives, ASHA workers



ಅಂಗನವಾಡಿ-ಬಿಸಿಯೂಟ ಕಾರ್ಯಕರ್ತರಿಗೆ ಗೌರವಧನ 1000  ರೂ.ಗೆ ಏರಿಸಿದಂತೆ  ರಾಜ್ಯಾದ್ಯಂತ ಆಶಾಕಾರ್ಯಕರ್ತರಿಗೂ 1000 ರೂ ಹೆಚ್ಚಿಸುವಂತೆ ಆಗ್ರಹಿಸಿ ಸಂಯುಕ್ತ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿದರು.

ಅಂಗನವಾಡಿ-ಬಿಸಿಯೂಟ ಕಾರ್ಯಕರ್ತರಿಗೆ ಪ್ರೋತ್ಸಹ ಧನವನ್ನ 1000 ರೂ.ಗೆ ಹೆಚ್ಚಿಸುವಂತೆ ಜನವರಿಯಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟಿಸಿದಾಗ ಆರೋಗ್ಯ ಸಚಿವರು ಮನವಿ ಸ್ವೀಕರಿಸಿ ಸಭೆ ನಡೆಸಿ ಕೆಲ ತೀರ್ಮಾನ‌ ಕೈಗೊಂಡಿದ್ದರು.

ಏಪ್ರಿಲ್ ನಿಂದ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹಧನವನ್ನ 10 ಸಾವಿರ ರೂಗೆ ಏರಿಸಿ ಕಾಂಪೋನೆಂಟ್ ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಇನ್ಸೆಂಡಿವ್ ಕೂಡ ಕೊಡಲಾಗುವುದು ಎಂದು ತೀರ್ಮಾನಿಸಿ ಪೂರ್ವಭಾವಿ ಸಭೆ ನಡೆಸುವುದಾಗಿ ಭರವಸೆ ನೀಡಲಾಯಿತು. 

ಪೂರ್ವಭಾವಿ ಸಭೆಯನ್ನ ನಡೆಸದೆ ಕೈಕೊಡಲಾಯಿತು. ಈಗ 2.5 ಲಕ್ಷ ಅಂಗನವಾಡಿ ಬಿಸಿಯೂಟ ಕಾದಗಯಕರ್ತರಿಗೆ 1000 ಹೆಚ್ಚಿಸಲಾಗಿದೆ. ಅದರಂತೆ 42 ಸಾವಿರ ಆಶಾಕಾರ್ಯಕರ್ತರಿಗೆ 1000 ರೂ. ಹೆಚ್ಚಿಸಿ ಬಜೆಟ್ ನಲ್ಲಿ ಸೇರಿಸಿ ಆದೇಶಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯನ್ನ ರಾಜ್ಯ ಸಂಯುಕ್ತ  ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ರಾಜೇಶ್ವರಿ ಕಾರ್ಯದರ್ಶಿ ಚಂದ್ರಕಲಾ ಮೊದಲಾದವರು ಉಪಸ್ಥಿತರಿದ್ದರು. 

Give incentives to ASHA workers too  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close