suddilive || Shivamogga
The visit of the Deputy-lokayukta continued in the early hours of this morning in Shivamogga. As Sub-Inspector Phanindra left the IB this morning, he visited the police cabin in the IB circle and the dumping yard in Hanumanthapur-Anupinakatte, relieving the officials of their sweat.
ಶಿವಮೊಗ್ಗದಲ್ಲಿ ಬೆಳ್ಳಂಬೆಳಿಗ್ಗೆ ಉಪಲೋಕಾಯುಕ್ತರ ವಿಸಿಟ್ ಮುಂದುವರೆದಿದೆ. ಇಂದು ಬೆಳಿಗ್ಗೆ ಉಪಲೋಕಾಯುಕ್ತ ಫಣೀಂದ್ರ ಐಬಿಯಿಂದ ಹೊರಬರುತ್ತಿದ್ದಂತೆ ಐಬಿವೃತ್ತದಲ್ಲಿರುವ ಪೊಲೀಸ್ ಕ್ಯಾಬಿನ್ ಮತ್ತು ಹನುಮಂತಾಪುರ-ಅನುಪಿನಕಟ್ಟೆಯ ಡಂಪಿಂಗ್ ಯಾರ್ಡ್ ಗೆ ವಿಸಿ್ ಮಾಡಿ ಅಧಿಕಾರಿಗಳ ಬೆವರು ಇಳಿಸಿದ್ದಾರೆ.
ಮೊದಲಿಗೆ ಪೊಲೀಸ್ ಕ್ಯಾಬನ್ ಗೆ ಭೇಟಿ ನೀಡಿ ಕ್ಯಾಬಿನ್ ಬಳಸಿಕೊಳ್ಳುವ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಜಿಕೆಗೆ ಸೂಚಿಸಿದರು. ದಿಡೀರ್ ಎಂದು ಐಬಿ ವೃತ್ತದಲ್ಲಿ ನಿಲ್ಲಿಸಿದ ಉಪಲೋಕಾಯುಕ್ತರು ಐಬಿ ಕ್ಯಾಬಿನ್ ನ್ನ ಪೊಲೀಸರು ಬಳಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. ಸ್ಮಾರ್ಟ್ ಸಿಟಿಯ ಅಡಿ ನಗರದಲ್ಲಿ 18 ಕ್ಯಾಬಿನ್ ನಿರ್ಮಿಸಲಾಗಿದೆ. ಒಂದಕ್ಕೆ 8-9 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವುದು ಉಪಲೋಕಾಯುಕ್ತರಿಗೆ ಅಧಿಕಾರಿಗಳು ತಿಳಿಸಿದರು.
ಎದುರನಲ್ಲೇ ಇದ್ದ ಎಸ್ಪಿ ಮತ್ತು ಡಿಸಿಗೆ ಪ್ರಶ್ನಿಸಿದ ಉಪಲೋಕಾಯುಕ್ತರು ಯಾಕೆ ಕ್ಯಾಬಿನ್ ಬಳಸುತ್ತಿಲ್ಲ ಎಂದು ಪ್ರಶ್ನಿಸಿದರು. ಈ ಕುರಿತು ಉತ್ತರಿಸಿದ ಎಸ್ಪಿ ಬಂದೋ ಬಸ್ತ್ ಸಮಯದಲ್ಲಿ ಬಳಸಿಕೊಳ್ಳಲಾಗುತ್ತಿದೆ. ದಿನ ನಿತ್ಯ ಬಳಕೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ಸಾರ್ವಜನಿಕ ಹಣವನ್ನ ಬಳಕೆ ಮಾಡಿಕೊಳ್ಳಬೇಕು. ಸಾರ್ವಜನಿಕರ ಹಣದಲ್ಲಿ ನಿರ್ಮಿಸಿದ ಕ್ಯಾಬಿನ್ ನ್ನ ಯಾರಾದರು ನಾಗರೀಕರು ಬಳಕೆಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸದಂತೆ ಇರಬಾರದು ಎಂದು ತಿಳಿಸಿದರು.
ಡಂಪಿಂಗ್ ಯಾರ್ಡ್ ವಿಸಿಟ್
ನಂತರ ಹನುಮಂತಾಪುರ- ಅನುಪಿನ ಕಟ್ಟೆಯಲ್ಲಿರುವ ಪಾಲಿಕೆಯ ಕಸದ ಡಂಪಿಂಗ್ ಯಾರ್ಡ್ ಗೆ ಭೇಟಿ ನೀಡಿದ ಉಪಲೋಕಾಯುಕ್ತರು ಪರಿಶೀಲಿಸಿದರು. 10 ವರ್ಷದ ಕಸದ ಹಾಗೆ ಇರುವ ಬಗ್ಗೆ ಉಪಲೋಕಾಯುಕ್ತ ಫಣೀಂದ್ರ ಪಾಲಿಕೆ ಆಯುಕ್ತರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಎಲ್ಲಾ ವಿಧಾನದಲ್ಲೂ ವಿಫಲವಸಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಿನ ಕಸ ಸಂಗ್ರಹ, ಅದನ್ನ ಗೊಬ್ಬರವನ್ನಾಗಿ ಮಾಡಿಕೊಳ್ಳುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. 200-300 ಟನ್ ಕಸಗಳು ದಿನ ಸಿಗಲಿದೆ. ಇದನ್ನ ಗೊಬ್ಬರವನ್ನಾಗಿ ಪರಿವರ್ತಿಸಲು ಪ್ರತಿದಿನ 600 ಟನ್ ಕಸ ಬೇಕು. 600 ಟನ್ ಉತ್ಪಾದನೆ ಆದರೆ ಶಿವಮೊಗ್ಗಕ್ಕೆ ಗ್ಯಾಸ್ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದರು.
ಡಂಪಿಂಗ್ ಯಾರ್ಡ್ ನಿಂದ ಮಳೆಗಾಲದಲ್ಲಿ ಕಲುಷಿತ ನೀರು ಹಳ್ಳದ ಮೂಲಕ ತುಂಗ ನದಿಗೆ ಸೇರುತ್ತಿದೆ. ನಾಯಿಗಳ ಕಾಟ, ವಾಸನೆ ಬಗ್ಗೆ ನೊಣದ ಕಾಟದ ಬಗ್ಗೆ ಸ್ಥಳೀಯರಾದ ಪ್ರಶಾಂತ್ ಮತ್ತು ನವೀನ್ ದೂರಿದರು. ಈ ಬಗ್ಗೆ ಸರ್ವೆ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳು ತಿಳಿಸಿದರು.ಹಸಿ ಕಸದಿಂದ ನೊಣ ಅಟ ಹೆಚ್ಚಾಗಿದೆ.