ಸಿಸಿಟಿವಿ ಫೂಟೇಜ್ ವಿಚಾರದಲ್ಲಿ ಉಪಲೋಕಾಯುಕ್ತರು ತೇಪೆ ಹಚ್ಚಿದ್ರಾ?The counter-allegations between KSRTC and the police

 Suddilive || shivamogga

The counter-allegations between KSRTC and the police regarding the CCTV footage at the KSRTC bus stand have continued. The Upalokayukta seems to have patched up the counter-allegations.


KSRTC, cctv phootage

ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಸಿಸಿ ಟಿವಿ ಫೂಟೇಜ್ ವಿಚಾರದಲ್ಲಿ ಕೆಎಸ್ ಆರ್ ಟಿಸಿ ಮತ್ತು ಪೊಲೀಸರ ನಡುವೆ ಆರೋಪ ಪ್ರತ್ಯಾರೋಪ ಮುಂದು ವರೆದಿದೆ.  ಆರೋಪ ಪ್ರತ್ಯಾರೋಪಕ್ಕೆ  ಉಪಲೋಕಾಯುಕ್ತರು ತೇಪೆ ಹಚ್ಚಿದಂತೆ ಕಂಡುಬಂದಿದೆ. 

ಇಂದು ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಉಪಲೋಕಾಯುಕ್ತ ಭೇಟಿ ನೀಡಿ ಶೌಚಾಲಯದಲ್ಲಿ ಹಣ ಹೆಚ್ಚಿಗೆ ಪಡೆಯುತ್ತಿರುವ ಬಗ್ಗೆ, ಕುಡಿಯುವ ನೀರಿನ ಘಟಕ ಮತ್ತು ಸಿಸಿ ಟಿವಿ ಫೂಟೇಜ್ ಗಳ ಬಗ್ಗೆ ಪರಿಶೀಲನೆ ನಡೆಸಿದರು. 

ಶೌಚಾಲಯದಲ್ಲಿ ಹಣ ಸಂಗ್ರಹದ ಬಗ್ಗೆ ದೂರು ಬಂದಿದೆ ಎಂದು ಗುತ್ತಿಗೆ ದಾನಿಗೆ ಸೂಚಿಸಿದರು. ಹೊರಗಿನ ಶೌಚಾಲಯದಲ್ಪಿ ಸಿಸಿಟಿವಿ ಫೂಟೇಜ್ ಹಾಕಲು ಸೂಚಿಸಿದರು.‌ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳುವಿನ ವಿಚಾರದಲ್ಲಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಡಿವಿಜನ್ ಅಧಿಕಾರಿಗಳು ಮತ್ತು ಪೊಲೀಸರ ನಡುವೆ ಸಿಸಿ ಟಿವಿ ಫೂಟೇಜ್ ಹಾಕಿಸುವ ವಿಚಾರದಲ್ಲಿ ತಿಕ್ಕಾಟ ಕಂಡು ಬಂದಿದೆ.

ಬಸ್ ನಿಲ್ದಾಣದ ಪೊಲೀಸ್ ಸಿಬ್ಬಂದಿ ಒಬ್ವರು ಸಿಸಿ ಟಿವಿ  12 ಹಾಕಿಸಬೇಕಿತ್ತು ಅದಲ್ಲಿ 8 ವರ್ಕ್ ಮಾಡ್ತಾ ಇದೆ ಎಂದು ತಿಳಿಸಿದರು. ಸಿಸಿ ಟಿವಿ ವೀಕ್ಷಣೆಯ ಕೊಠಡಿಗೆ ನುಗ್ಗಿದ ಲೋಕಾಯುಕ್ತರು ಪರಿಶೀಲಿಸಿ ಟಿವಿ ವೀಕ್ಷಣೆಗೆ ಸಿಬ್ವಂದಿಗಳನ್ನ ನೇಮಿಸಿ ಪೊಲೀಸರ ವಿಸಿಟ್ ಮಾಡಲು ಎಸ್ಪಿ ಮತ್ತು ಕೆಎಸ್ಆರ್ ಟಿಸಿ ಡಿಸಿಗೆ ಸೂಚಿಸಿದರು. 

ಅಚ್ಚರಿ ಎಂದರೆ ನಿಲ್ದಾಣದಲ್ಲಿ ನಿತ್ರಾಣಗೊಂಡಿದ್ದ ಕುಡಿಯುವ ನೀರಿನ ಘಟಕದಲ್ಲಿ ಉಪಲೋಕಾಯುಕ್ತರ ಭೇಟಿ ಹಿನ್ನಲೆಯಲ್ಲಿ ಗಂಗಾಜಲ ಉಕ್ಕಿ ಬಂದಿರುವುದೇ ಗಮನಸೆಳೆದ ವಿಷಯವಾಗಿದೆ.

The counter-allegations between KSRTC and the police

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close