ವಿದ್ಯಾನಗರದ ರೈಲ್ವೆ ಓವರ್ ಬ್ರಿಡ್ಜ್ ಮೇಲೆ ವೀಲಿಂಗ್ ಬಿತ್ತು ದಂಡ-Wheeling on the Railway over Bridge in Vidyanagar

 Suddilive || shivamogga

A  traffic police officer who recorded a video of himself wheeling on the Railway over Bridge in Vidyanagar, Shivamogga and went viral has been identified and fined by the court.

Wheeling, railway over bridge


ಶಿವಮೊಗ್ಗದ ವಿದ್ಯಾನಗರ ರೈಲ್ವೆ ಓವರ್ ಬ್ರಿಡ್ಜ್  ಮೇಲೆ ವೀಲಿಂಗ್ ಮಾಡುವ ವಿಡಿಯೋವೊಂದನ್ನ ರೆಕಾರ್ಡ್ ಮಾಡಿ ವೈರಲ್ ಮಾಡಿದ ಬೆನ್ನಲ್ಲೇ ಪೂರ್ವ ಸಂಚಾರಿ ಪೊಲೀಸರು ಆತನನ್ನ ಪತ್ತೆಹಚ್ಚಿ ನ್ಯಾಯಾಲಯದಿಂದ ದಂಡ ವಿಧಿಸುವಂತೆ ಮಾಡಿದ್ದಾರೆ. 

ವಿದ್ಯಾನಗರದ ರೈಲ್ವೆ ಓವರ್ ಬ್ರಿಡ್ಜ್ ಮೇಲೆ ಕೆಎ 14 ಎಲ್ 8242 ಕ್ರಮ ಸಂಖ್ಯೆಯ ಟಿವಿಎಸ್ ಫಿಯಾರೋ ವಾಹನವನ್ನ  ವೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಈ ವಿಡಿಯೋ ಪೊಲೀಸರ ಕೈಗೆ ಸಿಕ್ಕಿದೆ. ವಿಡಿಯೋದಲ್ಲಿ ವೀಲಿಂಗ್ ಮಾಡಿದವನನ್ನ‌ ಠಾಣೆಗೆ ಕರೆತಂದು ವಿಚಾರಿಸಲಾಗಿದೆ.

ಕೆಳಗಿನ ತುಂಗ ನಗರದ ನವಾಸಿ ಮೊಹಮ್ಮದ್ ತಬ್ರಕ್ ಉಲ್ಲಾ (23) ಎಂದು ತಿಳಿಸಿದ್ದು ರಾಷ್ಟ್ರೀಯ ಹೆದ್ದಾರಿಯ ರೈಲ್ವೆ ಓವರ್ ಬ್ರಿಡ್ಜ್ ಮೇಲೆ ವೀಲಿಂಗ್ ಮಾಡಿರುವುದನ್ನ ಒಪ್ಪಿಕೊಂಡಿದ್ದಾನೆ. ಆತನನ್ನ ನ್ಯಾಯಾಲಯಕ್ಕೆ ಹಾಜರಿಪಡಿಸಲಾಗಿದೆ. ವೀಲಿಂಗ್ ಮಾಡಿದವನಿಗೆ 125000/- ರೂ.ದಂಡ ವಿಧಿಸಲಾಗಿದೆ. ಈ ಕಾರ್ಯಾಚರಣೆ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ಕುಮಾರ್ ಮಠಪತಿ ಅವರ ನೇತೃತ್ವದಲ್ಲಿ ನಡೆದಿದೆ. 

Wheeling on the railway over bridge in Vidhyanagara

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close