suddilive || shivamogga
Vikrant, a wild animal that was causing trouble in the forest villages of Arehalli in Belur, Hassan district, is captured and likely to be brought to Sakrebai in Shivamogga late tonight.
ಹಾಸನ ಜಿಲ್ಲೆಯ ಬೇಲೂರಿನ ಅರೇಹಳ್ಳಿಯ ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ವಿಕ್ರಾಂತ್ ಎಂಬ ಕಾಡನೆಯನ್ನು ಸೆರೆ ಹಿಡಿದು ಶಿವಮೊಗ್ಗದ ಸಕ್ರೆಬೈಲಿಗೆ ಇಂದು ತಡ ರಾತ್ರಿ ಕರೆತರುವ ಸಾಧ್ಯತೆಯಿದೆ.
ಕಳೆದ ಮೂರು – ನಾಲ್ಕು ದಿನದಿಂದ ವಿಕ್ರಾಂತ್ ಎಂಬ ಆನೆಯನ್ನು ಸೆರೆಹಿಡಿಯಲು ಅರಣ್ಯ ಅಧಿಕಾರಿಗಳು ಹರಸಾಹಸ ಪಟ್ಟಿದ್ದರು. ಅರೇಹಳ್ಳಿಯಲ್ಲಿ ಒಟ್ಟು ಮೂರು ಆನೆಗಳು ಉಪಟಳ ನೀಡಿದ್ದು ವಿಕ್ರಾಂತ್ ಇಬ್ಬರ ಸಾವಿಗೆ ಕಾರಣವಾಗಿತ್ತು. ವಿಕ್ರಾಂತ್ ಗೆ ಅರವಳಿಕೆ ನೀಡಿ ಕಾಡಾನೆಗಳಿಂದ ಬೇರ್ಪಡಿಸಲಾಗಿತ್ತು.
ಕಾರ್ಯಾಚರಣೆಯ ವೇಳೆ ಬೆಳೆ ನಾಶ, ಸಂಚರಿಸುವ ವಾಹನಗಳ ಮೇಲೆ ದಾಳಿ ನಡೆಸಿದ್ದ ವಿಕಾಂತ್ ನನ್ನ ಸಕಲೇಶಪುರ ತಾಲೂಕು, ಬೆಳಗೋಡು ಹೋಬಳಿ ಬ್ಯಾದನೆ ಗ್ರಾಮದ ಬಳಿ ಕಾಫಿ ತೋಟದಲ್ಲಿ ಸೆರೆ ಹಿಡಿಯಲಾಗಿತ್ತು. ಈ ಆನೆ ಸೆರೆ ಹಿಡಿಯಲು ದುಬಾರೆಯ ಆನೆಗಳನ್ನ ಬಳಸಲಾಗಿದೆ.
ವಿಕ್ರಾಂತ್ ನನ್ನು ಶಿವಮೊಗ್ಗದ ಸಕ್ಕರೆ ಬೈಲು ಆನೆ ಬಿಡಾರಕ್ಕೆ ಕರೆದುಕೊಂಡು ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಡಿಎಫ್ ಒ ಸೌರಭ್ ಕುಮಾರ್ ಹಾಗೂ ಅನೇಕ ಅರಣ್ಯ ಅಧಿಕಾರಿಗಳು,ಆನೆ ಮಾವುತರು ಭಾಗಿಯಾಗಿದ್ದರು.
Vikrant, a wild animal