Suddilive || Maluru
Woman's dead body found on the banks of Mrugavadhe river!ಮೃಗವಧೆ ನದಿಯ ದಡದಲ್ಲಿ ಮಹಿಳೆಯ ಶವ ಪತ್ತೆ
ತಾಲೂಕಿನ ತೀರ್ಥಕ್ಷೇತ್ರಗಳಲ್ಲಿ ಒಂದಾದ ಮೃಗಾವಧೆಯ ನದಯ ತೀರದ ಬಳಿ ಮಹಿಳೆಯ ಶವಪತ್ತೆಯಾಗಿದೆ. ಈ ಶವದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಅಸ್ವಸ್ಥರಾಗಿ ಬಿದ್ದಿದ್ದ ಮಹಿಳೆಯೊಬ್ಬರನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಮಹಿಳೆ ಮೃತಪಟ್ಟಿರುವುದು ಗೊತ್ತಾಗಿದೆ. ನಂತರ 108 ಆಂಬುಲೆನ್ಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಮಹಿಳೆ ಮೃತಪಟ್ಟಿರುವುದುನ್ನ ಖಾತರಿ ಪಡಿಸಿಕೊಂಡು ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
ಮಹಿಳೆಯ ಬಗ್ಗೆ ಆಗಲಿ ಅಥವಾ ಅವರ ಸಾವಿನ ಬಗ್ಗೆ ಕಾರಣ ಸ್ಪಷ್ಟವಾಗಿಲ್ಲ. ಮಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.